Friday, October 18, 2024
Google search engine
Homeಮುಖಪುಟನಿರಂತರ 4ನೇ ದಿನ ಪೆಟ್ರೊಲ್ ಡೀಸೆಲ್ ಬೆಲೆ ಏರಿಕೆ

ನಿರಂತರ 4ನೇ ದಿನ ಪೆಟ್ರೊಲ್ ಡೀಸೆಲ್ ಬೆಲೆ ಏರಿಕೆ

ದೇಶದಲ್ಲಿ ನಿರಂತರ ನಾಲ್ಕನೇ ದಿನವೂ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆಯಾಗುತ್ತಲೇ ಇದೆ. ಭಾನುವಾರವೂ ತೈಲ ಬೆಲೆ ಏರಿಕೆಯಾಗಿದ್ದು ಪೆಟ್ರೋಲ್ ಬೆಲೆ 35 ಪೈಸೆ ಮತ್ತು ಡೀಸೆಲ್ 35 ಪೈಸೆಯಷ್ಟು ಹೆಚ್ಚಳವಾಗಿದೆ. ಮುಂಬೈನಲ್ಲಿ ಪೆಟ್ರೋಲ್ ಬೆಲೆ 111 ರೂಪಾಯಿ ದಾಟಿ ದಾಖಲೆ ಬರೆದಿದೆ.

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 105.84 ರೂಗೆ ಏರಿದ್ದರೆ, ಡೀಸೆಲ್ ಬೆಲೆ 94.57 ರೂಗೆ ಏರಿಕೆಯಾಗಿದೆ ಎಂದು ಇಂಡಿಯನ್ ಆಯಿಲ್ ಕಾರ್ಪೋರೇಷನ್ ತಿಳಿಸಿದೆ.

ಪೆಟ್ರೋಲ್ ದರದಲ್ಲಿ ಶೇಕಡ 33ರಷ್ಟು ಹೆಚ್ಚಳವಾಗಿದೆ. ವಿಮಾನಕ್ಕೆ ಬಳಸುವ ಪೆಟ್ರೋಲ್ ಬೆಲೆ 79 ರೂಪಾಯಿ ಆಗಿದೆ.

ಮುಂಬೈನಲ್ಲಿ ಪೆಟ್ರೋಲ್ ಬೆಲೆ 34 ಪೈಸೆಯಷ್ಟು ಹೆಚ್ಚಳವಾಗಿದ್ದು ಇದೀಗ ಪೆಟ್ರೋಲ್ ಬೆಲೆ 111.77 ರೂಗೆ ಏರಿದೆ. ಡೀಸೆಲ್ ಬೆಲೆ 37 ಪೈಸೆ ಹೆಚ್ಚಳ ಕಂಡಿದ್ದು ಈಗ 102.52 ರೂ ಆಗಿದೆ.

ಚೆನ್ನೈ ನಗರದಲ್ಲಿ ಪೆಟ್ರೋಲ್ ಬೆಲೆ 31 ಪೈಸೆ ಹೆಚ್ಚಳವಾಗಿದೆ. ಹೀಗಾಗಿ 103.01 ರೂಗೆ ಏರಿಕೆಯಾಗಿದೆ. ಡೀಸೆಲ್ ಬೆಲೆ 98.92ರೂ ಏರಿದೆ.

ಉತ್ತರ ಭಾರತಕ್ಕೆ ಹೋಲಿಸಿದರೆ ದಕ್ಷಿಣ ರಾಜ್ಯಗಳ ರಾಜಧಾನಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕಡಿಮೆ ಇದೆ ಎಂದು ವಿಶ್ಲೇಷಿಸಲಾಗುತ್ತಿದೆ. ಆದರೆ ಮುಂಬೈನಲ್ಲಿ ಪೆಟ್ರೊಲ್ ಮತ್ತು ಡೀಸೆಲ್ ಬೆಲೆಯಲ್ಲಿ ದಾಖಲೆಯ ಏರಿಕೆ ಕಂಡಿದೆ.

ನಗರ ಪೆಟ್ರೋಲ್ ಡೀಸೆಲ್

ದೆಹಲಿ 105.84 ರೂ 94.57 ರೂ

ಮುಂಬೈ 111.77 ರೂ 102.52 ರೂ

ಚೆನ್ನೈ 103.01 ರೂ 98.92 ರೂ

ಕೋಲ್ಕತ್ತಾ 106.43 ರೂ 97.68 ರೂ

ರಾಜ್ಯದ ಇಂಡಿಯನ್ ಆಯಿಲ್ ಕಾರ್ಪೋರೇಷನ್, ಭಾರತ್ ಪೆಟ್ರೋಲಿಯಂ, ಹಿಂದೂಸ್ಥಾನ್ ಪೆಟ್ರೋಲಿಯಂ ಕಂಪನಿಗಳು ತೈಲ ದರವನ್ನು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲ ಏರಿಕೆಯನ್ನು ಅನುಸರಿಸಿ ನಿತ್ಯವೂ ಬೆಳಗ್ಗೆ 6 ಗಂಟೆಗೆ ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಪರಿಷ್ಕರಿಸಿ ಪ್ರಕಟಿಸುತ್ತಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular