Monday, December 23, 2024
Google search engine
Homeಮುಖಪುಟಪ್ರತಿಪಕ್ಷಗಳು ಒಂದುಗೂಡುವ ಸಮಯ ಇದು - ಲಾಲೂ

ಪ್ರತಿಪಕ್ಷಗಳು ಒಂದುಗೂಡುವ ಸಮಯ ಇದು – ಲಾಲೂ

ಪ್ರಧಾನಿ ಮೋದಿ ನೇತೃತ್ವದ ಏಕವ್ಯಕ್ತಿ ಸರ್ಕಾರ ದೇಶವನ್ನು ಸರ್ವಾಧಿಕಾರಿ ಆಡಳಿತದ ಮೂಲಕ ನಡೆಸುತ್ತಿದೆ ಎಂದು ಕೇಂದ್ರ ಮಾಜಿ ರೈಲ್ವೆ ಸಚಿವ ಲಾಲೂ ಪ್ರಸಾದ್ ಯಾದವ್ ತಿಳಿಸಿದ್ದಾರೆ.

ಸರ್ವಾಧಿಕಾರದ ಮೋದಿ ಸರ್ಕಾರದ ಹಿಡಿತದಿಂದ ದೇಶವನ್ನು ಪಾರು ಮಾಡಲು ಎಲ್ಲಾ ಪ್ರತಿಪಕ್ಷಗಳು ತಮ್ಮ ಭಿನ್ನಾಭಿಪ್ರಾಯಗಳನ್ನ ಮರೆತು ಒಂದಾಗುವ ಸಮಯ ಬಂದಿದೆ ಎಂದು ನ್ಯೂ ಇಂಡಿಯನ್ ಎಕ್ಸ್ ಪ್ರೆಸ್ ಗೆ ನೀಡಿದ ಸಂದರ್ಶನದಲ್ಲಿ ಸಲಹೆ ನೀಡಿದ್ದಾರೆ.

ನಾನು ಇತ್ತೀಚೆಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರೊಂದಿಗೆ ಮಾತನಾಡಿದ್ದೇನೆ. ತಕ್ಷಣವೇ ಎಲ್ಲ ಪ್ರತಿಪಕ್ಷಗಳ ಸಭೆ ಕರೆಯುವಂತೆ ಒತ್ತಾಯಿಸಿದ್ದೇವೆ. ಸರ್ವಾಧಿಕಾರಿ ಪ್ರಭುತ್ವದ ಮೋದಿ ಸರ್ಕಾರದ ವಿರುದ್ಧ ಸಂಘಟಿತವಾಗಿ ಹೋರಾಟ ಮಾಡಬೇಕು ಎಂದು ಲಾಲೂ ಹೇಳಿದ್ದಾರೆ.

ದೇಶಾದ್ಯಂತ ಕೃಷಿ ಕಾನೂನುಗಳ ವಿರುದ್ಧ ರೈತರು ಪ್ರದರ್ಶಸಿದ ರೀತಿಯ ಒಗ್ಗಟ್ಟನ್ನು ಪ್ರತಿಪಕ್ಷಗಳು ತೋರಿಸುವುದರಲ್ಲಿ ನನಗೆ ಸಂದೇಶವಿಲ್ಲ. ಮೋದಿ ಸರ್ಕಾರವನ್ನು ಎದುರಿಸಲು ಪ್ರತಿಪಕ್ಷಗಳು ನಾಯಕತ್ವದ ಬಿಕ್ಕಟ್ಟು ಎದುರಿಸುತ್ತಿಲ್ಲ. ಬಿಜೆಪಿಯ ಬಣ್ಣವನ್ನು ಜನರ ಮುಂದೆ ಬಯಲುಗೊಳಿಸಬೇಕಾಗಿದೆ ಎಂದರು.

ಹಣದುಬ್ಬರ ಮತ್ತು ನಿರುದ್ಯೋಗದಿಂದ ಜನರು ತತ್ತರಿಸಿದ್ದಾರೆ. ಮೋದಿ ಸರ್ಕಾರ ಈ ಸಮಸ್ಯೆಯನ್ನು ಬಗೆಹರಿಸಲು ಸಂಪೂರ್ಣ ವಿಫಲವಾಗಿದೆ. ಬಿಜೆಪಿಯ ಈ ವೈಫಲ್ಯವನ್ನು ಮುಂದಿಟ್ಟುಕೊಂಡು ಜನರ ಬಳಿ ಹೋಗಬೇಕು ಎಂದು ಹೇಳಿದರು.

ಮೋದಿ ಸರ್ಕಾರ ಖಾಸಗೀಕರಣವನ್ನು ಉತ್ತೇಜಿಸುತ್ತಿದೆ. ಈ ಮೂಲಕ ರೈಲ್ವೆಯನ್ನು ಹಾಡು ಮಾಡಿರುವುದನ್ನು ನಾವು ನೋಡಬಹುದು. ಏರ್ ಇಂಡಿಯಾವನ್ನು ಮಾರಾಟ ಮಾಡಿದೆ. ದೇಶದ ಆಸ್ತಿಗಳನ್ನು ಮಾರಾಟ ಮಾಡಲು ಯೋಜಿಸುತ್ತಿದೆ ಎಂದು ಲಾಲೂ ಸಂದರ್ಶನದಲ್ಲಿ ಆರೋಪಿಸಿದ್ದಾರೆ.

ಪ್ರಜಾಪ್ರಭುತ್ವ ಮತ್ತು ಸಂವಿಧಾನದ ಮೇಲೆ ದಾಳಿ ನಡೆಸಲಾಗುತ್ತಿದೆ. ಅಮಾಯಕರನ್ನು ಗುರಿಯಾಗಿಸಿಕೊಂಡು ದ್ವೇಷವನ್ನು ಹರಡಲಾಗುತ್ತಿದೆ ಎಂದು ತಿಳಿಸಿದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular