Thursday, September 19, 2024
Google search engine
Homeಮುಖಪುಟಉತ್ತರ ಪ್ರದೇಶ ಚುನಾವಣೆಯಲ್ಲಿ 400 ಸ್ಥಾನ ಗೆಲುವು - ಅಖಿಲೇಶ್ ಯಾದವ್ ವಿಶ್ವಾಸ

ಉತ್ತರ ಪ್ರದೇಶ ಚುನಾವಣೆಯಲ್ಲಿ 400 ಸ್ಥಾನ ಗೆಲುವು – ಅಖಿಲೇಶ್ ಯಾದವ್ ವಿಶ್ವಾಸ

ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಯಾದವ್ ಸಂತ್ರಸ್ತೆಗೆ ಸರಿಯಾದ ಚಿಕಿತ್ಸೆಯಾಗಲೀ, ಆಕೆಯ ಸಾವಿನ ನಂತರ ಗೌರವಯುತವಾದ ಅಂತ್ಯಸಂಸ್ಕಾರವಾಲಿ ನಡೆಯಲೇ ಇಲ್ಲ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.

ಉತ್ತರ ಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಎಸ್.ಪಿ-ಆರ್.ಎಲ್.ಡಿ ಮೈತ್ರಿಕೂಟ 400 ಸ್ಥಾನಗಳಲ್ಲಿ ಗೆಲುವು ಸಾಧಿಸಲಿದೆ ಎಂದು ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅಖಿಲೇಶ್, ಜನರು ವ್ಯಕ್ತಪಡಿಸುತ್ತಿರುವ ಆಕ್ರೋಶವನ್ನು ನೋಡಿದರೆ ರಾಜ್ಯದಲ್ಲಿ ಬಿಜೆಪಿ ವಿರುದ್ಧದ ಅಲೆ ಜೋರಾಗಿದೆ ಎಂದು ಹೇಳಿದ್ದಾರೆ.

ಹತ್ರಾಸ್ ಅತ್ಯಾಚಾರ ಪ್ರಕರಣವನ್ನು ಉಲ್ಲೇಖಿಸಿದ ಯಾದವ್ ಸಂತ್ರಸ್ತೆಗೆ ಸರಿಯಾದ ಚಿಕಿತ್ಸೆಯಾಗಲೀ, ಆಕೆಯ ಸಾವಿನ ನಂತರ ಗೌರವಯುತವಾದ ಅಂತ್ಯಸಂಸ್ಕಾರವಾಲಿ ನಡೆಯಲೇ ಇಲ್ಲ ಎಂದು ಸಿಡಿಮಿಡಿ ವ್ಯಕ್ತಪಡಿಸಿದರು.

ಹತ್ರಾಸ್ ನಲ್ಲಿ ಅತ್ಯಾಚಾರಕ್ಕೆ ಒಳಗಾದ ಯುವತಿಯ ಕುಟುಂಬವು ನ್ಯಾಯವನ್ನು ಬಯಸಿತು. ಗೌರವಯುತವಾಗಿ ಅಂತ್ಯಸಂಸ್ಕಾರ ಮಾಡಲು ಬಯಸಿದ್ದರು. ಆದರೆ ಸರ್ಕಾರ ಏನು ಮಾಡಿತು ಎಂಬುದು ಎಲ್ಲರಿಗೂ ಗೊತ್ತು. ಆದರೆ ಆಕೆ ಆಸ್ಪತ್ರೆಯಲ್ಲಿ ಸೂಕ್ತ ಚಿಕಿತ್ಸೆ ಲಭ್ಯವಿದ್ದರೆ ಬಹುಶಃ ಬದುಕಿರುತ್ತಿದ್ದಳು ಎಂದು ಹೇಳಿದರು.

ಉತ್ತರ ಪ್ರದೇಶದ ಚುನಾವಣೆಯ ಪೂರ್ವದ್ಲಿ ಬಿಜ್ನೋರ್ ವಿರೋಧ ಪಕ್ಷದ ಎಸ್.ಪಿ.-ಆರ್,ಎಲ್.ಡಿ ಮೈತ್ರಿ ಕೂಟದ ಅಭ್ಯರ್ಥಿ ಡಾ.ನೀರಜ್ ಚೌಧರಿ ವಿರುದ್ಧ ದೇಶದ್ರೋಹದ ಆರೋಪ ಹೊರಿಸಲಾಗಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular