ಉತ್ತರ ಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ನೀಡಿರುವ ಅಬ್ಬಾಜಾನ್ ಹೇಳಿಕೆಗೆ ಎನ್.ಡಿ.ಎ ಮಿತ್ರ ಪಕ್ಷ ಜೆಡಿಯು ಖಂಡನೆ ವ್ಯಕ್ತಪಡಿಸಿದೆ. ವಿಧಾನಸಭಾ ಚುನಾವಣೆಗಳಲ್ಲಿ ಏಕಾಂಗಿಯಾಗಿ ಹೋರಾಡಲು ಸಿದ್ದವಾಗುತ್ತಿರುವ ಸಮಯದಲ್ಲಿ ಯಾರೂ ಕೂಡ ಇಂತಹ ಹೇಳಿಕೆಯನ್ನು ನೀಡಬಾರದು ಎಂದು ಜೆಡಿಯು ಅಧ್ಯಕ್ಷ ರಾಜೀವ್ ರಂಜನ್ ಸಿಂಗ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಯಾವುದೇ ನಾಯಕರು ಮತ್ತು ರಾಜಕೀಯ ಪಕ್ಷಗಳು ತಾವು ಬಳಸುವ ಭಾಷೆಯ ಮೇಲೆ ಎಚ್ಚರಿಕೆ ಇಡಬೇಕು ಎಂದು ಆದಿತ್ಯನಾಥ್ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಭಾಷೆ ಬಳಸುವಾಗ ನಾವು ಎಚ್ಚರಿಕೆಯನ್ನು ವಹಿಸಬೇಕು. ಭಾರತ ಪ್ರತಿಯೊಬ್ಬರ ದೇಶ. ಹಿಂದುಳಿಗೆ ಹೇಗೆ ಇದು ದೇಶವೋ ಹಾಗೆ ಕ್ರಿಶ್ಚಿಯನ್ನರು ಮುಸ್ಲೀಮರು ಮತ್ತು ಇತರರಿಗೂ ದೇಶ. ಹಾಗಾಗಿಯೇ ವೈವಿಧ್ಯತೆಯಲ್ಲಿ ಏಕತೆ ಇರುವ ದೇಶ ಇದು. ಇಂತಹ ಭಾಷೆಯನ್ನು ಯಾರೂ ಬಳಸಬಾರದು ಎಂದು ಟೀಕಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ವಿಧಾನಸಭಾ ಚುನಾವಣೆಗಳು ಸಮೀಪವಿರುವ ಸಂದರ್ಭದಲ್ಲಿ ಒಂದು ಧರ್ಮೀಯರನ್ನು ಸಮಾಧಾನಪಡಿಸುವ ಮತ್ತು ಮತಗಳ ಧ್ರುವೀಕರಣ ರಾಜಕೀಯ ನಡೆಯುತ್ತಿದೆ ಎಂದು ಆರೋಪಿಸಿದ್ದಾರೆ.