ದಕ್ಷಿಣ ಕೋರಿಯಾದ ಜಿಂಗ್ ಪಿನ್ ಇದ್ದಾನಲ್ಲ, ಆ ಥರ. ಇವನು ಹಾಗೆನೇ? ಮಾತೆತ್ತಿದರೆ ಹೊಡಿ, ಬಡಿ, ಕಡಿ ಅಂತಾನೆ ಎಂದು ತುಮಕೂರು ಲೋಕಸಭಾ ಸದಸ್ಯ ಜಿ.ಎಸ್.ಬಸವರಾಜು ಅವರು ಸಚಿವ ಬೈರತಿ ಬಸವರಾಜು ಅವರಿಗೆ ಹೇಳಿದ ಮಾತುಗಳ ವಿಡಿಯೋ ವೈರಲ್ ಆಗಿದೆ.
ಜಿಲ್ಲಾ ಉಸ್ತುವಾರಿ ಸಚಿವರ ವಿರುದ್ಧ ಸಂಸದ ಜಿ.ಎಸ್.ಬಸವರಾಜು ಗರಂ ಆಗಿರುವ ಮಾತುಗಳು ವಿಡಿಯೋದಲ್ಲಿ ದಾಖಲಾಗಿವೆ.
ಅವನಿಂದಾಗಿ ಜಿಲ್ಲೆಯಲ್ಲಿ ಒಂದ್ ಸೀಟೂ ಬರೋಲ್ಲ. ನೋಡ್ತಾ ಇರು. ಆ ಥರದ ಸ್ಥಿತಿ ಪಕ್ಷಕ್ಕೆ ಬರುವಂತೆ ಮಾಡುತ್ತಾನೆ ಎಂದು ಹೇಳುತ್ತಿದ್ದಾಗ ಸಚಿವ ಬೈರತಿ ಬಸವರಾಜು ಸಾಕು ಬಿಡಿ ಆಮೇಲೆ ಮಾತನಾಡೋಣ ಎನ್ನುತ್ತಾರೆ.
ಆಗ ಬಾಯಿ ಬಿಟ್ಟರೆ ಅವನು ಹೊಡಿ, ಬಡಿ, ಕಡಿ ಎನ್ನುತ್ತಾನೆ ಎಂದು ಆಕ್ರೋಶ ವ್ಯಕ್ತಪಡಿಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಒಂದು ಸಾವಿರ ಕೋಟಿ ರೂಪಾಯಿ ಬಿಡುಗಡೆ ಮಾಡಿಸಿಕೊಂಡು ಬಂದಿದ್ದಾನೆ. ಅವನು ನಮ್ಮನ್ನು ಕರೆಯುವುದಿಲ್ಲ ಎಂದು ಹೇಳಿದ್ದಾರೆ.


