Friday, October 18, 2024
Google search engine
Homeಮುಖಪುಟಹಿಜಾಬ್ ಪ್ರಕರಣ - ಫೆಬ್ರವರಿ 14ಕ್ಕೆ ವಿಚಾರಣೆ ಮುಂದೂಡಿಕೆ

ಹಿಜಾಬ್ ಪ್ರಕರಣ – ಫೆಬ್ರವರಿ 14ಕ್ಕೆ ವಿಚಾರಣೆ ಮುಂದೂಡಿಕೆ

ಬೆಂಗಳೂರು ಪೊಲೀಸ್ ಕಮಿಷನರ್ ಕಮಲ ಪಂತ್ ಸಿಆರ್.ಪಿಸಿ ಸೆಕ್ಷನ್ 144ರ ಅಡಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳ ಗೇಟ್ ನಿಂದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಭೆ, ಚಳವಳಿ ಮತ್ತು ಪ್ರತಿಭಟನೆ ವಿರುದ್ಧ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಕರ್ನಾಟಕ ಹೈಕೋರ್ಟ್ ಹಿಜಾಬ್ ಸಮಸ್ಯೆಯ ಅರ್ಜಿಯ ವಿಚಾರಣೆಯನ್ನು ಫೆಬ್ರವರಿ 14ಕ್ಕೆ ಮುಂದೂಡಿದೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ತಿ ನೇತೃತ್ವದ ತ್ರಿಸದಸ್ಯ ಪೀಠ ಹಿಜಾಬ್ ಕುರಿತ ಅರ್ಜಿಗಳ ವಿಚಾರಣೆ ಪ್ರಾರಂಭಿಸಿ ನಂತರ ಮುಂದೂಡಿತು.

ಹಿಂದಿನ ಪ್ರಕರಣಗಳನ್ನು ಹೈಕೋರ್ಟ್ ನಿಂದ ಸುಪ್ರೀಂ ಕೋರ್ಟ್ ಗೆ ತುರ್ತಾಗಿ ವರ್ಗಾಯಿಸಬೇಕೆಂಬ ಪ್ರಾರ್ಥನೆಯನ್ನು ಸುಪ್ರೀಂ ಕೋರ್ಟ್ ನಿರಾಕರಿಸಿತ್ತು.

ಈ ಕುರಿತು ಯಾವುದೇ ನಿರ್ಧಾರ ಕೈಗೊಳ್ಳುವ ಮುನ್ನ ನ್ಯಾಯಾಲಯದ ತೀರ್ಪಿಗೆ ಕಾಯಲು ರಾಜ್ಯ ಸಚಿವ ಸಂಪುಟವೂ ನಿರ್ಧರಿಸಿದೆ.

ಬೆಂಗಳೂರು ಪೊಲೀಸ್ ಕಮಿಷನರ್ ಕಮಲ ಪಂತ್ ಸಿಆರ್.ಪಿಸಿ ಸೆಕ್ಷನ್ 144ರ ಅಡಿ ಶಾಲೆಗಳು, ಪದವಿ ಪೂರ್ವ ಕಾಲೇಜುಗಳು, ಪದವಿ ಕಾಲೇಜುಗಳ ಗೇಟ್ ನಿಂದ 200 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ರೀತಿಯ ಸಭೆ, ಚಳವಳಿ ಮತ್ತು ಪ್ರತಿಭಟನೆ ವಿರುದ್ಧ ನಿಷೇಧಾಜ್ಞೆ ಹೊರಡಿಸಿದ್ದಾರೆ.

ಬುಧವಾರದಿಂದ 22ರವರೆಗೆ ಎರಡು ವಾರಗಳ ಅವಧಿಗೆ ಬೆಂಗಳೂರು ನಗರದಲ್ಲಿ ಕಾಲೇಜುಗಳು ಅಥವಾ ಇತರ ರೀತಿಯ ಶಿಕ್ಷಣ ಸಂಸ್ಥೆಗಳ ಬಳಿ ಪ್ರತಿಭಟನೆ ನಡೆಸುವಂತಿಲ್ಲ ಎಂದು ಸೂಚಿಸಲಾಗಿದೆ.

ಹಿಜಾಬ್ ವಿಷಯ ಇತ್ಯರ್ಥವಾಗುವವರೆಗೆ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ಗಳಲ್ಲಿ ಜನರನ್ನು ಪ್ರಚೋದಿಸುವ ಯಾವುದೇ ಬಟ್ಟೆಯನ್ನು ಧರಿಸಲು ಒತ್ತಾಯಿಸಬೇಡಿ ಎಂದು ತಿಳಿಸಿದೆ.

ವಿಷಯವನ್ನು ಸೋಮವಾರಕ್ಕೆ ಮುಂದೂಡಿದ ಪೂರ್ಣ ನ್ಯಾಯಾಲಯವು ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಿಗೆ ತರಗತಿಗಳನ್ನು ಪುನರಾರಂಭಿಸಬಹುದು ಎಂದು ಹೈಕೋರ್ಟ್ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ರಿತು ರಾಜ್ ಅವಸ್ಥಿ, ನ್ಯಾಯಮೂರ್ತಿ ಜೆ.ಎಂ.ಖಾಜಿ ಮತ್ತು ನ್ಯಾಯಮೂರ್ತಿ ಕೃಷ್ಣ ಎನ್ ದೀಕ್ಷಿತ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠ ಈ ವಿಷಯವನ್ನು ಶೀಘ್ರವೇ ಪರಿಹರಿಸಬೇಕೆಂದು ಬಯಸಿದೆ. ಆದರೆ ಅಲ್ಲಿಯವರೆಗೆ ಶಾಂತಿ ಮತ್ತು ನೆಮ್ಮದಿ ಕಾಪಾಡಿಕೊಳ್ಳಬೇಕು ಎಂದು ತಿಳಿಸಿದೆ.

ನಾವು ಆದೇಶವನ್ನು ರವಾನಿಸುತ್ತೇಔಎ. ಶಾಲಾ ಕಾಲೇಜುಗಳು ಪ್ರಾರಂಭವಾಗಲಿ, ಆದರೆ ವಿಷಯ ಬಗೆಹರಿಯುವವರೆಗೆ ಯಾವುದೇ ವಿದ್ಯಾರ್ಥಿಯು ಧಾರ್ಮಿಕ ಉಡುಗೆಯನ್ನು ಧರಿಸಲು ಒತ್ತಾಯಿಸಬಾರದು ಎಂದು ಅವಸ್ತಿ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular