Friday, September 20, 2024
Google search engine
Homeಮುಖಪುಟಕರ್ನಾಟಕದಲ್ಲಿ 2 ಒಮಿಕ್ರಾನ್ ಪ್ರಕರಣಗಳು ಪತ್ತೆ -ಭಯಭೀತರಾಗದಂತೆ ಜನರಿಗೆ ಮನವಿ

ಕರ್ನಾಟಕದಲ್ಲಿ 2 ಒಮಿಕ್ರಾನ್ ಪ್ರಕರಣಗಳು ಪತ್ತೆ -ಭಯಭೀತರಾಗದಂತೆ ಜನರಿಗೆ ಮನವಿ

ದೇಶದಲ್ಲಿ ಒಮಿಕ್ರಾನ್ ರೂಪಾಂತರದ ಎರಡು ಪ್ರಕರಣಗಳು ಪತ್ತೆಯಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಗುರುವಾರ ಹೇಳಿದೆ. ಎರಡೂ ಪ್ರಕರಣಗಳನ್ನು ಕರ್ನಾಟಕದಲ್ಲಿ ಪತ್ತೆ ಹಚ್ಚಲಾಗಿದೆ ಎಂದು ಕೇಂದ್ರ ಗೃಹ ಸಚಿವಾಲಯದ ಜಂಟಿ ಕಾರ್ಯದರ್ಶಿ ಲವ್ ಅಗರ್ವಾಲ್ ಸ್ಪಷ್ಟಪಡಿಸಿದ್ದಾರೆ.

ಒಂದು ಪ್ರಕರಣವು 46 ವರ್ಷ ವಯಸ್ಸಿನ ಪುರುಷನದ್ದಾಗಿದ್ದರೆ, ಇನ್ನೊಂದು 66 ವರ್ಷ ವಯಸ್ಸಿನ ಪುರುಷನದ್ದಾಗಿದೆ. ಇಬ್ಬರು ರೋಗಿಗಳ ಎಲ್ಲಾ ಪ್ರಾಥಮಿಕ ಮತ್ತು ಮಾಧ್ಯಮಿಕ ಸಂಪರ್ಕಗಳನ್ನು ಪತ್ತೆಹಚ್ಚಲಾಗಿದೆ ಮತ್ತು ಪರೀಕ್ಷಿಸಲಾಗುತ್ತಿದೆ ಎಂದು ಸರ್ಕಾರ ಹೇಳಿದೆ.

ಕೊವಿಡ್-19ರ ಒಮಿಕ್ರಾನ್ ರೂಪಾಂತರದ ಯಾವುದೇ ತೀವ್ರವಾದ ರೋಗಲಕ್ಷಣಗಳು ಇಲ್ಲಿಯವರೆಗೆ ವರದಿಯಾಗಿಲ್ಲ. ಈವರೆಗೆ ಕಂಡುಬಂದಿರುವ ಒಮಿಕ್ರಾನ್ ಪ್ರಕರಣಗಳು ಸೌಮ್ಯ ರೋಗಲಕ್ಷಣಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.

ದೇಶದಲ್ಲಿ ಮತ್ತು ವಿಶ್ವಾದ್ಯಂತ ಇದುವರೆಗೆ ಕಂಡುಬಂದಿರುವ ಒಮಿಕ್ರಾನ್ ಪ್ರಕರಣಗಳಲ್ಲಿ ಯಾವುದೇ ತೀವ್ರವಾದ ರೋಗಲಕ್ಷಣ ಗುರುತಿಸಲಾಗಿಲ್ಲ. ಆದರೆ ಈ ಪುರಾವೆಗಳನ್ನು ಅಧ್ಯಯನ ಮಾಡಲಾಗುತ್ತಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ ಎಂದು ಅವರು ತಿಳಿಸಿದ್ದಾರೆ.

ಜನರು ಭಯಭೀತರಾಗಬೇಡಿ ಮತ್ತು ಕೊವಿಡ್ ನಿಯಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸುವಂತೆ ಆರೋಗ್ಯ ಸಚಿವಾಲಯ ಜನರಲ್ಲಿ ಮನವಿ ಮಾಡಿದೆ. ಡೆಲ್ಟಾ ಸೇರಿ ರೂಪಾಂತರಗಳಿಗೆ ಹೋಲಿಸಿದರೆ ಒಮಿಕ್ರಾನ್ ಹೆಚ್ಚು ತೀವ್ರ ಸೋಂಕು ಉಂಟುಮಾಡುತ್ತದೆಯೇ ಅಥವಾ ಕಡಿಮೆ ಪರಿಣಾಮ ಬೀರಲಿದೆಯೇ ಎಂದು ನಿರ್ಧರಿಸಲು ಇದು ಸೂಕ್ತ ಕಾಲವಲ್ಲ ಎಂದು ಹೇಳಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular