Friday, November 22, 2024
Google search engine
Homeಮುಖಪುಟನೀಟ್-ಪಿಜಿ ಕೌನ್ಸೆಲಿಂಗ್ ಪ್ರವೇಶಕ್ಕೆ ಇದ್ದ ತಡೆ ತೆರವು

ನೀಟ್-ಪಿಜಿ ಕೌನ್ಸೆಲಿಂಗ್ ಪ್ರವೇಶಕ್ಕೆ ಇದ್ದ ತಡೆ ತೆರವು

ಆದರೂ ಈ ವರ್ಷದ ಮಾರ್ಚ್ ತಿಂಗಳಲ್ಲಿ ಇಡಬ್ಲ್ಯೂಎಸ್ ವರ್ಗಕ್ಕೆ 8 ಲಕ್ಷ ರೂ ಆದಾಯದ ಮಾನದಂಡಗಳ ತಾರ್ಕಿಕತೆಯನ್ನು ನಿರ್ಧರಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

2021-22ನೇ ಶೈಕ್ಷಣಿಕ ಸಾಲಿನ ಇತರೆ ಹಿಂದುಳಿದ ವರ್ಗಗಳು ಮತ್ತು ಇಡಬ್ಲ್ಯೂಎಸ್ ಮೀಸಲಾತಿ ಸೇರಿದಂತೆ ಸ್ನಾತಕೋತ್ತರ ವೈದ್ಯಕೀಯ ಕೌನ್ಸೆಲಿಂಗ್ ಮತ್ತು ಪ್ರವೇಶಕ್ಕಾಗಿ ಇದ್ದ ತಡೆಯನ್ನು ಸುಪ್ರೀಂಕೋರ್ಟ್ ಶುಕ್ರವಾರ ತೆರವುಗೊಳಿಸಿದೆ.

ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಮತ್ತು ಎ.ಎಸ್. ಬೋಪಣ್ಣ ಅವರಿದ್ದ ಪೀಠ ಎನ್ಇಇಟಿ-ಯುಜಿ ಮತ್ತು ಎನ್ಇಇಟಿ-ಪಿಜಿಗೆ ಒಬಿಸಿಗೆ ಶೇ.27 ಮತ್ತು ಇಡಬ್ಲ್ಯೂಎಸ್ ಗೆ ಶೇ.10ರಷ್ಟು ಮೀಸಲಾತಿಯ ಸಾಂವಿಧಾನಿಕ ಸಿಂಧುತ್ವವನ್ನು ಎತ್ತಿ ಹಿಡಿದಿದೆ.

ಆದರೂ ಈ ವರ್ಷದ ಮಾರ್ಚ್ ತಿಂಗಳಲ್ಲಿ ಇಡಬ್ಲ್ಯೂಎಸ್ ವರ್ಗಕ್ಕೆ 8 ಲಕ್ಷ ರೂ ಆದಾಯದ ಮಾನದಂಡಗಳ ತಾರ್ಕಿಕತೆಯನ್ನು ನಿರ್ಧರಿಸುವುದಾಗಿ ಸುಪ್ರೀಂ ಕೋರ್ಟ್ ತಿಳಿಸಿದೆ.

ರಾಷ್ಟ್ರೀಯ ಹಿತಾಸಕ್ತಿಯಿಂದ ಕೌನ್ಸೆಲಿಂಗ್ ಆರಂಭಿಸಬೇಕಾದ ಪರಿಸ್ಥಿತಿಯಲ್ಲಿದ್ದೇವೆ ಎಂದು ನ್ಯಾಯಮೂರ್ತಿ ಬೋಪಣ್ಣ ಹೇಳಿದರು.

ಇಡಬ್ಲ್ಯೂಎಸ್ ಕೋಟಾದಲ್ಲಿ ಅರ್ಹತೆ ಪಡೆದಿರುವ ಎಲ್ಲಾ ಅಭ್ಯರ್ಥಿಗಳು ನೋಂದಣಿ ಪ್ರಮಾಣಪತ್ರಗಳನ್ನು ಪಡೆದಿದ್ದಾರೆ. ಇದಕ್ಕೆ ಸರಿಹೊಂದಿಸಲು ಎಲ್ಲಾ ಸರ್ಕಾರಿ ಕಾಲೇಜುಗಳಲ್ಲಿ ಸೀಟುಗಳನ್ನು ಹೆಚ್ಚಿಸಲಾಗಿದೆ ಎಂದು ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಹೇಳಿದರು.

ಇಡಬ್ಲ್ಯೂಎಸ್ ಮಾನದಂಡವನ್ನು ಮರುಪರಿಶೀಲಿಸಲು ರಚಿಸಿರುವ ಮೂವರು ಸದಸ್ಯರ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ಅಂಗೀಕರಿಸಿದೆ. ಅದರಲ್ಲಿ ಇಡಬ್ಲ್ಯೂಎಸ್ ಮಾನದಂಡ ಅರ್ಜಿಯ ವರ್ಷದ ಹಿಂದಿನ ಆರ್ಥಿಕ ವರ್ಷಕ್ಕೆ ಸಂಬಂಧಿಸಿದೆ. ಆದರೆ ಒಬಿಸಿ ವರ್ಗದ ಕೆನೆ ಪದರದ ಆದಾಯದ ಮಾನದಂಡವು ಸತತ ಮೂರು ವರ್ಷಗಳ ಒಟ್ಟು ವಾರ್ಷಿಕ ಆದಾಯಕ್ಕೆ ಅನ್ವಯವಾಗುತ್ತದೆ ಎಂದಿದೆ.

ಒಬಿಸಿ ಕ್ರೀಮಿ ಲೇಯರ್ ನಿರ್ಧರಿಸುವ ಸಂದರ್ಭದಲ್ಲಿ ವೇತನ, ಕೃಷಿ ಮತ್ತು ಸಾಂಪ್ರದಾಯಕ ಕುಶಲಕರ್ಮಿ ವೃತ್ತಿಗಳಿಂದ ಬರುವ ಆದಾಯವನ್ನು ಪರಿಗಣನೆಯಿಂದ ಹೊರಗಿಡಲಾಗಿದೆ. ಆದರೆ ಇಡಬ್ಲ್ಯೂಎಸ್ ವರ್ಗದಲ್ಲಿ 8 ಲಕ್ಷ ರೂ ಮಾನದಂಡ ಕೃಷಿ ಸೇರಿ ಎಲ್ಲಾ ಮೂಲಗಳನ್ನು ಒಳಗೊಂಡಿರುತ್ತದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular