ಸಶಸ್ತ್ರ ದರೋಡೆ ಸೇರಿದಂತೆ ವಿದಿಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಶಂಕೆಯ ಮೇರೆಗೆ 100 ಕ್ರಿಮಿನಲ್ ಗಳನ್ನು ಬಂಧಿಸಲಾಗಿದೆ ಎಂದು ತಾಲಿಬಾನ್ ಹೇಳಿಕೊಂಡಿದೆ.
ಬಂಧಿತರು ಸಶಸ್ತ್ರ ದರೋಡೆ ಸೇರಿ ವಿವಿಧ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ ಎಂದು ಹೇಳಲಾಗಿದ್ದು ಅವರಿಂದ ವಶಪಡಿಸಿಕೊಂಡಿರುವ ದಾಖಲೆಗಳನ್ನು ತನಿಖೆಗಾಗಿ ನ್ಯಾಯಾಂಗ ಕಚೇರಿಗಳಿಗೆ ಕಳಿಸಲಾಗಿದೆ ಎಂದು ಕಾಬೂಲ್ ಭದ್ರತಾ ವಿಭಾಗದ ವಕ್ತಾರ ಜನರಲ್ ಮೊಬಿನ್ ಹೇಳಿದ್ದಾರೆ ಎಂದು ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.
ಆರೋಪಿಗಳ ದಾಖಲೆಗಳನ್ನು ನ್ಯಾಯಾಂಗ ಇಲಾಖೆಗಳಿಗೆ ಕಳುಹಿಸಲಾಗಿದೆ ಮತ್ತು ಸ್ಥಳೀಯ ನಿವಾಸಿಗಳಿಗೆ ಭದ್ರತೆ ಒದಗಿಸಲು ಇಸ್ಲಾಮಿಕ್ ಎಮಿರೇಟ್ ಪಡೆಗಳು ದಿನದ 24 ಗಂಟೆಯೂ ಕೆಲಸ ನಿರ್ವಹಿಸುತ್ತಿವೆ ಎಂದು ಕಾಬೂಲ್ ನಿವಾಸಿಗಳಿಗೆ ಭರವಸೆ ನೀಡುತ್ತೇವೆ ಎಂದು ಜನರಲ್ ಮೊಬಿನ್ ಹೇಳಿದರು.
ದೇಶದಲ್ಲಿ ಬಡತನ ಮತ್ತು ಹಸಿವು ಹೆಚ್ಚಿದಂತೆ ಅಪರಾಧ ಪ್ರಕರಣಗಳ ಸಂಖ್ಯೆಯು ಹೆಚ್ಚಾಗುತ್ತದೆ ಎಂದು ಮಿಲಿಟರಿ ತಜ್ಞರು ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ವ್ಯಾಪಕ ಬಡತನ ನಗರದಲ್ಲಿ ಅಪರಾಧಗಳ ಹೆಚ್ಚಳಕ್ಕೆ ನೇರವಾಗಿ ಸಂಬಂಧಿಸಿದೆ ಮತ್ತು ಗಂಭೀರ ಪರಿಣಾಮ ಬೀರುತ್ತದೆ ಎಂದು ಮಿಲಿಟರಿ ತಜ್ಞ ಅಸಾದುಲ್ಲಾ ನದಿಮ್ ಹೇಳಿದರು.
ಕಿರುಕುಳ ಪ್ರಕರಣಗಳಲ್ಲಿ ಭಾಗಿಯಾಗಿರುವವರು ಸೇರಿದಂತೆ 1,895 ಪೋರ್ಸ್ ಸದಸ್ಯರನ್ನು ಆಯೋಗ ಹೊರಹಾಕಿದೆ ಎಂದು ಆಯೋಗದ ಆಡಿಟಿಂಗ್ ಭದ್ರತಾ ಪಡೆಗಳ ಮುಖ್ಯಸ್ಥರು ಘೋಷಿಸಿದ ನಂತರ ಈ ಬೆಳವಣಿಗೆಯಾಗಿದೆ.