ಮಹಾರಾಷ್ಟ್ರದ ಸಾಕಿನಾಕದಲ್ಲಿ ಮಹಿಳೆಯ ಮೇಲೆ ನಡೆದ ಅತ್ಯಾಚಾರ, ಕೊಲೆ ಪ್ರಕರಣ ಆಘಾತವನ್ನುಂಟು ಮಾಡಿದೆ. ಜನರು ಕೂಡ ಅತಂಕಕ್ಕೆ ಒಳಗಾಗಿದ್ದಾರೆ. ಆದರೂ ವಿಶ್ವದಲ್ಲಿ ಮುಂಬೈ ಸುರಕ್ಷಿತ ನಗರವಾಗಿದೆ ಎಂದು ಶಿವಸೇನಾ ಮುಖವಾಣಿ ಸಾಮ್ನಾ ಹೇಳಿದೆ.
ಸಾಕಿನಾಕ ಅತ್ಯಾಚಾರ, ಕೊಲೆ ಪ್ರಕರಣವನ್ನು ದೆಹಲಿಯಲ್ಲಿ 2012ರಲ್ಲಿ ನಡೆದ ನಿರ್ಭಯ ಪ್ರಕರಣಕ್ಕೆ ಹೋಲಿಸಿರುವ ಸಾಮ್ನಾ ಸಂಪಾದಕೀಯ ಈ ಪ್ರಕರಣದಲ್ಲಿ ಅತ್ಯಂತ ವ್ಯವಸ್ಥಿತವಾಗಿ ರಾಜಕೀಯ ಮಾಡಲಾಯಿತು ಎಂದು ಆರೋಪಿಸಿದೆ.
ಹತ್ರಾಸ್ ಅತ್ಯಾಚಾರ, ಕೊಲೆ ಪ್ರಕರಣದಲ್ಲಿ ರಾಜ್ಯ ಸರ್ಕಾರವೇ ಆರೋಪಿಗಳ ಪರ ನಿಂತಿತು. ಮಹಿಳೆ ಮೇಲೆ ಅತ್ಯಾಚಾರ ನಡೆದು ಕೊಲೆಯಾಗಿದ್ದರೂ ಆರೋಪಿಗಳನ್ನು ಬಂಧಿಸುವಲ್ಲಿ ವಿಳಂಬ ಮಾಡಲಾಯಿತು. ಕತುವಾ ರೇಪ್ ಕೇಸ್ ನ್ನು ಕೂಡ ನಿರ್ಲಕ್ಷ್ಯ ಮಾಡಲಾಯಿತು ಎಂದು ಅದು ಟೀಕಿಸಿದೆ.
ಸಾಕಿನಾಕ ಮಹಿಳೆ ರೇಪ್ ಪ್ರಕರಣ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಬಂಧಿಸಲಾಯಿತು. ಆದರೂ ರಾಷ್ಟ್ರೀಯ ಮಹಿಳಾ ಆಯೋಗ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿತು. ಆದರೆ ಹತ್ರಾಸ್ ಪ್ರಕರಣದಲ್ಲಿ ಮಹಿಳಾ ಆಯೋಗ ಸಂತ್ರಸ್ಥೆಯ ಕುಟುಂಬವನ್ನು ಭೇಟಿ ಮಾಡಲಿಲ್ಲ. ಸ್ಥಳಕ್ಕೆ ಹೋಗಲಿಲ್ಲ ಎಂದು ಸಾಮ್ನಾ ಕಿಡಿಕಾರಿದೆ.
ಮಹಾರಾಷ್ಟ್ರದ ಸಾಕಿನಾಕ ರೇಪ್ ಪ್ರಕರಣದ ಸಂತ್ರಸ್ಥೆಯ ಇಬ್ಬರು ಮಕ್ಕಳಿಗೆ ಶಿಕ್ಷಣ ಕೊಡಿಸಲು ಸರ್ಕಾರ ಮುಂದಾಗಿದೆ. ಕೂಡಲೇ ಆರೋಪಿಯನ್ನು ಬಂಧಿಸಲಾಗಿದೆ. ಇದನ್ನು ನೋಡಿದರೆ ಸರ್ಕಾರಕ್ಕೆ ಸೂ್ಕ್ಷ್ಮತೆ ಇಲ್ಲವೇ ಎಂದು ಪ್ರಶ್ನಿಸಿದೆ.


