14 ವರ್ಷದ ಬಾಲಕನನ್ನು ಕತ್ತು ಕೊಯ್ದು, ಕೈಕಾಲು ಕತ್ತರಿಸಿ ದೇಹವನ್ನು ಗೋಣಿಚೀಲಗಳಲ್ಲಿ ತುಂಬಿ ಕಾಡಿನಲ್ಲಿ ಎಸೆದಿರುವ ಪ್ರಕರಣ ಜಾರ್ಖಂಡ್ ದಿಯೋಘರ್ ಜಿಲ್ಲೆಯಲ್ಲಿ ನಡೆದಿದೆ. ಜಗಳವಾಗಿ ಅವನ ಸ್ನೇಹಿತರೇ ಆತನನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ತನಿಖೆಯ ಸಂದರ್ಭದಲ್ಲಿ ಪ್ರಕರಣದ ಆರೋಪಿಯೊಬ್ಬನನ್ನು ಪೊಲೀಸರು ಬಂಧಿಸಿದ್ದಾರೆ. ಮಂಗಳವಾರ ರಾತ್ರಿ 8.30 ರ ಸುಮಾರಿಗೆ ಜಸಿದಿಹ್ ಪೊಲೀಸ್ ಠಾಣೆ ವ್ಯಾಪ್ತಿಯ ರೋಹಿಣಿ ಗ್ರಾಮದ ತನ್ನ ಮನೆಯ ಹೊರಗೆ ಬಾಲಕನನ್ನು ಭೇಟಿಯಾದ ಸ್ನೇಹಿತರು ಕುಮ್ರಾಬಾದ್ ಸ್ಟೇಷನ್ ರಸ್ತೆಗೆ ಹೋದರು ಎಂದು ಹೇಳಲಾಗಿದೆ.
ಅಲ್ಲಿ ಇನ್ನೊಬ್ಬ ಸ್ನೇಹಿತ ಅವಿನಾಶ್ (19) ಅವರೊಂದಿಗೆ ಸೇರಿಕೊಂಡರು. ಮೂವರೂ ಪಳಂಗ ಪಹಾಡ್ ಜಂಗಲ್ ಕಡೆಗೆ ಹೋಗುತ್ತಿದ್ದಾಗ ಅವಿನಾಶ್ ಮತ್ತು ಬಾಲಕನ ನಡುವೆ ವಾಗ್ವಾದ ನಡೆದಿದೆ. ಆಗ ಅವಿನಾಶ್ ಚಾಕುವನ್ನು ತೆಗೆದುಕೊಂಡು ಆತನಿಗೆ ಇರಿದು ಕತ್ತು ಸೀಳಿದ ಎಂದು ಪೊಲೀಸರು ತಿಳಿಸಿದ್ದಾರೆ.
ಬಾಲಕನನ್ನು ಕೊಂದ ಬಳಿ ಅವಿನಾಶ್ ಕೈ ಮತ್ತು ಕಾಲುಗಳನ್ನು ಕತ್ತರಿಸಿ, ದೇಹದ ಭಾಗಗಳನ್ನು ಮೂರು ಗೋಣಿಗಳಲ್ಲಿ ತುಂಬಿ ಕಾಡಿನಲ್ಲಿ ಎಸೆದಿದ್ದಾನೆ. ಪೊಲೀಸರು ಶವವನ್ನು ವಶಪಡಿಸಿಕೊಂಡು ಅವಿನಾಶ್‌ನನ್ನು ಬಂಧಿಸಿದ್ದಾರೆ.
ಅವಿನಾಶ್ ಕೂಡ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ. ಆತನಿಂದ ರಕ್ತಸಿಕ್ತ ಚಾಕು, ಮೊಬೈಲ್ ಫೋನ್ ವಶಪಡಿಸಿಕೊಳ್ಳಲಾಗಿದೆ.
ಆರೋಪಿಯ ವಿರುದ್ಧ ಐಪಿಸಿ ಸೆಕ್ಷನ್ 302 (ಕೊಲೆ), 201 (ಅಪರಾಧದ ಸಾಕ್ಷ್ಯಾಧಾರ ಕಣ್ಮರೆಯಾಗುವಂತೆ ಮಾಡುವುದು), 120 ಬಿ (ಅಪರಾಧದ ಪಿತೂರಿ), 34 (ಸಾಮಾನ್ಯ ಉದ್ದೇಶಕ್ಕಾಗಿ ಹಲವಾರು ವ್ಯಕ್ತಿಗಳು ಮಾಡಿದ ಕೃತ್ಯಗಳು) ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.