ಕೇಸರಿ ಶಾಲು ಮತ್ತು ಹಿಜಾಬ್ ಧರಿಸುವ ಸಂಬಂಧ ನಡೆಸುತ್ತಿರುವ ಪ್ರತಿಭಟನೆ ಕೈಬಿಟ್ಟು ತರಗತಿಗಳಿಗೆ ಹಿಂದಿರುಗಿದರೆ ವಿದ್ಯಾರ್ಥಿಗಳ ಹಿತಾಸಕ್ತಿಗೆ ಒಳ್ಳೆಯದಾಗಲಿದೆ ಎಂದು ಕರ್ನಾಟಕ ಹೈಕೋರ್ಟ್ ಏಳು ಪುಟಗಳ ಮಧ್ಯಂತರ ಆದೇಶದಲ್ಲಿ ಹೇಳಿದೆ.
ಹಿಜಾಬ್, ಕೇಸರಿ ಶಾಲು ವಿವಾದ ರಾಜ್ಯದಲ್ಲಿ ಶಾಲಾ ಕಾಲೇಜುಗಳನ್ನು ಮುಚ್ಚಲು ಕಾರಣವಾಗಿದೆ ಎಂದು ಪೂರ್ಣಪೀಠ ಮೌಖಿಕ ಆದೇಶಗಳನ್ನು ಹೊರಡಿಸಿದ ಬಳಿಕ ಹೈಕೋರ್ಟ್ ತನ್ನ ಆದೇಶದ ಸಂಪೂರ್ಣ ಪ್ರತಿಯನ್ನು ಪ್ರಕಟಿಸಿದೆ.
ವಿದ್ಯಾರ್ಥಿಗಳ ಹಿತಾಸಕ್ತಿಯ ಚಳವಳಿ ಮುಂದುವರಿಕೆ ಮತ್ತು ಅದರ ಪರಿಣಾಮವಾಗಿ ಸಂಸ್ಥೆಗಳನ್ನು ಮುಚ್ಚುವುದಕ್ಕಿಂತ ತರಗತಿಗಳಿಗೆ ಹಿಂದಿರುಗುವುದು ಉತ್ತಮ ಎಂದು ಮುಖ್ಯನ್ಯಾಯಮೂರ್ತಿ ಅವಸ್ತಿ, ನ್ಯಾಯಮೂರ್ತಿ ಕೃಷ್ಣ ಎನ್ ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಅವರನ್ನು ಒಳಗೊಂಡ ಹೂಕೋರ್ಟ್ ಪೂರ್ಣ ಪೀಠ ಮಧ್ಯಂತರ ಆದೇಶದಲ್ಲಿ ತಿಳಿಸಿದೆ.
ವಿಶೇಷವಾಗಿ ಉನ್ನತ ವ್ಯಾಸಂಗ/ಕೋರ್ಸ್ ಗಳಿಗೆ ಪ್ರವೇಶಕ್ಕೆ ಕಾಲಮಿತಿ ಕಡ್ಡಾಯವಾಗಿರುವಾಗ ಶೈಕ್ಷಣಿಕ ರಜೆ ವಿಸ್ತರಿಸುವುದು ವಿದ್ಯಾರ್ಥಿಗಳು ಶೈಕ್ಷಣಿಕ ಜೀವನಕ್ಕೆ ಹಾನಿಕಾರಕವಾಗಲಿದೆ ಎಂದು ನ್ಯಾಯಾಲಯ ಹೇಳಿದೆ.
ಶಿಕ್ಷಣ ಸಂಸ್ಥೆಗಳನ್ನು ಪುನಃ ತೆರೆಯಲು ಮತ್ತು ವಿದ್ಯಾರ್ಥಿಗಳಿಗೆ ಬೇಗನೆ ತರಗತಿಗಳಿಗೆ ಮರಳಲು ಅವಕಾಶ ನೀಡುವಂತೆ ರಾಜ್ಯ ಸರ್ಕಾರ ಮತ್ತು ಮಧ್ಯಸ್ಥಗಾರರನ್ನು ವಿನಂತಿಸುತ್ತೇವೆ ಎಂದು ಆದೇಶದಲ್ಲಿ ಹೇಳಿದೆ.
ಮುಂದಿನ ಆದೇಶದವರೆಗೆ ತರಗತಿಯೊಳಗೆ ಕೇಸರಿ ಶಾಲು ಮತ್ತು ಸ್ಕಾರ್ಫ್, ಹಿಜಾಬ್, ಧಾರ್ಮಿಕ ಧ್ವಜಗಳು ಮೊದಲಾದವುಗಳನ್ನು ಧರಿಸುವುದನ್ನು ನಾವು ನಿರ್ಬಂಧಿಸುತ್ತೇವೆ ಎಂದು ತಿಳಿಸಲಾಗಿದೆ.
ನಮ್ಮದು ಬಹುಸಂಸ್ಕೃತಿ, ಧರ್ಮ ಮತ್ತು ಭಾಷೆಗಳ ದೇಶ ಎಂಬುದನ್ನು ಉಲ್ಲೇಖಿಸಬೇಕಾಗಿಲ್ಲ. ಜಾತ್ಯತೀತ ರಾಜ್ಯವಾಗಿರುವುದರಿಂದ ಅದು ಯಾವುದೇ ಧರ್ಮದೊಂದಿಗೆ ತನ್ನನ್ನು ತಾನು ಗುರುತಿಸಿಕೊಳ್ಳುವುದಿಲ್ಲ. ಪ್ರತಿಯೊಬ್ಬ ಪ್ರಜೆಗೂ ಯಾವುದೇ ಆಯ್ಕೆಯ ನಂಬಿಕೆಯನ್ನು ಸತ್ಯವನ್ನು ಪ್ರತಿಪಾದಿಸಲು ಮತ್ತು ಅಭ್ಯಾಸ ಮಾಡಲು ಹಕ್ಕಿದೆ ಎಂದು ನ್ಯಾಯಾಲಯ ಹೇಳಿದೆ.