ಕನ್ನಡ ಸಾಹಿತ್ಯ ಪರಿಷತ್ ತುಮಕೂರು ಜಿಲ್ಲಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯ ಮತ ಎಣಿಕೆ ನಡೆದು ಕೆ.ಎಸ್. ಸಿದ್ದಲಿಂಗಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.
ಪಾವಗಡ, ಕುಣಿಗಲ್ ಮತ್ತು ಚಿಕ್ಕನಾಯಕನಹಳ್ಳಿ ಗುಬ್ಬಿ, ಕೊರಟಗೆರೆ, ಮಧುಗಿರಿ ತಾಲ್ಲೂಕುಗಳಲ್ಲಿ ಸಿದ್ದಲಿಂಗಪ್ಪ ಅಧಿಕ ಮತ ಪಡೆದರು. ಹೀಗಾಗಿ ಪ್ರತಿಸ್ಪರ್ಧಿ ಶೈಲಾ ನಾಗರಾಜ್ ಅವರಿಗಿಂತ 697 ಮತಗಳನ್ನು ಪಡೆದು ಜಯ ಗಳಿಸಿದ್ದಾರೆ.
ಸಿದ್ದಲಿಂಗಪ್ಪ 2520
ಶೈಲಾ ನಾಗರಾಜ್ 1823
ದೇವರಾಜ್ 899
ಚಂದ್ರಪ್ಪ 961
ಪುಟ್ಟಕಾಮಣ್ಣ 206
ಮಹದೇವಯ್ಯ 66
ಅನರ್ಹ ಮತ 38
ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಮತದಾನ ನಡೆದಿದ್ದು ತುಮಕೂರು ಜಿಲ್ಲೆಯಲ್ಲಿ 6513 ಮತಗಳು ಚಲಾವಣೆ ಗೊಂಡಿದ್ದು ಶೇಕಡ 46ರಷ್ಟು ಮತದಾನ ದಾಖಲಾಗಿತ್ತು.
ತುಮಕೂರು ತಾಲ್ಲೂಕಿನಲ್ಲಿ 1811 ಮಂದಿ ಮತದ ಹಕ್ಕು ಚಲಾಯಿಸಿದ್ದರೆ, ಶಿರಾದಲ್ಲಿ 625 ಮಂದಿ ಮತದಾನ ಮಾಡಿದ್ದರು. ತುರುವೇಕೆರೆಯಲ್ಲಿ 549, ಕುಣಿಗಲ್ ನಲ್ಲಿ 551, ಹುಲಿಯೂರುದುರ್ಗ 140 ಮತದಾನವಾಗಿತ್ತು.
ತಿಪಟೂರು ತಾಲ್ಲೂಕಿನಲ್ಲಿ 537, ಮಧುಗಿರಿಯಲ್ಲಿ 431, ನಿಟ್ಟೂರು 365, ಚಿಕ್ಕನಾಯಕನಹಳ್ಳಿ 200, ಪಾವಗಡ 289, ಗುಬ್ಬಿ 480 ಮತದಾರರು ತಮ್ಮ ಹಕ್ಕು ಚಲಾಯಿಸಿದ್ದರು.