ನ್ಯಾಯಾಲಯದಲ್ಲಿ ಕಲಾಪಗಳನ್ನು ಸಾರ್ವಜನಿಕವಾಗಿ ವೀಕ್ಸಿಸಲು ಅನುವು ಮಾಡಿಕೊಡಬೇಕೆಂದು ಸುಪ್ರೀಂಕೋರ್ಟ್ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಒತ್ತಿ ಹೇಳಿದ್ದಾರೆ.
ನ್ಯಾಯಾಧೀಶರು ನೀಡಿದ ತೀರ್ಪುಗಳ ಸಂಖ್ಯೆ ಮತ್ತು ಪ್ರಕರಣದ ವಿಲೇವಾರಿ ದರದಿಂದ ಮಾತ್ರವಲ್ಲದೆ ನ್ಯಾಯಾಲಯದ ಗೋಡೆಯೊಳಗೆ ಅವರ ನಡವಳಿಕೆಯಿಂದಲೂ ನಿರ್ಣಯಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ನ್ಯಾಯಾಂಗ ಪ್ರಕ್ರಿಯೆಗಳು ಸಾರ್ವಜನಿಕ ವೀಕ್ಷಣೆಗೆ ಮುಕ್ತವಾಗದ ಹೊರತು, ನ್ಯಾಯಾಲಯಗಳು ಕೈಗೊಂಡ ಕೆಲಸದ ಸ್ವರೂಪವನ್ನು ಸಾರ್ವಜನಿಕರಿಗೆ ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಲೇಖಕ ಬಲರಾಮ್ ಕೆ ಗುಪ್ತಾ ಅವರ ವರ್ಚುವಲ್ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಚಂದ್ರಚೂಡ್ ಹೇಳಿದರು ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ನ್ಯಾಯಾಂಗ ಪ್ರಕ್ರಿಯೆಗಳು ಸಾರ್ವಜನಿಕರಿಗೆ ಮುಕ್ತವಾಗಿದ್ದರೆ ಅದು ನ್ಯಾಯಾಂಗ ಸಂಸ್ಥೆಗೆ ನ್ಯಾಯಸಮ್ಮತತೆಯನ್ನು ನೀಡುವುದಲ್ಲದೆ ಹೊಣೆಗಾರಿಕೆಯ ಪ್ರಜಾಸತ್ತಾತ್ಮಕ ತತ್ವವನ್ನು ಮತ್ತಷ್ಟು ಹೆಚ್ಚಿಸುತ್ತದೆ ಎಂದರು.
ವಿಲೇವಾರಿ ದರ ಮತ್ತು ತೀರ್ಪುಗಳ ಡೇಟಾ ಸಾರ್ವಜನಿಕ ಡೋಮೇನ್ ನಲ್ಲಿ ಸುಲಭವಾಗಿ ಲಭ್ಯವಿದ್ದರೂ ನ್ಯಾಯಾಲಯದಲ್ಲಿ ನ್ಯಾಯಾಧೀಶರ ನಡವಳಿಕೆಯನ್ನು ಸುಲವಾಗಿ ಕಂಡು ಹಿಡಿಯಲಾಗುವುದಿಲ್ಲ ಎಂದು ಹೇಳಿದ್ದಾರೆ.
ಕಾನೂನು ಪತ್ರಿಕೋದ್ಯಮವು ಹೆಚ್ಚುತ್ತಿದೆ ಮತ್ತು ನ್ಯಾಯಾಂಗ ಪ್ರಕ್ರಿಯೆಗಳ ವರದಿಯು ಸಾಕಷ್ಟು ಚರ್ಚೆಗೆ ಒಳಗಾಗುತ್ತಿದೆ. ಆದರೆ ಅದು ಅದರ ಮಿತಿಗಳನ್ನು ಹೊಂದಿದೆ ಎಂದು ನ್ಯಾ. ಚಂದ್ರಚೂಡ್ ತಿಳಿಸಿದರು.


