ಸುಗಂಧ ದ್ರವ್ಯ ಉದ್ಯಮದ ಭಾಗವಾಗಿರುವ ಕಾನ್ಪುರದ ಉದ್ಯಮಿ ಪಿಯೂಷ್ ಜೈನ್ ಕಚೇರಿ ಮೇಲೆ ಐಟಿ ದಾಳಿ ನಡೆಸಿದೆ. ಕೋಟ್ಯಂತರ ರೂ ವಶಪಡಿಸಿಕೊಂಡಿದ್ದು ಇದುವರೆಗೆ 150 ಕೋಟಿ ರೂಪಾಯಿ ಲೆಕ್ಕ ಹಾಕಲಾಗಿದೆ ಎಂದು ಜಿಎಸ್.ಟಿ. ಮಹಾ ನಿರ್ದೇಶನಾಲಯದ ಗುಪ್ತಚರ ಘಟಕ ತಿಳಿಸಿದೆ.
ಜೈನ್ ಅವರ ನಿವಾಸದಲ್ಲಿ ಎರಡು ದೊಡ್ಡ ವಾರ್ಡ್‌ರೋಬ್‌ಗಳಲ್ಲಿ ಹಣ ತುಂಬಿರುವ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ. ಹಣದ ಕಟ್ಟುಗಳನ್ನು ಪ್ಲಾಸ್ಟಿಕ್ ಕವರ್‌ಗಳಲ್ಲಿ ಸುತ್ತಿ ಹಳದಿ ಟೇಪ್‌ನಿಂದ ಭದ್ರಪಡಿಸಲಾಗಿದೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
ಐಟಿ ಮತ್ತು ಜಿಎಸ್‌ಟಿ ಅಧಿಕಾರಿಗಳು ಕೋಣೆಯ ಮಧ್ಯದಲ್ಲಿ ಕುಳಿತು ಹಣವನ್ನು ಲೆಕ್ಕಹಾಕುತ್ತಿರುವುದು ಮತ್ತು ಹಣದ ರಾಶಿಗಳು ಮತ್ತು ಮೂರು ನೋಟು ಎಣಿಸುವ ಯಂತ್ರಗಳು ಚಿತ್ರದಲ್ಲಿ ಕಾಣುತ್ತವೆ.
ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಕಾನ್ಪುರ ಶಾಖೆಯ ಅಧಿಕಾರಿಗಳ ಸಹಾಯದಿಂದ ವಸೂಲಿಯಾದ ಒಟ್ಟು ಮೊತ್ತವನ್ನು ಎಣಿಕೆ ಮಾಡಲಾಗುತ್ತಿದೆ ಎಂದು ಜಿಎಸ್‌ಟಿ ಇಲಾಖೆಯ ಹೇಳಿಕೆ ತಿಳಿಸಿದೆ.
ಜೈನ್, ಕಾನ್ಪುರ ಮೂಲದ ತಂಬಾಕು ತಯಾರಕರು ಸೇರಿ ಹಲವು ಕಂಪನಿಗಳಿಗೆ ಸುಗಂಧ ದ್ರವ್ಯ ಪೂರೈಸುವ ಓಡೋಕೆಮ್ ಇಂಡಸ್ಟ್ರೀಸ್ ಹೊಂದಿದ್ದಾರೆ.
ಜೈನ್ ಅವರ ಮೇಲೆ ತೆರಿಗೆ ವಂಚನೆ ಮಾಡಿದ ಆರೋಪ ಇದೆ. ಹಾಗಾಗಿ ಉತ್ತರ ಪ್ರದೇಶದ ಕಾನ್ಪುರ, ಮುಂಬೈ, ಗುಜರಾತ್‌ನಲ್ಲಿ ವ್ಯಾಪಾರ ಮತ್ತು ಮನೆಗಳ ಮೇಲೆ ದಾಳಿ ನಡೆದಿದೆ.
ನಕಲಿ ಇನ್‌ವಾಯ್ಸ್‌ಗಳನ್ನು ಕಾಲ್ಪನಿಕ ಸಂಸ್ಥೆಗಳ ಹೆಸರಿನಲ್ಲಿ ರಚಿಸಲಾಗಿದೆ. ಈ ಇನ್‌ವಾಯ್ಸ್‌ಗಳು ತಲಾ 50,000 ರು ಮತ್ತು 200 ಕ್ಕೂ ಹೆಚ್ಚು ಇನ್‌ವಾಯ್ಸ್‌ಗಳು ಜಿಎಸ್‌ಟಿ ಪಾವತಿಗಳಿಲ್ಲದೆ ರಚಿಸಲಾಗಿದೆ. ಇನ್ ವಾಯ್ಸ್ ಗಳು ಗೋದಾಮಿನೊಳಗೆ ನಾಲ್ಕು ಟ್ರಕ್‌ಗಳಲ್ಲಿ ಕಂಡುಬಂದಿವೆ ಎಂದು ಎನ್.ಡಿ.ಟಿವಿ ವರದಿ ಹೇಳಿದೆ.