ಎರಡು ದಿನ ಸ್ಥಗಿತವಾಗಿದ್ದ ಇಂಧನ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ಲೀಟರ್ ಪೆಟ್ರೋಲ್ ಗೆ 35 ಪೈಸೆ ಮತ್ತು ಡೀಸೆಲ್ ಗೆ 35 ಪೈಸೆ ಹೆಚ್ಚಳವಾಗಿದ್ದು ಮಧ್ಯಪ್ರದೇಶದಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ದಾಖಲೆ ಏರಿಕೆ ಕಂಡುಬಂದಿದೆ.
ದೇಶದ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ಬೆಲೆ 104.79 ರೂ ಇದ್ದರೆ, ಡೀಸೆಲ್ ಬೆಲೆ 93.52 ರೂಗೆ ಹೆಚ್ಚಳವಾಗಿದೆ.
ಹಣಕಾಸು ರಾಜಧಾನಿಯೆಂದೇ ಖ್ಯಾತಿ ಗಳಿಸಿರುವ ಮುಂಬೈ ಪೆಟ್ರೋಲ್ ಬೆಲೆ 34 ಪೈಸೆ ಹೆಚ್ಚಳವಾಗಿ 110.75 ರೂಗೆ ಏರಿಕೆ ಆಗಿದೆ. ಡೀಸೆಲ್ ಬೆಲೆ 37 ಪೈಸೆ ಹೆಚ್ಚಳವಾಗಿ 101.4 ರೂಗೆ ಏರಿಕೆಯಾಗಿದೆ.
ಮಧ್ಯಪ್ರದೇಶದ ಭೋಪಾಲ್ ನಲ್ಲಿ ಪೆಟ್ರೋಲ್ ಬೆಲೆ 113.37 ರೂಗೆ ತಲುಪಿದೆ. ಡೀಸೆಲ್ ಬೆಲ 102.66 ರೂಗೆ ಏರಿಕೆ ಆಗಿದೆ. ಇದು ದೇಶದಲ್ಲೇ ದಾಖಲೆಯ ಏರಿಕೆಯಾಗಿದೆ.
ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿ ಪೆಟ್ರೋಲ್ ಬೆಲೆ 105.43 ರೂ ಇದ್ದರೆ, ಡೀಸೆಲ್ 96.63 ಇದೆ. ಹಾಗೆಯೆ ತಮಿಳುನಾಡಿನ ಚೆನ್ನೈನಲ್ಲಿ ಪೆಟ್ರೋಲ್ ಬೆಲೆ 102.10 ರೂ ಇದ್ದರೆ, ಡೀಸೆಲ್ ಬೆಲೆ 97.93ರೂಗೆ ಏರಿಕೆ ಆಗಿದೆ.
ಭಾರತೀಯ ತೈಲ ಕಂಪನಿಗಳು ಆಟೋ ಇಂಧನವನ್ನು ಕಳೆದ ವಾರ ಹೆಚ್ಚಿಸಿದ್ದವು. ಅಕ್ಟೋಬರ್ 12 ಮತ್ತು 13ರಂದು ತೈಲ ಬೆಲೆ ಏರಿಕೆಯಾಗಿರಲಿಲ್ಲ.


