ಟ್ರಕ್ ವೊಂದರಲ್ಲಿ ದನಗಳನ್ನು ಸಾಗಿಸಲಾಗುತ್ತಿದೆ ಎಂಬ ಆರೋಪದ ಮೇಲೆ ದಾಳಿ ಮಾಡಿರುವ ಗೋರಕ್ಷಕರ ಗುಂಪು ಅಪ್ರಾಪ್ತ ಬಾಲಕನನ್ನು ಹತ್ಯೆಗೈದಿರುವ ಘಟನೆ ರಾಜಸ್ಥಾನದ ಅಲ್ವಾರ್ ಜಿಲ್ಲೆಯಲ್ಲಿ ನಡೆದಿದೆ.
ಟ್ರಕ್ ನಲ್ಲಿ 15 ಗೋವುಗಳನ್ನು ಅಕ್ರಮವಾಗಿ ಸಾಗಲಿಸಲಾಗುತ್ತಿದೆ ಎಂದು ಕಾರುಗಳಲ್ಲಿ ಬೆನ್ನಟ್ಟಿದ್ದ ಗೋರಕ್ಷಕರ ಗುಂಪು ಕಾರಿನ ಹಿಂಭಾಗದಲ್ಲಿ ಓಡಿ ಬರುತ್ತಿದ್ದ 17 ವರ್ಷದ ಸಬಿರ್ ಖಾನ್ ಎಂಬ ಬಾಲಕನನ್ನು ಹತ್ಯೆ ಮಾಡಿದೆ ಎಂದು ದಿ ವೈರ್ ವರದಿ ಮಾಡಿದೆ.
ಮೃತ ಬಾಲಕ 11ನೇ ತರಗತಿಯಲ್ಲಿ ಓದುತ್ತಿದ್ದ. ಬಾಲಕನನ್ನು ಹತ್ಯೆ ಮಾಡಿದ ಆರೋಪಿಗಳಲ್ಲಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ. ಬಂಧಿತರನ್ನು ಸೋನು, ಹರ್ಕೇಶ್, ನರೇಂದ್ರ, ಉಳಿದ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಮೃತ ಬಾಲಕ ಕುಟುಂಬದ ಸದಸ್ಯರು ನೀಡಿದ ದೂರಿನ ಮೇರೆಗೆ ಐಪಿಸಿ 302, 143, 506 ಸೆಕ್ಷನ್ ಗಳಡಿ FIR ದಾಖಲಿಸಲಾಗಿದೆ.
ಮೃತಬಾಲಕನ ಕುಟುಂಬ ಸ್ವಯಂಘೋಷಿತ ಗೋರಕ್ಷಕರು ಪುತ್ರನನ್ನು ಹತ್ಯೆ ಮಾಡಿದೆ ಎಂದು ಆರೊಪಿಸಿದ್ದಾರೆ. ಸೆಪ್ಟೆಂಬರ್ 12ರ ಭಾನುವಾರದಂದು ರಾಜಸ್ಥಾನ-ಹರ್ಯಾಣ ಗಡಿಯ ಬಿವಾಡಿ ಸಮೀಪದ ಚುಪ್ಪಾಕಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಅಲ್ವಾರ್ ಗೋರಕ್ಷಕರಿಂದ ಇಂತಹ ದಾಳಿಗಳು ಇದೇ ಮೊದಲೇನೂ ಅಲ್ಲ. 2018ರಲ್ಲಿ ಅಕ್ಬರ್ ಖಾನ್ ಅವರನ್ನು ಗೋರಕ್ಷಕರು ಕೊಂದು ಹಾಕಿದ್ದರು. 2017ರಲ್ಲಿ ಪೆಹ್ಲು ಖಾನ್ ಹತ್ಯೆಯಾಗಿದ್ದರು ಎಂದು ದಿ ವೈರ್ ವರದಿ ಮಾಡಿದೆ.