Friday, September 20, 2024
Google search engine
Homeಮುಖಪುಟಭಾರತದ ಶೇ.10 ಮಂದಿ ಕೈಯಲ್ಲಿ 57ರಷ್ಟು ಆದಾಯ - ವಿಶ್ವ ಅಸಮಾನತೆ ವರದಿ ಬಹಿರಂಗ

ಭಾರತದ ಶೇ.10 ಮಂದಿ ಕೈಯಲ್ಲಿ 57ರಷ್ಟು ಆದಾಯ – ವಿಶ್ವ ಅಸಮಾನತೆ ವರದಿ ಬಹಿರಂಗ

ನೀತಿ ಆಯೋಗ ಇತ್ತೀಚೆಗೆ ಸಿದ್ದಪಡಿಸಿದ ಬಹು ಆಯಾಮದ ಬಡತನ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ತೀವ್ರ ಬಡವರಾಗಿದ್ದಾರೆ. ಬಹು ಆಯಾಮದ ಬಡವರಾಗಿರುವ ಬಿಹಾರ ಅತಿಹೆಚ್ಚು ಜನರನ್ನು ಹೊಂದಿದೆ. ಅಂದರೆ ರಾಜ್ಯದ ಜನಸಂಖ್ಯೆಯ ಶೇ.51.91ರಷ್ಟಿದೆ. ಬಳಿಕ ಜಾರ್ಖಂಡ್ 42.16 ಮತ್ತು ಉತ್ತರ ಪ್ರದೇಶ 37.79ರಷ್ಟಿದೆ ಎಂದು ವಿಶ್ವ ಅಸಮಾನತೆ ವರದಿ-2022 ತಿಳಿಸಿದೆ.

ಭಾರತ ಬಡ ಮತ್ತು ಅತ್ಯಂತ ಅಸಮಾನ ದೇಶವಾಗಿದ್ದು ಕೆಲವೇ ಮಂದಿ ಶ್ರೀಮಂತ ಗಣ್ಯರನ್ನು ಹೊಂದಿರುವ ದೇಶವೆಂಬುದು ವಿಶ್ವ ಅಸಮಾನತೆ ವರದಿ 2022 ಬಹಿರಂಗಪಡಿಸಿದೆ.

ದೇಶದ ಶೇ.10 ಮಂದಿ ಕೈಯಲ್ಲಿ ರಾಷ್ಟ್ರೀಯ ಆದಾಯದ ಶೇ.57ರಷ್ಟು ಆದಾಯ ಸಂಗ್ರಹವಾಗಿದೆ. ದಕ್ಷಿಣ ಮತ್ತು ಆಗ್ನೇಯ ಏಷ್ಯಾ ಮತ್ತು ಭಾರತದಂತಹ ದೇಶಗಳಲ್ಲಿ ಆದಾಯ ಕಡಿಮೆಯಾಗಿರುವುದನ್ನು ವರದಿ ಬೊಟ್ಟು ಮಾಡಿದೆ.

ಭಾರತ ಶ್ರೀಮಂತ ಗಣ್ಯರನ್ನು ಹೊಂದಿರುವ ಬಡ ಮತ್ತು ಅತ್ಯಂತ ಅಸಮಾನ ದೇಶವಾಗಿ ಎದ್ದು ಕಾಣುತ್ತದೆ ಎಂದು ವರದಿ ಹೇಳಿದೆ.

ಭಾರತದ ಮಧ್ಯಮ ವರ್ಗವು ತುಲನಾತ್ಮಕವಾಗಿ ಬಡವರಾಗಿದ್ದು ಸರಾಸರಿ ಸಂಪತ್ತು ಕೇವಲ 7,23,930 ರೂ ಆಗಿದೆ ಅಥವಾ ಒಟ್ಟು ರಾಷ್ಟ್ರೀಯ ಆದಾಯದ ಶೇ.29.5ರಷ್ಟಿದೆ ಎಂದು ವರದಿ ತಿಳಿಸಿದೆ.

ಭಾರತೀಯ ವಯಸ್ಕ ಜನಸಂಖ್ಯೆಯ ಸರಾಸರಿ ವಾರ್ಷಿಕ ರಾಷ್ಟ್ರೀಯ ಆದಾಯ 2021ರಲ್ಲಿ ರು.2,04,200 ಆಗಿದೆ. ಶೇ. 50ರಷ್ಟು ಮಂದಿ 53,610 ರೂ ಗಳಿಸುತ್ತಿದ್ದಾರೆ. ಭಾರತದಲ್ಲಿನ ಕುಟುಂಬದ ಸರಾಸರಿ ಸಂಪತ್ತು ರೂ.9,83,010 ಆಗಿದೆ. ಉಳಿದ 50ರಷ್ಟು ಜನರು ಬಹುತೇಕ ಏನನ್ನೂ ಹೊಂದಿಲ್ಲ ಎಂದು ಹೇಳಲಾಗಿದೆ.

ಭಾರತಕ್ಕೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆ ಮಾಡಿದ ಅಸಮಾನತೆಯ ದತ್ತಾಂಶದ ಗುಣಮಟ್ಟವು ಗಂಭೀರವಾಗಿ ಹದಗೆಟ್ಟಿದೆ. ಇತ್ತೀಚಿನ ಅಸಮಾನತೆಯ ಬದಲಾವಣೆಗಳನ್ನು ನಿರ್ಣಯಿಸುವುದು ವಿಶೇಷವಾಗಿ ಕಷ್ಟಕರವಾಗಿದೆ ಎಂದು ವರದಿ ಹೇಳುತ್ತದೆ.

ನೀತಿ ಆಯೋಗ ಇತ್ತೀಚೆಗೆ ಸಿದ್ದಪಡಿಸಿದ ಬಹು ಆಯಾಮದ ಬಡತನ ಸೂಚ್ಯಂಕದ ಪ್ರಕಾರ, ಭಾರತದಲ್ಲಿ ಪ್ರತಿ ನಾಲ್ಕು ಜನರಲ್ಲಿ ಒಬ್ಬರು ತೀವ್ರ ಬಡವರಾಗಿದ್ದಾರೆ. ಬಹು ಆಯಾಮದ ಬಡವರಾಗಿರುವ ಬಿಹಾರ ಅತಿಹೆಚ್ಚು ಜನರನ್ನು ಹೊಂದಿದೆ. ಅಂದರೆ ರಾಜ್ಯದ ಜನಸಂಖ್ಯೆಯ ಶೇ.51.91ರಷ್ಟಿದೆ. ಬಳಿಕ ಜಾರ್ಖಂಡ್ 42.16 ಮತ್ತು ಉತ್ತರ ಪ್ರದೇಶ 37.79ರಷ್ಟಿದೆ ಎಂದು ವರದಿ ತಿಳಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular