Thursday, September 19, 2024
Google search engine
Homeಮುಖಪುಟಕೇರಳ ಇಬ್ಬರಿಗೂ ಹೆಚ್ಚು ಮಂದಿಯಲ್ಲಿ ನಿಫಾ ವೈರಾಣು ಪತ್ತೆ

ಕೇರಳ ಇಬ್ಬರಿಗೂ ಹೆಚ್ಚು ಮಂದಿಯಲ್ಲಿ ನಿಫಾ ವೈರಾಣು ಪತ್ತೆ

ಕೇರಳದಲ್ಲಿ ಇಬ್ಬರಿಗೂ ಹೆಚ್ಚು ಮಂದಿಯಲ್ಲಿ ನಿಫಾ ವೈರಸ್ ಸೋಂಕು ಇರುವುದು ದೃಢಪಟ್ಟಿದೆ. ಅವರಲ್ಲಿ ಇಬ್ಬರು ಆರೋಗ್ಯ ಕಾರ್ಯಕರ್ತರು ಸೇರಿದ್ದಾರೆ ಎಂದು ಆರೋಗ್ಯ ಸಚಿವೆ ವೀಣಾ ಜಾರ್ಜ್ ಸ್ಪಷ್ಟಪಡಿಸಿದ್ದಾರೆ.

ಖಾಸಗಿ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬರು ಮತ್ತು ಕೊಜಿಕೋಡು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಆರೋಗ್ಯ ಕಾರ್ಯಕರ್ತರೊಬ್ಬರಿಗೆ ನಿಫಾ ವೈರಾಣು ಸೋಂಕು ಇರುವುದು ದೃಢಪಟ್ಟಿದೆ. ಅಷ್ಟೇ ಅಲ್ಲದೆ ಸೆಪ್ಟೆಂಬರ್ 5ರಂದು ಬೆಳಗ್ಗೆ ಮೃತಪಟ್ಟ ಬಾಲಕನ ಪ್ರಾಥಮಿಕ ಸಂಪರ್ಕದಲ್ಲಿದ್ದ 188 ಮಂದಿಯನ್ನು ಗುರುತಿಸಲಾಗಿದ್ದು ಈ ಪೈಕಿ 20 ಮಂದಿ ಸ್ಥಿತಿ ಗಂಭೀರವಾಗಿದೆ ಎಂದು ಹೇಳಿದ್ದಾರೆ.

ಗಂಭೀರ ಸ್ಥಿತಿಯಲ್ಲಿರುವ 20 ಮಂದಿಯನ್ನು ಕಣ್ಗಾವಲು ತಂಡ ತೀವ್ರ ನಿಗಾ ವಹಿಸಿದೆ. ಆ 20 ಮಂದಿ ನಿಫಾ ವೈರಾಣು ಪೀಡಿತರನ್ನು ಕೊಜಿಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ತಿಳಿಸಿದ್ದಾರೆ.

ಬಾಲಕ ಸಂಪರ್ಕದಲ್ಲಿದ್ದ ಮಗುವೊಂದನ್ನು ಐಸೋಲೇಷನ್ ನಲ್ಲಿ ಇಡಲಾಗಿದೆ. ಕೊಜಿಕೋಡ್ ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯನ್ನು ನಿಫಾ ನಿಗಾ ವಾರ್ಡನ್ನಾಗಿ ಪರಿವರ್ತಿಸಲಾಗಿದೆ ಎಂದು ಸಚಿವೆ ವೀಣಾ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular