ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಕಡಿತಗೊಳಿಸಿದ ನಂತರ ದೇಶಾದ್ಯಂತ ಇಂಧನ ಬೆಲೆಗಳಲ್ಲಿ ಅಲ್ಪ ಮಟ್ಟದ ಬೆಲೆ ಇಳಿಕೆಯಾಗಿದೆ.
ಇಂಡಿಯನ್ ಆಯಿಲ್ ಕಾರ್ಪೋರೇಷನ್ ಪ್ರಕಾರ ದೇಶದ ರಾಜಧಾನಿಯಲ್ಲಿ ಪೆಟ್ರೋಲ್ ಬೆಲೆ 109 ರೂನಿಂದ 103.97ಕ್ಕೆ ಇಳಿದಿದೆ. ಡೀಸೆಲ್ ಬೆಲೆ 86.67 ರೂಗೆ ಇಳಿದಿದೆ. ಸತತ ಏಳು ದಿನಗಳ ನಿರಂತರ ಏರಿಕೆಯ ನಂತರ ದೆಹಲಿಯಲ್ಲಿ ದೆಹಲಿಯಲ್ಲಿ ಪೆಟ್ರೋ-ಡೀಸೆಲ್ ಬೆಲೆ ಗರಿಷ್ಠ ಮಟ್ಟವನ್ನು ತಲುಪಿತ್ತು.
ಇಂಧನ ಬೆಲೆಗಳ ಮೇಲಿನ ಅಬಕಾರಿ ಸುಂಕ ಕಡಿತಗೊಳಿಸುವ ಕ್ರಮದಿಂದ ಸರ್ಕಾರಕ್ಕೆ ವಾರ್ಷಿಕ 1.4 ಲಕ್ಷ ಕೋಟಿ ನಷ್ಟವಾಗಲಿದೆ.
ಮುಂಬೈನಲ್ಲಿ ಪ್ರಸ್ತುತ ಪೆಟ್ರೋಲ್ ಬೆಲೆ 109.98 ರೂ ಮತ್ತು ಡೀಸೆಲ್ ಪ್ರತಿ ಲೀಟರ್ ಗಗೆ 94.14 ರೂಗೆ ಮಾರಾಟ ಮಾಡಲಾಗುತ್ತಿದೆ.
ಚೆನ್ನೈನಲ್ಲಿ ಪೆಟ್ರೋಲ್ ಬೆಲೆ ಪ್ರತಿ ಲೀಟರ್ ಗೆ 101.40ರೂಗಳಿಗೆ ಮಾರಾಟ ಮಾಡಲಾಗುತ್ತಿದೆ. ಡೀಸೆಲ್ ಬೆಲೆ 91.43 ರೂಗೆ ಇಳಿದಿದೆ. ನಾಲ್ಕು ಮೆಟ್ರೋ ನಗರಗಳಲ್ಲಿ ಇಂಧನ ದರಗಳು ಮುಂಬೈನಲ್ಲಿ ಅತ್ಯಧಿಕವಾಗಿದೆ ಎಂದು ಸರ್ಕಾರಿ ತೈಲ ಸಂಸ್ಕರಣಾಗಾರ ತಿಳಿಸಿದೆ.
ಇಂಡಿನ್ ಆಯಿಲ್, ಭಾರತ್ ಪೆಟ್ರೋಲಿಯಂ ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂನಂತಹ ಸರ್ಕಾರಿ ತೈಲ ಸಂಸ್ಕರಣಾಗಾರಗಳು ಅಂತಾರಾಷ್ಟ್ರೀಯ ಮಾರುಟ್ಟೆಯಲ್ಲಿ ಕಚ್ಚಾ ತೈಲ ಬೆಲೆಗಳು ಮತ್ತು ರೂಪಾಯಿ-ಡಾಲರ್ ವಿನಿಮಯ ದರಗಳನ್ನು ಗಣನೆಗೆ ತೆಗೆದುಕೊಂಡು ಪ್ರತಿದಿನವೂ ಇಂಧನ ದರಗಳನ್ನು ಪರಿಸ್ಕರಿಸುತ್ತವೆ. ಪ್ರತಿದಿನ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯ ಪರಿಷ್ಕೃತ ದರಗಳನ್ನು ಜಾರಿಗೆ ತರಲಾಗುತ್ತದೆ.
ಇದೇ ವೇಳೆ ಬಿಜೆಪಿ ಆಡಳಿತ ನಡೆಸುತ್ತಿರುವ ರಾಜ್ಯಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಸುಂಕವನ್ನು ಇಳಿಸಲು ನಿರ್ಧರಿಸಿವೆ.


