ಗುಜರಾತ್ ನೂತನ ಮುಖ್ಯಮಂತ್ರಿ ಭೂಪೇಂದ್ರ ಪಟೇಲ್ ಸಂಪುಟದ ಸಚಿವರು ಇಂದು ಪ್ರಮಾಣ ವಚನ ಸ್ವೀಕರಿಸಿದರು. 10 ಮಂದಿ ಕ್ಯಾಬಿನೆಟ್ ದರ್ಜೆ, 14 ಮಂದಿ ರಾಜ್ಯ ಖಾತೆ ಮತ್ತು ಐವರು ಸ್ವತಂತ್ರ ರಾಜ್ಯ ಸಚಿವರಾಗಿ ಪ್ರಮಾಣ ಸ್ವೀಕರಿಸಿದರು.
ರಾಜಧಾನಿ ಗಾಂಧೀ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ 29 ಮಂದಿ ಶಾಸಕರು ಸಚಿವರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದರು. ರಾಜ್ಯಪಾಲ ಆಚಾರ್ಯ ದೇವವ್ರತ ನೂತನ ಸಚಿವರಿಗೆ ಪ್ರತಿಜ್ಞಾವಿಧಿ ಬೋಧಿಸಿದರು.
ಕ್ಯಾಬಿನೆಟ್ ದರ್ಜೆ ಸಚಿವರು
ರಾಜೇಂದ್ರ ತ್ರಿವೇದಿ, ಜಿತು ವಘಾನಿ, ಋಷಿಕೇಶ್ ಪಟೇಲ್, ಪೂರ್ಣೇಶ್ ಮೋದಿ, ರಾಘವ್ ಪಟೇಲ್, ಖಾನುಬಾಯಿ ದೇಸಾಯಿ, ಕಿರಿತ್ ಸಿನ್ಹಾ ರಾಣಾ, ನರೇಶ್ ಪಟೇಲ್, ಪ್ರದೀಪ್ ಪರಮಾರ್, ಅರ್ಜನ್ ಸಿನ್ಹಾ ಚೌಹಾಣ್.
ರಾಜ್ಯ ಸಚಿವರು
ಮುಖೇಶ್ ಪಟೇಲ್, ನಿಮಿಷ ಸುತಹಾರ್, ಅರವಿಂದ್ ರೈಯಾನಿ, ಕುಬೇರ್ ದಿನಡೋರ್, ಕಿರಿತ್ ವಘೇಲ, ಗಜೇಂದ್ರ ಪರಮಾರ್, ರಾಘವ್ ಮುಖವಾನ್, ವಿನೋದ್ ಮೊರಾಡಿಯಾ
ಸ್ವತಂತ್ರ ರಾಜ್ಯ ಸಚಿವರು
ಹರ್ಷ ಸಂಘ್ವಿ, ಜಗದೀಶ್ ಪಂಚಾಲ್, ಬ್ರಿಜೇಶ್ ಮೆರ್ಜಾ, ಜಿತು ಚೌಧರಿ, ಮನಿಶ ವಕಿಲ್
ಸಚಿವ ಸಂಪುಟದಲ್ಲಿ ನಾಲ್ವರು ಪರಿಶಿಷ್ಟ ಪಂಗಡ, ಇಬ್ಬರು ಪರಿಶಿಷ್ಟ ಜಾತಿಗೆ ಸೇರಿದ ಸಚಿವರಿಗೆ ಅವಕಾಶ ನೀಡಲಾಗಿದೆ. ಪಟೇಲ್ ಸಮುದಾಯದ ಮೂರು ಮಂದಿಗೆ ಸಚಿವ ಸ್ಥಾನ ಸಿಕ್ಕಿದೆ.
ಮಾಜಿ ಮುಖ್ಯಮಂತ್ರಿ ವಿಜಯ ರೂಪಾಯಿ ಸಚಿವ ಸಂಪುಟದಲ್ಲಿದ್ದ ಎಲ್ಲರನ್ನೂ ಕೈಬಿಟ್ಟು ಭೂಪೇಂದ್ರ ಪಟೇಲ್ ಸಚಿವ ಸಂಪುಟದಲ್ಲಿ ಹೊಸಬರಿಗೆ ಅವಕಾಶ ನೀಡಲಾಗಿದೆ.