ಕೊರೊನ ಸಾಂಕ್ರಾಮಿಕ ರೋಗ ಪ್ರಾರಂಭವಾದಾಗಿನಿಂದ ದೇಶದಲ್ಲಿ ನಾಲ್ಕು ಕೋಟಿಗೂ ಹೆಚ್ಚು ಜನರು ಬಡತನಕ್ಕೆ ತಳ್ಳಲ್ಪಟ್ಟಿದ್ದಾರೆ ಮತ್ತು ಶ್ರೀಮಂತರು ಶ್ರೀಮಂತರಾಗಿದ್ದಾರೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ವಿಕಾಸ್ ಉಕ್ಕಿ ಹರಿಯುವುದು ಹಮಾರೆ ದೊ ಚಿತ್ರಕ್ಕೆ ಮಾತ್ರ. ನಮ್ಮ 4,00,00,000 ಸಹೋದರ, ಸಹೋದರಿಯರು ಬಡತನಕ್ಕೆ ದೂಡಲ್ಪಟ್ಟಿದ್ದಾರೆ ಎಂದು ಟ್ವೀಟ್ ಮಾಡಿದ್ದಾರೆ.
ಈ 4,00,00,000 ಪ್ರತಿಯೊಬ್ಬರು ನಿಜವಾದ ವ್ಯಕ್ತಿ ಮತ್ತು ಒಂದು ಸಂಖ್ಯೆಯಲ್ಲ. ಈ 4,00,00,000 ಪ್ರತಿಯೊಬ್ಬರು ಅರ್ಹತೆ ಹೊಂದಿದ್ದು ಪ್ರತಿಯೊಬ್ಬರೂ ಭಾರತವಾಗಿದ್ದಾರೆ ಎಂದು ಹೇಳಿದ್ದಾರೆ.
ಆಕ್ಸ್ ಫ್ಯಾಮ್ ವರದಿಯನ್ನು ಉಲ್ಲೇಖಿಸಿರುವ ರಾಹುಲ್ 2021ರಲ್ಲಿ ಇಬ್ಬರು ಉನ್ನತ ಉದ್ಯಮಿಗಳು ತಮ್ಮ ಸಂಪತ್ತನ್ನು ಶತಕೋಟಿ ಡಾಲರ್ ಗಳಷ್ಟು ಹೆಚ್ಚಿಸಿಕೊಂಡಿದ್ದಾರೆ. ಆದರೆ 2020ರಿಂದ ಸಾಂಕ್ರಾಮಿಕ ರೋಗದ ಸಂದರ್ಭದಲ್ಲಿ ಭಾರತದಲ್ಲಿ 4 ಕೋಟಿಗೂ ಹೆಚ್ಚು ಜನರು ಬಡತನ ರೇಖೆಗಿಂತ ಕೆಳಗೆ ಬರುವಂತಾಗಿದೆ ಎಂದು ಆರೋಪಿಸಿದರು.


