Saturday, October 19, 2024
Google search engine
Homeಮುಖಪುಟಕಾಂಗ್ರೆಸ್ ಪಿಂಚಣಿ ಪಡೆಯುವ ಕುಟುಂಬ ಪಕ್ಷ - ಧರ್ಮೇಂದ್ರ ಪ್ರಧಾನ್ ಆರೋಪ

ಕಾಂಗ್ರೆಸ್ ಪಿಂಚಣಿ ಪಡೆಯುವ ಕುಟುಂಬ ಪಕ್ಷ – ಧರ್ಮೇಂದ್ರ ಪ್ರಧಾನ್ ಆರೋಪ

ಕಾಂಗ್ರೆಸ್ ಪಿಂಚಣಿ ಮೇಲಿನ ಕುಟುಂಬ ಪಕ್ಷವಾಗಿದೆ ಮತ್ತು ಉತ್ತರ ಪ್ರದೇಶದ ಮಾಜಿ ಮುಖ್ಯಮಂತ್ರಿ ಅಖಿಲೇಶ್ ಯಾದವ್ ತಮ್ಮ ಕುಟುಂಬವನ್ನು ಬಲಪಡಿಸುವ ಕೆಲಸದಲ್ಲಿ ನಿರತರಾಗಿದ್ದಾರೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ ಲೇವಡಿ ಮಾಡಿದ್ದಾರೆ.

ಉತ್ತರ ಪ್ರದೇಶದಲ್ಲಿ ಬಿಜೆಪಿ ಹಿಂದುಳಿದ ವರ್ಗದ ಫ್ರೆಂಟ್ ವತಿಯಿಂದ ಹಮ್ಮಿಕೊಂಡಿದ್ದ ಕುರ್ಮಿ ಸಮುದಾಯದ ಪ್ರತಿನಿಧಿ ಸಮ್ಮೇಳನದಲ್ಲಿ ಅವರು ಮಾತನಾಡಿದರು.

“ನಿನ್ನೆ ಸುದ್ದಿಯನ್ನು ನೋಡುತ್ತಿದ್ದೆ. “ಯುವರಾಜನ” ಕುಟುಂಬ ಹಿಂದುಳಿದ ನಾವೆಲ್ಲರೂ ಒಂದಾಗಬೇಕು ಎಂದು ಹೇಳುತ್ತಿತ್ತು. ಹಿಂದುಳಿದ ನೀವು ಒಂದಾಗುತ್ತಿದ್ದೀರೋ ಅಥವಾ ಕುಟುಂಬವನ್ನು ಬಲಪಡಿಸುತ್ತಿದ್ದರೋ ಎಂದು ನಾನು ಅವರಿಗೆ ಕೇಳುತ್ತೇನೆ. ಮೌ ನಲ್ಲಿ ಸುಹಲ್ದೇವ್ ಭಾರತೀಯ ಸಮಾಜ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳುವ ಹೇಳಿಕೆ ನೀಡಿದ ಬೆನ್ನಹಿಂದೆಯೇ ಧರ್ಮೇಂದ್ರ ಪ್ರಧಾನ್ ಅವರಿಂದ ಈ ಟೀಕೆ ಹೊರಬಿದ್ದಿದೆ.

ದೆಹಲಿಯಲ್ಲಿರುವ ಕುಟುಂಬ ಪಕ್ಷವನ್ನು ಯಾರು ಮುನ್ನಡೆಸಬೇಕು ಎಂಬುದನ್ನು ನಿರ್ಧರಿಸಲು ಸಾಧ್ಯವಾಗುತ್ತಿಲ್ಲ. ಅಂಥ ಸ್ಥಿತಿಗೆ ತಲುಪಿದ ಕಾಂಗ್ರೆಸ್ ಪಕ್ಷ. ಅಂತಹ ಪಕ್ಷ ನಾವು ಅಧಿಕಾರಕ್ಕೆ ಬಂದರೆ ಪಿಂಚಣಿ ಯೋಜನೆ ಜಾರಿಗೊಳಿಸುತ್ತೇವೆ ಎಂದು ಹೇಳುತ್ತಿದೆ. ಆದರೆ ನಿಜವಾಗಿಯೂ ನೀವೇ ಪಿಂಚಣಿ ಪಡೆಯುವ ಸ್ಥಿತಿಯಲ್ಲಿದ್ದೀರಿ ಎಂದು ನಾನು ಹೇಳುತ್ತೇನೆ ಎಂದು ಗೇಲಿ ಮಾಡಿದ್ದಾರೆ.

ಹಿಂದಿನ ಸರ್ಕಾರಗಳ ಅವಧಿಯಲ್ಲಿ ಕೇವಲ ಎಸ್.ಸಿ-ಎಸ್.ಟಿ ಆಯೋಗವನ್ನು ಮಾತ್ರ ರಚಿಸಲಾಗಿತ್ತು. ಆದರೆ ಒಬಿಸಿ ಆಯೋಗವನ್ನು ರಚಿಸಿರಲಿಲ್ಲ. ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಮಾನ್ಯತೆ ನೀಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಕನ್ನಡ

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular