ತಂದೆಯ ಮರಣದ ನಂತರ ಆತನ ಆಸ್ತಿಯಲ್ಲಿ ಆತನ ಹೆಣ್ಣುಮಕ್ಕಳು ಪಾಲು ಮತ್ತು ಉತ್ತರಾಧಿಕಾರತ್ವ ಪಡೆಯಲು ಇತರೆ ಸದಸ್ಯರಿಗಿಂತ ಆದ್ಯತೆ ಪಡೆಯಲು ಅರ್ಹರಾಗಿದ್ದಾರೆ ಎಂದು ಸುಪ್ರೀಂಕೋರ್ಟ್ ಹೇಳಿದೆ.
ಮದ್ರಾಸ್ ಹೈಕೋರ್ಟ್ ತೀರ್ಪಿನ ವಿರುದ್ಧ ಸಲ್ಲಿಸಿದ ಮೇಲ್ಮನವಿ ವಿಚಾರಣೆ ನಡೆಸಿ ಹಿಂದೂ ಉತ್ತರಾಧಿಕಾರ ಕಾಯ್ದೆಯಡಿಯಲ್ಲಿ ಹಿಂದೂ ಮಹಿಳೆಯರು ಮತ್ತು ವಿಧವೆಯರು ಆಸ್ತಿ ಹಕ್ಕುಗಳನ್ನು ಹೊಂದಬಹುದು ಎಂದು ನ್ಯಾಯಾಲಯ ತೀರ್ಪು ನೀಡಿದೆ.
ಹಿಂದೂ ಪುರುಷ ಯಾವುದೇ ವಿಲ್ ಇಲ್ಲದೆ ಯಾವುದೇ ಆಸ್ತಿಯನ್ನು ಸ್ವಾಧೀನ ಮಾಡಿಕೊಂಡಿದ್ದರೆ, ಆಸ್ತಿಯ ವಿಭಜನೆಯ ಮೂಲಕ ಪಡೆದ ಆಸ್ತಿಯಾಗಿದ್ದರೆ, ಅದು ಉತ್ತರಾಧಿಕಾರದಿಂದ ಹಂಚಿಕೆಯಾಗುತ್ತದೆ. ತಂದೆ ಮರಣದ ನಂತರ ಸಹೋದರ ಪುತ್ರರು, ಪುತ್ರಿಯರು ಅನುವಂಶಿಕವಾಗಿ ಪಡೆಯಲು ಅರ್ಹರಾಗಿರುತ್ತಾರೆ ಎಂದು ನ್ಯಾಯಮೂರ್ತಿಗಳಾದ ಎಸ್.ಅಬ್ದುಲ್ ನಜೀರ್ ಮತ್ತು ಕೃಷ್ಣ ಮುರಾರಿ ಅವರಿದ್ದ ಪೀಠ ಹೇಳಿದೆ.
ಯಾವುದೇ ಕಾನೂನುಬದ್ಧ ಉತ್ತರಾಧಿಕಾರಿಯ ಅನುಪಸ್ಥಿತಿಯಲ್ಲಿ ತನ್ನ ತಂದೆಯ ಸ್ವಯಂ ಸಂಪಾದಿತ ಆಸ್ತಿಯನ್ನು ಉತ್ತರಾಧಿಕಾರಿಯಾಗಿ ಪಡೆಯುವ ಹಕ್ಕು ಮಗಳಿಗೆ ಇದೆ ಎಂದು ನ್ಯಾಯಾಲಯ ತಿಳಿಸಿದೆ.
ಉಯಿಲು ಇಲ್ಲದೆ ತಂದೆಯು ಮರಣ ಹೊಂದಿದ ಬಳಿಕ ಅಂತಹ ಆಸ್ತಿಯು ಮಗಳಿಗೆ ಉತ್ತರಾಧಿಕಾರದ ಮೂಲಕ ಅಥವಾ ತಂದೆಯವರಿಗೆ ಹಂಚಿಕೆಯಾಗುತ್ತದೆ ಎಂದು ಹೇಳಿದೆ.