Friday, September 20, 2024
Google search engine
Homeಮುಖಪುಟಕೊವಿಡ್ ಪ್ರಕರಣ ಹೆಚ್ಚಳ - ಅಗತ್ಯ ಬಿದ್ದರೆ ಪರೀಕ್ಷೆ ರದ್ದು ಶಾಲೆ ಬಂದ್ - ಸಚಿವ...

ಕೊವಿಡ್ ಪ್ರಕರಣ ಹೆಚ್ಚಳ – ಅಗತ್ಯ ಬಿದ್ದರೆ ಪರೀಕ್ಷೆ ರದ್ದು ಶಾಲೆ ಬಂದ್ – ಸಚಿವ ನಾಗೇಶ್

ರಾಜ್ಯದ ಶಾಲಾ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಲ್ಲಿ ಕೊವಿಡ್ ಪ್ರಕರಣಗಳು ಹೆಚ್ಚುತ್ತಿದ್ದು ಅಗತ್ಯ ಬಿದ್ದರೆ ಪರೀಕ್ಷೆ ರದ್ದುಪಡಿಸಲು ಮತ್ತು ಶಾಲೆಗಳನ್ನು ಬಂದ್ ಮಾಡಲು ಸರ್ಕಾರ ಹಿಂದೆ ಸರಿಯುವುದಿಲ್ಲ ಎಂದು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಹೇಳಿದ್ದಾರೆ.

ನಿಯಮಿತವಾಗಿ ಆಫ್ ಲೈನ್ ತರಗತಿಗಳನ್ನು ನಡೆಸಲು ಯಾವುದೇ ತೊಂದರೆ ಇಲ್ಲ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ ಎಂದು ಹೇಳಿದರು.

ಪರೀಕ್ಷೆ ಮತ್ತು ಶಾಲೆಗಳನ್ನು ನಿಲ್ಲಿಸುವ ಅಗತ್ಯ ಬಂದರೆ ನಾವು ಹಿಮದೆ ಸರಿಯುವುದಿಲ್ಲ. ಆದರೆ ಪ್ರಸ್ತುತ ಪರಿಸ್ಥಿತಿಯಲ್ಲಿ ಯಾವುದೇ ಸಮಸ್ಯೆ ಇಲ್ಲ ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿದರು.

ಕೊವಿಡ್ ಪರಿಸ್ಥಿತಿಯನ್ನು ಸರ್ಕಾರ ಗಂಟೆಗೊಮ್ಮೆ ಸೂಕ್ಷ್ಮವಾಗಿ ಗಮನಿಸುತ್ತಿದೆ. ಯಾವುದೇ ಸಮಸ್ಯೆಯಾಗದಂತೆ ಸರ್ಕಾರ ಪರ್ಯಾಯ ವ್ಯವಸ್ಥೆ ಮಾಡಲಿದೆ ಎಂದು ಹೇಳಿದರು.

ಅಗತ್ಯ ಬಿದ್ದರೆ ನಾವು ಪರೀಕ್ಷೆಗಳನ್ನು ನಿಲ್ಲಿಸುತ್ತೇವೆ. ಆದರೂ ಪರೀಕ್ಷೆಗಳಲ್ಲಿ ಸ್ಟ್ಯಾಂಡರ್ಡ್ ಆಪರೇಟಿಂಗ್ ಕಾರ್ಯವಿಧಾನವನ್ನು ಕಟ್ಟುನಿಟ್ಟಾಗಿ ನಿರ್ವಹಿಸಲಾಗುತ್ತದೆ. ಏಕೆಂದರೆ ನಾವು ದೈಹಿಕ ಅಂತರವನ್ನು ಕಾಯ್ದುಕೊಂಡು ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡುತ್ತೇವೆ ಎಂದರು.

ಜನರು ಭಯಪಡುವ ಅಗತ್ಯವಿಲ್ಲ. ಯಾಕೆಂದರೆ ಲಾಕ್ ಡೌನ್ ನಂತರ ಸಾಮಾನ್ಯ ಶಾಲೆಗಳನ್ನು ಆರಂಭಿಸಿದ್ದೇವೆ. ಶಾಲೆಗಳನ್ನು ಮತ್ತೆ ಮುಚ್ಚಿದರೆ ಮಕ್ಕಳನ್ನು ತರಗತಿಗಳಿಗೆ ಕರೆತರುವುದು ಕಷ್ಟವಾಗುತ್ತದೆ ಎಂದು ತಿಳಿಸಿದರು.

ಕೊವಿಡ್ ಪರಿಸ್ಥಿತಿಯು ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಕಂಡುಬಂದರೆ ಶಿಕ್ಷಣ ಇಲಾಖೆ ಕಠಿಣ ಕ್ರಮ ಕೈಗೊಳ್ಳುತ್ತದೆ ಎಂದು ಪೋಷಕರಿಗೆ ಭರವಸೆ ನೀಡಿದರು.

ವಿದ್ಯಾರ್ಥಿಗಳ ಹಾಸ್ಟೆಲ್ ನಲ್ಲಿ ಕೊವಿಡ್ ಏಕಾಏಕಿ ವರದಿಯಾದ ಹಿನ್ನೆಲೆಯಲ್ಲಿ ಸೋಮವಾರ ಬೆಳಗ್ಗೆ ಬೆಂಗಳೂರಿನ ಸ್ವಾಯತ್ತ ಕಾಲೇಜಿನಲ್ಲಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು ಎಂದು ಹೇಳಲಾಗಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular