ಆರ್.ಬಿ.ಐ ಆದೇಶದ ಬಳಿಕ ಇಂದಿನಿಂದ ಎಟಿಎಂಗಳ ಮೂಲಕ ಐದಕ್ಕಿಂತ ಹೆಚ್ಚು ಬಾರಿ ನಡೆಸುವ ಪ್ರತಿ ವಹಿವಾಟಿಗೆ 21 ರೂ ಶುಲ್ಕ ಹೆಚ್ಚಳ ಮಾಡಲಾಗಿದೆ.
ಇದುವರೆಗೆ ಹೆಚ್ಚುವರಿ ವಹಿವಾಟಿಗೆ 20 ರೂಪಾಯಿ ವಿಧಿಸಲಾಗುತ್ತಿತ್ತು. ಜನವರಿ 1, 2022ರಿಂದ ಅನ್ವಯವಾಗುವ ತೆರಿಗೆಗಳು ಸೇರಿ 1 ರೂಪಾಯಿ ಹೆಚ್ಚಳವಾಗಿದೆ.
ಗ್ರಾಹಕರು ತಮ್ಮ ಸ್ವಂತ ಬ್ಯಾಂಕ್ ಎಟಿಎಂಗಳಿಗೆ ಪ್ರತಿ ತಿಂಗಳು ಐದು ಉಚಿತ ವಹಿವಾಟು ನಡೆಸಬಹುದು. ಇತರೆ ಬ್ಯಾಂಕ್ ಎಟಿಎಂಗಳಿಗೂ ಇದು ಅನ್ವಯವಾಗಲಿದೆ. ಆದರೆ ಮೆಟ್ರೋ ಕೇಂದ್ರಗಳಲ್ಲಿ ಮೂರು ವಹಿವಾಟಿಗೆ ಮಿತಿ ಹಾಕಲಾಗಿದೆ.
ಎಟಿಎಂ ವಹಿವಾಟುಗಳಿಗೆ ಇಂಟರ್ ಚೇಂಜ್ ಶುಲ್ಕದ ಸ್ವರೂಪದಲ್ಲಿ 2012ರಲ್ಲಿ ಬದಲಾವಣೆ ಮಾಡಲಾಗಿತ್ತು. ನಂತರ ಗ್ರಾಹಕರು ಪಾವತಿಸುವ ಶುಲ್ಕಗಳನ್ನು 2014ರಲ್ಲಿ ಪರಿಷ್ಕರಿಸಲಾಯಿತು.
ಎಟಿಎಂ ನಿರ್ವಹಣೆಗೆ ಹೆಚ್ಚುತ್ತಿರುವ ವೆಚ್ಚ ಮತ್ತು ಬ್ಯಾಂಕ್ ಗಳು ಅಥವಾ ವೈಟ್ ಲೇಬಲ್ ಎಟಿಎಂ ಆಪರೇಟರ್ ಗಳು ಎಟಿಎಂ ನಿರ್ವಹಣೆಗೆ ಮಾಡುವ ವೆಚ್ಚಗಳನ್ನು ಉಲ್ಲೇಖಿಸಲಾಗಿದೆ.