Friday, October 18, 2024
Google search engine
Homeಮುಖಪುಟಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ - 38 ಮಂದಿಗೆ ಮರಣ ದಂಡನೆ

ಅಹಮದಾಬಾದ್ ಸರಣಿ ಬಾಂಬ್ ಸ್ಫೋಟ ಪ್ರಕರಣ – 38 ಮಂದಿಗೆ ಮರಣ ದಂಡನೆ

ಇತಿಹಾಸದಲ್ಲಿ ಮೊದಲ ಬಾರಿಗೆ 38 ಜನರಿಗೆ ಒಟ್ಟಿಗೆ ಮರಣದಂಡನೆ ವಿಧಿಸಲಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 26 ಮಂದಿಗೆ ಮರಣದಂಡನೆ ವಿಧಿಸಲಾಗಿತ್ತು. ಆರೋಪಿಗಳು ಪ್ರಸ್ತುತ ಅಹಮದಾಬಾದ್, ಮಧ್ಯಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದ ಜೈಲುಗಳಲ್ಲಿದ್ದಾರೆ.

2008ರ ಅಹಮದಾಬಾದ್ ಸರಣಿ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ 38 ಅಪರಾಧಿಗಳಿಗೆ ಗುಜರಾತ್ ನ ವಿಶೇಷ ನ್ಯಾಯಾಲಯ ಶುಕ್ರವಾರ ಮರಣದಂಡನೆ ವಿಧಿಸಿದೆ.

ವಿಶೇಷ ನ್ಯಾಯಾಲಯದ ನ್ಯಾಯಾಧೀಶ ಎ ಆರ್ ಪಟೇಲ್ ಅವರು ಪ್ರಕರಣದಲ್ಲಿ ಇತರ 11 ಅಪರಾಧಿಗಳಿಗೆ ಅವರ ಜೀವಾವಧಿ ಶಿಕ್ಷೆ ವಿಧಿಸಿದರು.

ಫೆಬ್ರವರಿ 8 ರಂದು ನ್ಯಾಯಾಲಯವು ಪ್ರಕರಣದಲ್ಲಿ 49 ಆರೋಪಿಗಳನ್ನು ತಪ್ಪಿತಸ್ಥರು ಎಂದು ಘೋಷಿಸಿತ್ತು. ಇತರೆ 28 ಆರೋಪಿಗಳನ್ನು ಆರೋಪದಿಂದ ಖುಲಾಸೆಗೊಳಿಸಿತ್ತು.

ಜುಲೈ 26, 2008 ರಂದು ಅಹಮದಾಬಾದ್ ನಗರದಲ್ಲಿ 20 ಸ್ಫೋಟಗಳು ಸಂಭವಿಸಿ 56 ಜನರು ಮರಣ ಹೊಂದಿದ್ದರು. 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 

ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ 77 ಆರೋಪಿಗಳ ವಿರುದ್ಧದ ವಿಚಾರಣೆಯನ್ನು ನ್ಯಾಯಾಲಯ ಮುಕ್ತಾಯಗೊಳಿಸಿತ್ತು.

ಉಸ್ಮಾನ್ ಅಗರಬತ್ತಿವಾಲಾ ಹೊರತುಪಡಿಸಿ ಎಲ್ಲಾ ಅಪರಾಧಿಗಳಿಗೆ 2.85 ಲಕ್ಷ ರೂ ದಂಡ ವಿಧಿಸಿತ್ತು. ಐಪಿಸಿ, ಯುಎಪಿಎ, ಸ್ಫೋಟಕ ವಸ್ತುಗಳ ಕಾಯ್ದೆ, ಸಾರ್ವಜನಿಕ ಆಸ್ತಿ ಹಾನಿ ತಡೆ ಕಾಯ್ದೆ ಮತ್ತು ಶಸ್ತ್ರಾಸ್ತ್ರ ಕಾಯ್ದೆಯಡಿ 26 ವಿವಿಧ ಅಪರಾಧಗಳಿಗಾಗಿ ಅಗರಬತ್ತಿವಾಲಾ ಅವರಿಗೆ 2.88 ಲಕ್ಷ ರೂ. ಈ ದಂಡ ವಿಧಿಸಲಾಗಿತ್ತು.

ಇತಿಹಾಸದಲ್ಲಿ ಮೊದಲ ಬಾರಿಗೆ 38 ಜನರಿಗೆ ಒಟ್ಟಿಗೆ ಮರಣದಂಡನೆ ವಿಧಿಸಲಾಗಿದೆ. ಈ ಹಿಂದೆ ಮಾಜಿ ಪ್ರಧಾನಿ ರಾಜೀವ್ ಗಾಂಧಿ ಹತ್ಯೆ ಪ್ರಕರಣದಲ್ಲಿ 26 ಮಂದಿಗೆ ಮರಣದಂಡನೆ ವಿಧಿಸಲಾಗಿತ್ತು. ಆರೋಪಿಗಳು ಪ್ರಸ್ತುತ ಅಹಮದಾಬಾದ್, ಮಧ್ಯಪ್ರದೇಶ, ಬಿಹಾರ ಮತ್ತು ಮಹಾರಾಷ್ಟ್ರದ ಜೈಲುಗಳಲ್ಲಿದ್ದಾರೆ.

ಆರೋಪಿಗಳ ಪರ ವಕೀಲ ಖಾಲಿದ್ ಶೇಖ್, ‘‘ಈ ತೀರ್ಪನ್ನು ಅಧ್ಯಯನ ಮಾಡಿದ ನಂತರ ನಮ್ಮ ಕಕ್ಷಿದಾರರು ಹೇಳಿದರೆ ನಾವು ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುತ್ತೇವೆ ಎಂದರು.
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular