ಭಾರತೀಯ ಜನತಾ ಪಕ್ಷ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದಲ್ಲಿ ಒಂದೇ ಸಿದ್ಧಾಂತದ ಆಡಳಿತವನ್ನು ಬಯಸುತ್ತಿದ್ದರೂ ಅದು ಎಂದಿಗೂ ಸಂಭವಿಸುವುದಿಲ್ಲ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ರಾಯಪುರದಲ್ಲಿ ಗ್ರಾಮೀಣ ಪ್ರದೇಶದ ಭೂರಹಿತ ಕಾರ್ಮಿಕರಿಗೆ ಛತ್ತೀಸ್ ಗಡ ಸರ್ಕಾರ ಆರ್ಥಿಕ ನೆರವು ಯೋಜನೆಗೆ ಚಾಲನೆ ನೀಡಿದ ಬಳಿಕ ಮಾತನಾಡಿದರು.
ಪಕ್ಷ ಮತ್ತು ಅದರ ಸಿದ್ದಾಂತವು ಭಾರತವನ್ನು ಅಪಾಯದತ್ತ ಕೊಂಡೊಯ್ಯುತ್ತಿದೆ ಮತ್ತು ದೇಶದ ವಿಭಜನೆಗೆ ಬಿಜೆಪಿ ದೊಡ್ಡ ಬೆದರಿಕೆ ಒಡ್ಡುತ್ತಿದೆ ಎಂದು ಆರೋಪಿಸಿದರು.
70 ವರ್ಷಗಳಲ್ಲಿ ಕಾಂಗ್ರೆಸ್ ಏನು ಮಾಡಿದೆ ಎಂದು ಕೇಳಿದರೆ, ಅದು ಕಾಂಗ್ರೆಸ್ ಗೆ ಮಾಡಿದ ಅಪಮಾನವಲ್ಲ, ಬದಲಿಗೆ ನಮ್ಮ ರೈತರು ಮತ್ತು ಕಾರ್ಮಿಕರನ್ನು ಅವಮಾನಿಸಿದಂತೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ರಾಜೀವ್ ಗಾಂಧಿ ಗ್ರಾಮೀಣ ಭೂಮಿಹಿಂ ಕೃಷಿ ಮಜ್ದೂರ ನ್ಯಾಯ ಯೋಜನೆ ಪ್ರಾರಂಭಿಸಿದರು. ಜೊತೆಗೆ ಇಲ್ಲಿ ಮನ ಕ್ಯಾಂಪ್ ನಿರ್ಮಿಸಲು ಛತ್ತೀಸ್ ಗಡ ಅಮರ್ ಜವಾನ್ ಜ್ಯೋತಿ ಎಂಬ ಶಾಶ್ವತ ಜ್ವಾಲೆಯ ಸ್ಮಾರಕಕ್ಕೆ ರಾಹುಲ್ ಶಂಕುಸ್ಥಾಪನೆ ನೆರವೇರಿಸಿದರು.