ಪಂಜಾಬ್ ವಿಧಾನಸಭ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ. ಆದರೆ ಪಂಜಾಬ್ ಆಡಳಿತದ ಮಾದರಿಯನ್ನು ಪ್ರಸ್ತುತಪಡಿಸಲು ಜನರನ್ನು ಒಗ್ಗೂಡಿಸುತ್ತಿರುವುದಾಗಿ ಭಾರತೀಯ ಕಿಸಾನ್ ಯೂನಿಯನ್ ಹರಿಯಾಣ ಮುಖ್ಯಸ್ಥ ಗುರುನಾಮ್ ಸಿಂಗ್ ಚಾರುಣಿ ತಿಳಿಸಿದ್ದಾರೆ.
ಪಂಜಾಬ್ ನಲ್ಲಿ ನಮ್ಮ ಸರ್ಕಾರ ಬಂದರೆ ಚುನಾವಣೆಗೆ ನಾವು ನಮ್ಮದೇ ಆದ ಪಕ್ಷವನ್ನು ರಚಿಸುತ್ತೇವೆ. 2024ರಲ್ಲಿ ಇಡೀ ದೇಶದ ಸಮೀಕ್ಷೆಗಳು ಪಂಜಾಬ್ ಮಾದರಿಯನ್ನು ಎದುರು ನೋಡುತ್ತವೆ ಎಂದು ಹೇಳಿದ್ದಾರೆ.
ನಾವು ಮಿಷನ್ ಪಂಜಾಬ್ ನಡೆಸುತ್ತಿದ್ದೇವೆ. ಮತ ಹೊಂದುವವರು ಆಡಳಿತ ನಡೆಸಬೇಕು. ಹಣ ಹೊಂದಿರುವವರು ಅಲ್ಲ. ಹಿಂದಿನ ನಿಯಮಗಳು ಮತದಾರರ ಪರವಾಗಿ ಕಾನೂನುಗಳನ್ನು ರಚಿಸುತ್ತವೆ. ಆದರೆ ಇಂದು ಶ್ರೀಮಂತರ ಪರವಾಗಿ ಕಾನೂನುಗಳನ್ನು ರಚಿಸಲಾಗುತ್ತಿದೆ ಎಂದು ತಿಳಿಸಿದರು.
2022ರಲ್ಲಿ ಪಂಜಾಬ್ ವಿಧಾನಸಭಾ ಚುನಾವಣೆಗಳು ನಡೆಯಲಿವೆ. 2017ರಲ್ಲಿ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ 77 ಸ್ಥಾನಗಳಲ್ಲು ಗೆಲ್ಲುವ ಮೂಲಕ ರಾಜ್ಯದಲ್ಲಿ ಸಂಪೂರ್ಣ ಬಹುಮತ ಗಳಿಸಿತ್ತು. ಹತ್ತು ವರ್ಷಗಳ ನಂತರ ಶಿರೋಮಣಿ ಅಕಾಲಿ ದಳ-ಬಿಜೆಪಿ ನೇತೃತ್ವದ ಸರ್ಕಾರವನ್ನು ಹೊರಹಾಕಿತ್ತು.
117 ಸದಸ್ಯ ಬಲದ ಪಂಜಾಬ್ ವಿಧಾನಸಭೆಯಲ್ಲಿ ಆಮ್ ಆದ್ಮಿ ಪಕ್ಷ 20 ಸ್ಥಾನಗಳನ್ನು ಗೆದ್ದು ಎರಡನೇ ದೊಡ್ಡ ಪಕ್ಷವಾಗಿ ಹೊರ ಹೊಮ್ಮಿದೆ. ಶಿರೋಮಣಿ ಅಕಾಲಿ ದಳ ಕೇವಲ 15 ಸ್ಥಾನಗಳಲ್ಲಿ ಗೆಲ್ಲುವಲ್ಲಿ ಯಶಸ್ವಿಯಾಗಿದ್ದರೆ, ಬಿಜೆಪಿ 3 ಸ್ಥಾನಗಳಿಗೆ ತೃಪ್ತಿಪಟ್ಟುಕೊಂಡಿದೆ.