ಸ್ಥಳೀಯ ಸಂಸ್ಥೆಗಳಿಂದ ವಿಧಾನಪರಿಷತ್ ನ 25 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 11 ಸ್ಥಾನಗಳಲ್ಲಿ ಆಯ್ಕೆ ಆಗಿದ್ದರೆ ಬಿಜೆಪಿ 11 ಕ್ಷೇತ್ರಗಳಲ್ಲಿ ಗೆಲುವು ಕಂಡಿದೆ. ಜೆಡಿಎಸ್ ಹಾಸನ ಮತ್ತು ಮೈಸೂರಿನಲ್ಲಿ ಗೆಲುವು ಸಾಧಿಸಿದೆ.
ಕಾಂಗ್ರೆಸ್ ಪಕ್ಷ ದಕ್ಷಿಣ ಕರ್ನಾಟಕದಲ್ಲಿ ತನ್ನ ಪ್ರಾಬಲ್ಯ ಸಾಧಿಸಿದ್ದರೆ, ಬಿಜೆಪಿ ಹೈದರಾಬಾದ್ ಕರ್ನಾಟಕ ಮಲೆನಾಡು ಭಾಗದಲ್ಲಿ ಪ್ರಾಬಲ್ಯ ಹೊಂದಿದೆ. ಎರಡು ಪಕ್ಷಗಳು ಸಮಬಲ ಹೋರಾಟ ನಡೆಸಿವೆ.
ಆಡಳಿತಾರೂಢ ಬಿಜೆಪಿ ಚುನಾವಣಾಪೂರ್ವದಲ್ಲಿ 15 ಕ್ಷೇತ್ರಗಳಲ್ಲಿ ಗೆಲ್ಲುವುದಾಗಿ ಹೇಳಿತ್ತು. ಕಾಂಗ್ರೆಸ್ ನಿರ್ದಿಷ್ಟ ಸಂಖ್ಯೆಗಳನ್ನು ಉಲ್ಲೇಖಿಸದಿದ್ದರೂ ಬಿಜೆಪಿಯಷ್ಟೇ ಸ್ಥಾನಗಳನ್ನು ಪಡೆಯುವುದಾಗಿ ತಿಳಿಸಿತ್ತು.
ಕಾಂಗ್ರೆಸ್ ಪಕ್ಷದಿಂದ ತುಮಕೂರು – ಆರ್.ರಾಜೇಂದ್ರ, ಕೋಲಾರ-ಅನಿಲ್ ಕುಮಾರ್, ಬೆಂಗಳೂರು ಗ್ರಾಮಾಂತರ-ಎಂ.ಎಸ್.ರವಿ, ಮಂಡ್ಯ-ಗೂಳೀಗೌಡ, ಮೈಸೂರು-ಡಿ.ತಿಮ್ಮಯ್ಯ ಆಯ್ಕೆಯಾಗಿದ್ದಾರೆ.
ಅಲ್ಲದೆ ಬೀದರ್ -ಭೀಮಾರಾಮ್ ಪಾಟೀಲ್, ರಾಯಚೂರು-ಶರಣಗೌಡ ಬಯ್ಯಾಪುರ, ಬೆಳಗಾವಿ -ಚನ್ನರಾಜ ಹಟ್ಟಿಹೊಳಿ, ವಿಜಯಪುರ- ಸುನೀಲ್ ಗೌಡ ಪಾಟೀಲ್, ಧಾರವಾಡ-ಸಲೀಂ ಅಹಮದ್, ದಕ್ಷಿಣ ಕನ್ನಡ- ಮಂಜುನಾಥ್ ಭಂಡಾರಿ ಗೆಲುವು ಸಾಧಿಸಿದ್ದಾರೆ.
ಬಿಜೆಪಿ ಬೆಂಗಳೂರು -ಗೋಪಿನಾಥ ರೆಡ್ಡಿ, ಚಿತ್ರದುರ್ಗ-ಕೆ.ಎಸ್.ನವೀನ್, ಬಳ್ಳಾರಿ-ವೈ.ಎಂ.ಸತೀಶ್, ಶಿವಮೊಗ್ಗ- ಡಿ.ಎಸ್.ಅರುಣ್, ಚಿಕ್ಕಮಗಳೂರು – ಎಂ.ಕೆ.ಪ್ರಾಣೇಶ್, ಧಾರವಾಡ -ಪ್ರದೀಪ್ ಶೆಟ್ಟರ್, ಕಲಬುರಗಿ – ಬಿ.ಜಿ.ಪಾಟೀಲ್, ದಕ್ಷಿಣ ಕನ್ನಡ – ಕೋಟಾ ಶ್ರೀನಿವಾಸ ಪೂಜಾರಿ, ಉತ್ತರ ಕನ್ನಡ – ಗಣಪತಿ ಉಳ್ವೇಕರ್, ಕೊಡಗು – ಸುಜಾ ಕುಶಾಲಪ್ಪ ಆಯ್ಕೆ ಆಗಿದ್ದಾರೆ.
ಬೆಳಗಾವಿಯಿಂದ ಸ್ವತಂತ್ರ ಅಭ್ಯರ್ಥಿ ಲಖನ್ ಜಾರಕಿಹೊಳಿ ಮತ್ತು ಹಾಸನದಿಂದ ಸೂರಜ್ ರೇವಣ್ಣ ಗೆಲವು ಸಾಧಿಸಿದ್ದಾರೆ.


