ತಮಿಳು ದೇವರ ಭಾಷೆ, ಹಿರಿಯರು ಮತ್ತು ನಾಯನ್ಮಾರ್ ಳಂತಹ ಸಂತರು ರಚಿಸಿರುವ ತಮಿಳು ಸ್ತೋತ್ರಗಳನ್ನು ಪಠಿಸಬೇಕು ಎಂದು ತಮಿಳುನಾಡಿನ ಮದ್ರಾಸ್ ಹೈಕೋರ್ಟ್ ಹೇಳಿದೆ ಎಂದು ಎನ್.ಡಿ.ಟಿವಿ ವರದಿ ಮಾಡಿದೆ.
“ಸಂಸ್ಕೃತವನ್ನು ಬಿಟ್ಟರೆ ಬೇರೊಂದು ದೇವಭಾಷೆ ಇಲ್ಲ ಎಂದು ಹೇಳಲಾಗುತ್ತದೆ. ‘ತಮಿಳು ವಿಶ್ವದ ಪ್ರಾಚೀನ ಭಾಷೆಗಳಲ್ಲಿ ಒಂದು ಮಾತ್ರವಲ್ಲದೆ ದೇವರ ಭಾಷೆಯು ಕೂಡ ಆಗಿದೆ. ಶಿವನು ನೃತ್ಯ ಮಾಡುತ್ತಿದ್ದಾಗ ಶಿವನಿಂದ ಬಿದ್ದ ಡಮರುಗದಿಂದ ತಮಿಳು ಭಾಷೆ ಹುಟ್ಟಿದೆ ಎಂದು ನಂಬಲಾಗಿದೆ’ ಎಂದು ಕೋರ್ಟ್ ಹೇಳಿದೆ.
ಪುರಾಣದ ಪ್ರಕಾರ ಶಿವನು ಮೊದಲ ತಮಿಳು ಸಂಗಮ ಅಕಾಡೆಮಿ ಅಧ್ಯಕ್ಷತೆ ವಹಿಸಿದ್ದನು. ತಮಿಳು ಕವಿಗಳ ಜ್ಞಾನವನ್ನು ಪರೀಕ್ಷಿಸಲು ಶಿವನು ತಿರುವಿಲಯಾಡಲ್ ನುಡಿಸಿದನೆಂದು ನಂಬಲಾಗಿದೆ. ಹಾಗಾಗಿ ತಮಿಳು ಭಾಷೆ ದೇವರೊಂದಿಗೆ ಸಂಪರ್ಕ ಹೊಂದಿದೆ ಎಂದು ಆರ್ಥ ಎಂದು ನ್ಯಾಯಾಲಯದ ಹೇಳಿದೆ.
ಇದು ದೇವರೊಂದಿಗೆ ಸಂಪರ್ಕ ಹೊಂದಿದಾಗ, ಅದು ದೈವಭಕ್ತಿಯ ಭಾಷೆಯಾಗಿದೆ. ಪೂಜೆ ಮಾಡುವಾಗ ಇಂತ ದೈವಭಾಷೆ ಯನ್ನು ಬಳಸಬೇಕಾಗುತ್ತದೆ ಎಂದು ನ್ಯಾಯಾಲಯ ತಿಳಿಸಿದೆ.
ಮನುಷ್ಯನು ಭಾಷೆಯನ್ನು ಸೃಷ್ಟಿಸಲು ಸಾಧ್ಯವಿಲ್ಲ. ಭಾಷೆಗಳು, ಶತಮಾನಗಳಿಂದ ಅಸ್ತಿತ್ವದಲ್ಲಿವೆ ಮತ್ತು ಒಂದು ತಲೆಮಾರಿನಿಂದ ಇನ್ನೊಂದು ಪೀಳಿಗೆಗೆ ವರ್ಗಾವಣೆಯಾಗಿವೆ. ಅಸ್ತಿತ್ವದಲ್ಲಿರುವ ಭಾಷೆಗಳು ಮಾತ್ರ ಸುಧಾರಣೆಯಾಗಬಹುದು ಮತ್ತು ಯಾವುದೇ ಭಾಷೆಯ ಸೃಷ್ಟಿ ಸಾಧ್ಯವಿಲ್ಲವೆಂಬ ಹೈಕೋರ್ಟ್ ಹೇಳಿಕೆಯನ್ನು ಉಲ್ಲೇಖಿಸಿ ಎನ್.ಡಿ.ಟಿವಿ ವರದಿಯಲ್ಲಿ ತಿಳಿಸಿದೆ.
ಅರ್ಜಿದಾರರು ತಮಿಳು ಪದ್ಯಗಳನ್ನು ಪಠಿಸುವ ಮೂಲಕ ಒಂದು ನಿರ್ದಿಷಟ ದೇವಸ್ಥಾನದಲ್ಲಿ ಕುಡಮುಜುಕು ಮಾಡಲು ಬಯಸುತ್ತಾರೆ. ಆದಾಗ್ಯೂ, ಇದು ಆ ದೇವಸ್ಥಾನಕ್ಕೆ ಮಾತ್ರವಲ್ಲದೆ ದೇಶಾದ್ಯಂತ ಎಲ್ಲಾ ದೇವಾಲಯಗಳಲ್ಲಿ ತಮಿಳು ತಿರುಮುರೈ, ಅಲ್ವಾರ್ಗಲ್ ಮತ್ತು ನಯನಮಾರ್ಗಲ್ ನಂತಹ ಸಂತರು ರಚಿಸಿದ ಸ್ತೋತ್ರಗಳನ್ನು ಹೇಳುವ ಮೂಲಕ ಪವಿತ್ರಗೊಳಿಸಬೇಕು ಎಂದು ಹೈಕೋರ್ಟ್ ಹೇಳಿದೆ.


