Friday, September 20, 2024
Google search engine
Homeಮುಖಪುಟನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ-ಅಸ್ಸರ್ ನಡುವೆ ವಿವಾಹ - ಪೋಟೋ ಹಂಚಿಕೊಂಡ ಶಿಕ್ಷಣ ಕಾರ್ಯಕರ್ತೆ

ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ-ಅಸ್ಸರ್ ನಡುವೆ ವಿವಾಹ – ಪೋಟೋ ಹಂಚಿಕೊಂಡ ಶಿಕ್ಷಣ ಕಾರ್ಯಕರ್ತೆ

ನೊಬೆಲ್ ಪ್ರಶಸ್ತಿ ಪುರಸ್ಕೃತೆ ಮಲಾಲಾ ಯೂಸುಫ್ ಝಾಯ್ ಅವರು ಕ್ರಿಕೆಟಿಗ ಅಸ್ಸಾರ್ ಅವರನ್ನು ವಿವಾಹವಾಗಿದ್ದಾರೆ. ಬ್ರಿಟನ್ ನ ಬರ್ಮಿಂಗ್ ಹ್ಯಾಮ್ ನಲ್ಲಿ ವಿವಾಹ ನಡೆದಿರುವ ಸಮಾರಂಭದ ಪೋಟೋಗಳನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದಾಋಎ.

“ಇಂದು ನನ್ನ ಜೀವನದಲ್ಲಿ ಒಂದು ಅಮೂಲ್ಯ ದಿನವಾಗಿದೆ. ಆಸ್ಸರ್ ಮತ್ತು ನಾನು ಪಾಲುದಾರರಾಗಲು ವಿವಾಹ ಬಂಧನಕ್ಕೆ ಒಳಗಾಗಿದ್ದೇವೆ. ನಾವು ನಮ್ಮ ಕುಟುಂಬಗಳೊಂದಿಗೆ ಬರ್ಮಿಂಗ್ ಹ್ಯಾಮ್ ನಲ್ಲಿ ಸಣ್ಣ ನಿಕಾ ಸಮಾರಂಭ ಆಚರಿಸಿದೆವು. ದಯವಿಟ್ಟು ನಿಮ್ಮ ಹಾರೈಕೆ ಇರಲಿ. ಮುಂದಿನ ಪ್ರಯಾಣಕ್ಕಾಗಿ ನಾವು ಒಟ್ಟಿಗೆ ಹೋಗಲು ಉತ್ಸುಕರಾಗಿದ್ದೇವೆ” ಎಂದು ಶ್ರೀಮತಿ ಯೂಸುಫ್ ಜೈ ಟ್ವೀಟ್ ಮಾಡಿದ್ದಾರೆ.

ಮಲಾಲಾ ಯೂಸುಫ್ ಝಾಯ್ ಪಾಕಿಸ್ತಾನದಲ್ಲಿ ಜನಿಸಿದರು. 2012ರಲ್ಲಿ ತಾಲಿಬಾನ್ ಭಯೋತ್ಪಾದಕರು ಆಕೆಗೆ ಕೇವಲ 11 ವರ್ಷದವಳಿದ್ದಾಗ ಹೆಣ್ಣು ಮಕ್ಕಳು ಮತ್ತು ಅವರ ಕಲಿಕೆಯ ಹಕ್ಕಿನ ಪರ ಸಾರ್ವಜನಿಕವಾಗಿ ಮಾತನಾಡಿದ್ದಕ್ಕಾಗಿ ಆಕೆಯ ಮೇಲೆ ಗುಂಡು ಹಾರಿಸಿದ್ದರು.

ಗಾಯಾಳು ಮಲಾಲಾ ಅವರನ್ನು ಬರ್ಮಿಂಗ್ ಹ್ಯಾಮ್ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಅಲ್ಲಿ ಅವರು ಚೇತರಿಸಿಕೊಡರು. ನಂತರ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಚಟುವಟಿಕೆ ಮುಂದುವರಿಸಿದರು.

2014ರಲ್ಲಿ ಶಸ್ತ್ರಚಿಕಿತ್ಸೆಯ ನಂತರ ಆಕೆ ಯುನೈಟೆಡ್ ಕಿಂಗ್ ಡಮ್ ನಲ್ಲಿರುವ ತಮ್ಮ ಕುಟುಂಬವನ್ನು ಸೇರಿಕೊಂಡರು. ತನ್ನ ತಂದೆಯ ಸಹಾಯದಿಂದ ನಿಧಿ ಸ್ಥಾಪಿಸಿದರು. ಅದು ಪ್ರತಿ ಹೆಣ್ಣು ತಾನು ಆಯ್ಕೆ ಮಾಡುವ ಭವಿಷ್ಯವನ್ನು ಸಾಧಿಸಲು ಅವಕಾಶ ನೀಡುವ ಮೀಸಲು ಚಾರಿಟಿಯಾಗಿದೆ.

ಮಲಾಲಾ ಸಾಧನೆಯನ್ನು ಗುರುತಿಸಿ ಡಿಸೆಂಬರ್ 2014ರಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ನೀಡಲಾಯಿತು. ಅತ್ಯಂತ ಕಿರಿಯ ವಯಸ್ಸಿಗೆ ನೊಬೆಲ್ ಪ್ರಶಸ್ತಿ ಪಡೆದ ಮಹಿಳೆಯಾಗಿದ್ದಾರೆ. ಆಕ್ಸ್ ಫರ್ಡ್ ವಿಶ್ವವಿದ್ಯಾಲಯದಲ್ಲಿ ತತ್ವಶಾಸ್ತ್ರ, ರಾಜಕೀಯ ಮತ್ತು ಅರ್ಥಶಾಸ್ತ್ರವನ್ನು ಅಧ್ಯಯನ ಮಾಡಿ 2020ರಲ್ಲಿ ಪದವಿ ಪಡೆದಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular