ಭೀಮಾ ಕೋರೆಗಾಂ ಪ್ರಕರಣದಲ್ಲಿ ಬಂಧಿತರಾಗಿದ್ದ ವಕೀಲೆ ಮತ್ತು ಹೋರಾಟಗಾರ್ತಿ ಸುಧಾ ಭಾರದ್ವಾಜ್ ಮೂರು ವರ್ಷ ಮೂರು ತಿಂಗಳ ನಂತರ ಜೈಲಿನಿಂದ ಜಾಮೀನಿನ ಮೇಲೆ ಇಂದು ಬಿಡುಗಡೆಯಾದರು.
ಎನ್ಐಎ ವಿಶೇಷ ನ್ಯಾಯಾಲಯವು ತಾತ್ಕಾಲಿಕ ಜಾಮೀನು ಮತ್ತು ಮೂರು ತಿಂಗಳೊಳಗೆ 50 ಸಾವಿರ ರೂ ಮೌಲ್ಯದ ವೈಯಕ್ತಿ ಭದ್ರತೆಯನ್ನು ಒದಗಿಸಲು ಅನುಮತಿ ನೀಡಿದೆ.
ಕಳೆದ ಕೆಲ ದಿನಗಳ ಹಿಂದೆ ಬಾಂಬೆ ಹೈಕೋರ್ಟ್ ಸುಧಾ ಭಾರದ್ವಾಜ್ ಅವರಿಗೆ ಡಿಫಾಲ್ಟ್ ಜಾಮೀನು ನೀಡುವಂತೆ ಆದೇಶ ಹೊರಡಿಸಿದ ನಂತರ ನಿನ್ನೆ ವಿಶೇಷ ನ್ಯಾಯಾಲಯ ಜಾಮೀನು ಷರತ್ತುಗಳನ್ನು ಅಂತಿಮಗೊಳಿಸಿತ್ತು.
ವಿಶೇಷ ನ್ಯಾಯಾಲಯದ ಆದೇಶದಂತೆ ಯಾವುದೇ ದೃಶ್ಯ, ಮುದ್ರಣ ಮತ್ತು ಸಾಮಾಜಿಕ ಮಾಧ್ಯಮಗಳ ಮುಂದೆ ಸುಧಾ ಭಾರದ್ವಾಜ್ ಅವರು ಯಾವುದೇ ರೀತಿಯ ಹೇಳಿಕೆಯನ್ನು ನೀಡಬಾರದು ಎಂದು ಹೇಳಿದೆ.