Thursday, September 19, 2024
Google search engine
Homeಮುಖಪುಟಶಿಫಾರಸು ಕಡೆಗಣಿಸಿದ ಕೇಂದ್ರದ ವಿರುದ್ಧ ಸುಪ್ರೀಂ ಗರಂ

ಶಿಫಾರಸು ಕಡೆಗಣಿಸಿದ ಕೇಂದ್ರದ ವಿರುದ್ಧ ಸುಪ್ರೀಂ ಗರಂ

ನ್ಯಾಯಾಧಿಕರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವಲ್ಲಿ ವಿಳಂಬ ಧೋರಣೆ ಅನುಸರಿಸಿರುವ ಒಕ್ಕೂಟ ಸರ್ಕಾರದ ವಿರುದ್ಧ ಸುಪ್ರೀಂಕೋರ್ಟ್ ಗರಂ ಆಗಿದೆ. ಸುಪ್ರೀಂಕೋರ್ಟ್ ಶಿಫಾರಸು ಮಾಡಿದ 7 ದಿನಗಳೊಳಗೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡದೆ ಒಂದೂವರೆ ವರ್ಷ ಏಕೆ ತೆಗೆದುಕೊಂಡಿದ್ದೀರಿ ಎಂದು ಒಕ್ಕೂಟ ಸರ್ಕಾರಕ್ಕೆ ಸುಪ್ರೀಂ ಪ್ರಶ್ನಿಸಿತು.

ಸುಪ್ರೀಂಕೋರ್ಟ್ ನ 9 ಮಂದಿ ನ್ಯಾಯಮೂರ್ತಿಗಳನ್ನು ನ್ಯಾಯಾಧಿಕರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನಾಗಿ ನೇಮಕ ಮಾಡುವಂತೆ ಸುಪ್ರೀಂಕೋರ್ಟ್ ಶಿಫಾರಸು ಮಾಡಿತ್ತು. ಶಿಫಾರಸು ಕೇಂದ್ರಕ್ಕೆ ತಲುಪಿದ 7 ದಿನಗಳೊಳಗಾಗಿ ನ್ಯಾಯಾಧಿಕರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವಂತೆಯೂ ಸುಪ್ರೀಂ ಶಿಫಾರಸು ಮಾಡಿತ್ತು.

ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್, ನ್ಯಾಯಮೂರ್ತಿ ಎಲ್.ಎನ್.ರಾವ್ ಅವರಿದ್ದ ಪೀಠ ಸರ್ಕಾರಕ್ಕೆ ಚಾಟಿ ಬೀಸಿತು. ನ್ಯಾಯಾಧಿಕರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡಲು ನಮಗೆ ಆಸಕ್ತಿ ಇಲ್ಲ. ಮುಂದೆ ವಿಚಾರಣೆ ನಡೆಸುತ್ತೇವೆ ಎಂದು ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿದರು.

“ಈ ನ್ಯಾಯಾಲಯದ ತೀರ್ಪುಗಳಿಗೆ ಗೌರವವಿಲ್ಲ. ನೀವು ನಮ್ಮ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದೀರಿ. ಎಷ್ಟು ಜನರನ್ನು ನೇಮಕ ಮಾಡಿದ್ದೀರಿ. ಕೆಲವರನ್ನು ಮಾತ್ರ ನೇಮಕ ಮಾಡಿದ್ದೇವೆ ಎಂದು ನೀವು ಹೇಳುತ್ತೀರಿ” ಎಂದು ಎನ್.ವಿ.ರಮಣ ಬೇಸರ ವ್ಯಕ್ತಪಡಿಸಿದರು.

“ನಮಗೆ ಕೇವಲ ಮೂರು ಆಯ್ಕೆಗಳಿವೆ. ಒಂದು, ನಾವು ಶಾಸನದಲ್ಲಿ ಉಳಿಯುತ್ತೇವೆ. ಎರಡು, ನಾವು ನ್ಯಾಯಮಂಡಳಿಗಳನ್ನು ಮುಚ್ಚುತ್ತೇವೆ ಮತ್ತು ಅಧಿಕಾರವನ್ನು ಹೈಕೋರ್ಟ್ ಗೆ ನೀಡುತ್ತೇವೆ. ಮೂರು, ನಾವೇ ನೇಮಕಾತಿ ಮಾಡಿಕೊಳ್ಳುತ್ತೇವೆ” ಎಂದು ಹೇಳಿದರು.

ನ್ಯಾಯಾಧಿಕರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕ ಮಾಡದೆ ಕುಸಿದು ಹೋಗುತ್ತಿದೆ ಎಂದು ಹೇಳಿದರು.

ಒಕ್ಕೂಟ ಸರ್ಕಾರ ನ್ಯಾಯಾಧಿಕರಣ ಸುಧಾರಣಾ ಕಾಯ್ದೆ 2021 ಜಾರಿಗೆ ತಂದಿದೆ. ಈ ಹಿನ್ನೆಲೆಯಲ್ಲಿ ನ್ಯಾಯಾಧಿಕರಣಕ್ಕೆ ಅಧ್ಯಕ್ಷರು ಮತ್ತು ಸದಸ್ಯರನ್ನು ನೇಮಕ ಮಾಡುವಂತೆ ಆದೇಶಿಸಿದ್ದರೂ ಒಕ್ಕೂಟ ಸರ್ಕಾರ ವಿಳಂಬ ನೀತಿ ಅನುಸರಿಸುತ್ತಿದೆ. ಇದಕ್ಕೆ ನ್ಯಾಯಾಲಯ ಬೇಸರ ವ್ಯಕ್ತಪಡಿಸಿದೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular