Thursday, September 19, 2024
Google search engine
Homeಮುಖಪುಟತಾಲಿಬಾನ್ ಕಠಿಣ ನಿಯಮ ಉಲ್ಲಂಘಿಸಿ ಕೆಲಸಕ್ಕೆ ಹಾಜರಾದ ಮಹಿಳೆಯರು

ತಾಲಿಬಾನ್ ಕಠಿಣ ನಿಯಮ ಉಲ್ಲಂಘಿಸಿ ಕೆಲಸಕ್ಕೆ ಹಾಜರಾದ ಮಹಿಳೆಯರು

ಆಫ್ಘಾನಿಸ್ತಾನದಲ್ಲಿ ತಾಲಿಬಾನ್ ಮಧ್ಯಂತರ ಸರ್ಕಾರ ರಚನೆಯಾಗಿ ಕಠಿಣ ಇಸ್ಲಾಮಿಸ್ಟ್ ಕಾನೂನುಗಳನ್ನು ಜಾರಿಗೊಳಿಸಿದ ಬಳಿಕವೂ ಅವುಗಳನ್ನು ಉಲ್ಲಂಘಿಸಿರುವ ಕೆಲ ಮಹಿಳಾ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ಎಪಿಎಫ್ ಸುದ್ದಿ ಸಂಸ್ಥೆ ತಿಳಿಸಿದೆ.

ತಾಲಿಬಾನ್ ಮುಖಂಡ ಅಬ್ದುಲ್ ಬಾಕಿ ಹಕ್ಕಾನಿ, ಮಹಿಳಾ ವಿಶ್ವವಿದ್ಯಾಲಯದಲ್ಲಿ ಅಭ್ಯಾಸ ಮಾಡುತ್ತಿರುವ ವಿದ್ಯಾರ್ಥಿನಿಯರು ಹಿಜಾಬ್ ಧರಿಸಬೇಕು. ತಲೆಗವಸು ಮತ್ತು ಮುಖಮುಚ್ಚಿಕೊಳ್ಳುವುದು ಕಡ್ಡಾಯವಾಗಿದೆ ಎಂದು ಹೇಳಿದ್ದಾರೆ.

ತಾಲಿಬಾನ್ ಮಧ್ಯಂತರ ಸರ್ಕಾರದಲ್ಲಿ ಎಲ್ಲರೂ ಪುರುಷರೇ ಅಧಿಕಾರ ವಹಿಸಿಕೊಂಡಿದ್ದಾರೆ. ಹೊಸ ನೀತಿಗಳು ರೂಪಿಸಿದ್ದು ಅದರಂತೆ ಎಲ್ಲರೂ ನಡೆದುಕೊಳ್ಳಬೇಕು ಎಂದು ತಿಳಿಸಿದ್ದಾರೆ.

ಹೊಸ ನಿಯಮಗಳು ಹೇರಿದ ನಂತರವೂ ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದ ಮಹಿಳಾ ನೌಕರರು ಕೆಲಸಕ್ಕೆ ಹಾಜರಾಗಿದ್ದಾರೆ. 12 ಮಂದಿ ಮಹಿಳಾ ನೌಕರರು ಕೆಲಸ ನಿರ್ವಹಿಸುತ್ತಿದ್ದಾರೆ ಎಂದು 35 ವರ್ಷದ ರಬಿಯಾ ಜಮಾಲ್ ಹೇಳಿದ್ದಾರೆ.

ತಾಲಿಬಾನ್ ಮುಖಂಡರು ಮಹಿಳೆಯರು ತಮ್ಮ ಭದ್ರತೆಯ ದೃಷ್ಟಿಯಿಂದ ಮನೆಯಲ್ಲೇ ಇರಬೇಕು. ಹೊರಗೆ ಕೆಲಸಕ್ಕೆ ಹೋಗಬಾರದು ಎಂದು ಕಟ್ಟುನಿಟ್ಟಾಗಿ ಸೂಚಿಸಿದ್ದರೂ ರಬಿಯ ಜಮಾಲ್ ಕಾಬೂಲ್ ವಿಮಾನ ನಿಲ್ದಾಣಕ್ಕೆ ಕೆಲಸಕ್ಕೆ ಹಾಜರಾಗಿದ್ದಾರೆ ಎಂದು ವರದಿಯಾಗಿದೆ.

“ಕುಟುಂಬ ನಿರ್ವಹಣೆಗೆ ನನಗೆ ಹಣ ಬೇಕು. ನನಗೆ ಮನೆಯಲ್ಲಿರುವುದು ಕಷ್ಟದ ಕೆಲಸ. ಕೆಲಸಕ್ಕೆ ಬಂದಿರುವುದು ಖುಷಿ ನೀಡುತ್ತಿದೆ. ಮನೆಯಿಂದ ಹೊರಗೆ ಬಂದು ಕೆಲಸ ಮಾಡುವುದು ಸಂತೋಷದ ವಿಚಾರ” ಎಂದು ಮಹಿಳೆಯರು ತಿಳಿಸಿದ್ದಾರೆ.

ಕಾಬೂಲ್ ತಾಲಿಬಾನ್ ವಶವಾಗುವ ಮೊದಲು ವಿಮಾನ ನಿಲ್ದಾಣದಲ್ಲಿ 80 ಮಹಿಳಾ ನೌಕರರು ಕೆಲಸ ನಿರ್ವಹಿಸುತ್ತಿದ್ದರು. ಆಗಸ್ಟ್ 15ರಂದು ಕಾಬೂಲ್ ತಾಲಿಬಾನ್ ವಶವಾದ ನಂತರ ಇದೇ ಮೊದಲ ಬಾರಿಗೆ 12 ಮಂದಿ ಮಹಿಳೆಯರು ವಿಮಾನ ನಿಲ್ದಾಣದಲ್ಲಿ ಕೆಲಸ ಮಾಡುತ್ತಿದ್ದಾರೆ ಎಂದು ವರದಿಗಳು ತಿಳಿಸಿವೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular