ಇನ್ನು ಮುಂದೆ ಪ್ರಧಾನಿ ನರೇಂದ್ರ ಮೋದಿ ಅವರು 12 ಕೋಟಿ ರೂಪಾಯಿ ದುಬಾರಿ ಬೆಲೆಯ ಶಸ್ತ್ರಸಜ್ಜಿತ ಮರ್ಸಿಡಸ್-ಮೇಬ್ಯಾಕ್ ಕಾರಿನಲ್ಲಿ ಓಡಾಡಲಿದ್ದಾರೆ. ಹಿಂದೆ ಬಳಸುತ್ತಿದ್ದ ರೇಂಜ್ ರೋವರ್ ವೋಗ್ ಟೊಯೋಟಾ ಲ್ಯಾಂಡ್ ಕ್ರೂಸರ್ ಬಿಟ್ಟು ಆಧುನಿಕತೆಗೆ ಅಪ್ ಗ್ರೇಡ್ ಆಗಿದ್ದಾರೆ.
ಹೈದರಾಬಾದ್ ಹೌಸ್ ನಲ್ಲಿ ಈ ತಿಂಗಳ ಆರಂಭದಲ್ಲಿ ಪ್ರಧಾನಿ ನರೇಂದ್ರ ಮೋದಿ, ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರನ್ನು ಭೇಟಿ ಆದಾಗ ಹೊಸ ಮರ್ಸಿಡಸ್-ಮೇಬ್ಯಾಕ್ ಎಸ್ 650 ಕಾರನ್ನು ವೀಕ್ಷಿಸಿದ್ದರು.
ಮರ್ಸಿಡಸ್-ಮೇಬ್ಯಾಕ್ ಎಸ್ 650 ಗಾರ್ಡ್ ಉತ್ಪಾದನಾ ಕಾರಿನಲ್ಲಿ ಲಭ್ಯವಿರುವ ಅತ್ಯುನ್ನತ ಮಟ್ಟದ ಶಸ್ತ್ರಸಜ್ಜಿತ ರಕ್ಷಣೆಯನ್ನು ಒದಗಿಸುತ್ತದೆ. ಮೇಬ್ಯಾಕ್ ಎಸ್ 650 ಗಾರ್ಡ್ ವಿಆರ್10 ಮಟ್ಟದ ರಕ್ಷಣೆಯೊಂದಿಗೆ ಆಗಮಿಸಲಿದೆ. ಈ ಕಾರು ಬುಲೆಟ್ ಪ್ರೂಪ್ ಆಗಿದ್ದು, ಎಕೆ-47 ರೈಫಲ್ ದಾಳಿಗಳನ್ನು ನಿಯಂತ್ರಿಸುವ ಸಾಮರ್ಥ್ಯ ಇದೆ.
ಈಗ ಪ್ರಧಾನಿ ಮೋದಿ ಅವರ ಹೊಸ ಕಾರಿನ ಬೆಲೆಯನ್ನು ಬಹಿರಂಗಪಡಿಸಿಲ್ಲವಾದರೂ ಅದನ್ನು ಹೇಗೆ ಕಸ್ಟಮೈಸ್ ಮಾಡಲಾಗಿದೆ ಎಂಬುದರ ಮೇಲೆ ಬೆಲೆ ಬದಲಾಗುತ್ತದೆ. ನಿರೀಕ್ಷಿತ ವೆಚ್ಚವು ತೆರಿಗೆ ಸೇರಿಸದೆಯೇ ಸುಮಾರು 12 ರಿಂದ 15 ಕೋಟಿ ರೂ ಆಗಲಿದೆ ಎಂದು ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.
ಮರ್ಸಿಡಸ್-ಮೇಬ್ಯಾಕ್ ಕಾರು ತನ್ನ ಪ್ರಯಾಣಿಕರನ್ನು ಕೇವಲ ಎರಡು ಮೀಟರ್ ಗಳ 15 ಕಿಲೋಗ್ರಾಮ ಟಿಎನ್.ಟಿ ಯಿಂದ ರಕ್ಷಿಸಲು ಸಮರ್ಥವಾಗಿದೆ. ಕಾರು ಪಾಲಿಕಾರ್ಬೊನೇಟ್ ಲೇಪಿತ ಕಿಟಕಿಗಳನ್ನು ಹೊಂದಿದೆ. ಶಸ್ತ್ರಸಜ್ಜಿತವಾಗಿರುವ ಕಾರು ನೇರ ಸ್ಫೋಟದಿಂದ ರಕ್ಷಿಸುತ್ತದೆ. ಗ್ಯಾಸ್ ದಾಳಿ ಸಂದರ್ಭದಲ್ಲಿ ಪ್ರಯಾಣಿಕರ ಕ್ಯಾಬಿನ್ ಪ್ರತ್ಯೇಕ ಗಾಳಿಯ ಪೂರೈಕೆ ಪಡೆಯುತ್ತದೆ.
ಮರ್ಸಿಡಸ್-ಮೇಬ್ಯಾಕ್ ಎಸ್ 650 ಗಾರ್ಡ್ ಎಂಜಿನ ಚಾಲಿತವಾಗಿದ್ದು ಗಂಟೆಗೆ ಗರಿಷ್ಟ 160 ಕಿಲೋ ಮೀಟರ್ ಗೆ ವೇಗವನ್ನು ನಿರ್ಬಂಧಿಸಲಾಗಿದೆ. ಕಾರು ರನ್-ಪ್ಲಾಟ್ ಟೈರ್ ಗಳನ್ನು ಹೊಂದಿದ್ದು, ಹಾನಿ ಅಥವಾ ಪಂಕ್ಚರ್ ಸಂದರ್ಭದಲ್ಲಿ ತ್ವರಿತವಾಗಿ ತಪ್ಪಿಸಿಕೊಳ್ಳುವುದನ್ನು ಖಚಿತಪಡಿಸುತ್ತದೆ.