Friday, January 3, 2025
Google search engine
Homeಮುಖಪುಟಪೆಟ್ರೋಪೊಲಿಸ್ ನಗರದಲ್ಲಿ ಪ್ರವಾಹ, ಮಣ್ಣು ಕುಸಿದು 94 ಮಂದಿ ಸಾವು

ಪೆಟ್ರೋಪೊಲಿಸ್ ನಗರದಲ್ಲಿ ಪ್ರವಾಹ, ಮಣ್ಣು ಕುಸಿದು 94 ಮಂದಿ ಸಾವು

ಪರ್ವತ ಪ್ರದೇಶದಲ್ಲಿ ನೆಲೆಸಿರುವ ಜರ್ಮನ್ ಪ್ರಭಾವಿತ ನಗರದ ಮೇಯರ್ ರೂಬೆನ್ಸ್ ಬೊಮ್ ಟೆಂಪೊ ಅವರು ಮಣ್ಣಿನಡಿ ಸಿಲುಕಿರುವ ದೇಹಗಳೆಷ್ಟು ಎಂಬುದನ್ನು ತಿಳಿಸಿಲ್ಲ. ಆದರೂ ಮಣ್ಣಿನಲ್ಲಿ ಹೂತುಹೋಗಿರುವ ವ್ಯಕ್ತಿಗಳ ಪತ್ತೆಗೆ ಶೋಧ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಮಾಧ್ಯಗಳು ವರದಿ ಮಾಡಿವೆ.

ಪ್ರವಾಹ ಮತ್ತು ಮಣ್ಣು ಕುಸಿತದಿಂದ ಮನೆಗಳು ಮತ್ತು ಕಾರುಗಳು ಪ್ರವಾಹದಲ್ಲಿ ಕೊಚ್ಚಿಹೋಗಿದ್ದು 94 ಮಂದಿ ಮೃತಪಟ್ಟಿರುವ ಘಟನೆ ರಿಯೊ ಡಿ ಜನೈರೋ ರಾಜ್ಯ ಸರ್ಕಾರ ಪೆಟ್ರೋಪೊಲಿಸ್ ನಗರದಲ್ಲಿ ಸಂಭವಿಸಿದೆ. ಮಣ್ಣು ಕುಸಿತದಿಂದ ಎಷ್ಟು ದೇಹಗಳು ಸಿಲುಕಿವೆ ಎಂಬುದು ಇದುವರೆಗೂ ಖಚಿತಪಡಿಸಿಲ್ಲ.

ಪರ್ವತ ಪ್ರದೇಶದಲ್ಲಿ ನೆಲೆಸಿರುವ ಜರ್ಮನ್ ಪ್ರಭಾವಿತ ನಗರದ ಮೇಯರ್ ರೂಬೆನ್ಸ್ ಬೊಮ್ ಟೆಂಪೊ ಅವರು ಮಣ್ಣಿನಡಿ ಸಿಲುಕಿರುವ ದೇಹಗಳೆಷ್ಟು ಎಂಬುದನ್ನು ತಿಳಿಸಿಲ್ಲ. ಆದರೂ ಮಣ್ಣಿನಲ್ಲಿ ಹೂತುಹೋಗಿರುವ ವ್ಯಕ್ತಿಗಳ ಪತ್ತೆಗೆ ಶೋಧ ಕಾರ್ಯ ಸಮರೋಪಾದಿಯಲ್ಲಿ ನಡೆಯುತ್ತಿದೆ ಎಂದು ಮಾಧ್ಯಗಳು ವರದಿ ಮಾಡಿವೆ.

ದುರಂತದಲ್ಲಿ ಎಷ್ಟು ಹಾನಿಯಾಗಿದೆ ಎಂಬ ಬಗ್ಗೆ ಮಾಹಿತಿ ತಿಳಿದುಬಂದಿಲ್ಲ. ಆದರೆ ಇದು ಕಠಿಣ ಮತ್ತು ಕಷ್ಟದ ದಿನ ಎಂದು ಬೊಮ್ ಟೆಂಪೋ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಪೆಟ್ರೋ ಪೊಲಿಸ್ ನಲ್ಲಿ ಭೂಕುಸಿತಕ್ಕೆ ಬಲಿಯಾದವರ ದೇಹಗಳನ್ನು ಹೊರತೆಗೆಯುವ ಕಾರ್ಯದಲ್ಲಿ ರಕ್ಷಣಾ ಕಾರ್ಯಕರ್ತರು ನಿರತರಾಗಿದ್ದು ಕಳೆದುಹೋದ ಪ್ರತಿಪಾತ್ರರನ್ನು ಹುಡುಕುವ ಕೆಲಸ ಬಿರುಸಿನಿಂದ ನಡೆಯುತ್ತಿದೆ.

ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಲಾದ ದೃಶ್ಯಾವಳಿಗಳಲ್ಲಿ ನೀರಿನಲ್ಲಿ ಕೊಚ್ಚಿಹೋಗುತ್ತಿರುವ ಕಾರುಗಳು ಮತ್ತು ಮನೆಗಳನ್ನು ಸೆರೆಹಿಡಿಯಲಾಗಿದೆ. ಬಸ್ ಗಳು ನದಿಯಲ್ಲಿ ಮುಳುತ್ತಿರುವ ದೃಶ್ಯಾವಳಿಗಳು ಕೂಡ ಕಂಡುಬಂದಿವೆ.

ಪೆಟ್ರೋಪೊಲಿಸ್ ನಗರ ಬೇಸಿಗೆಯಲ್ಲಿ ಸೂರ್ಯನ ತಾಪದಿಂದ ತಪ್ಪಿಸಿಕೊಳ್ಳಲು ಜನರಿಗೆ ಆಶ್ರಯ ತಾಣವಾಗಿದೆ ಮತ್ತು ಅದನ್ನು ಇಂಪೀರಿಯಲ್ ಸಿಟಿ ಎಂದು ಕರೆಯಲಾಗುತ್ತಿದ್ದು ತಮ್ಮ ಪ್ರೀತಿಪಾತ್ರರ ಪತ್ತೆಗೆ ಶೋಧ ನಡೆಯುತ್ತಿದೆ.


RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular