Friday, September 20, 2024
Google search engine
Homeಮುಖಪುಟಕೇರಳದಲ್ಲಿ ನಿಫಾ ವೈರಸ್ ಪೀಡಿತ ಬಾಲಕ ಸಾವು

ಕೇರಳದಲ್ಲಿ ನಿಫಾ ವೈರಸ್ ಪೀಡಿತ ಬಾಲಕ ಸಾವು

ಕೇರಳದಲ್ಲಿ ಮತ್ತೆ ನಿಫಾ ವೈರಾಣು ಸೋಂಕು ಪತ್ತೆಯಾಗಿದೆ. 12 ವರ್ಷದ ಬಾಲಕನಲ್ಲಿ ನಿಫಾ ವೈರಾಣು ಇರುವುದು ದೃಢಪಟ್ಟಿದ್ದು ಕೋಝಿಕೋಡ್ ಆಸ್ಪತ್ರೆಗೆ ದಾಖಲಾಗಿದ್ದ ಬಾಲಕ ಮೃತಪಟ್ಟಿದ್ದಾನೆ ಎಂದು ಆರೋಗ್ಯ ಸಚಿವರು ತಿಳಿಸಿದ್ದಾರೆ.

ಚತಮಂಗಲಂ ಪಂಚಾಯತ್ ನ ಚೂಲೂರು ಗ್ರಾಮದ ಈ ಬಾಲಕನ ರಕ್ತ ಮಾದರಿಯನ್ನು ಅಲಪ್ಪಜ ನ್ಯಾಷನಲ್ ಇನ್ಸಿಟೂಟ್ ಆಫ್ ವೈರಾಲಜಿ ಪ್ರಯೋಗಾಲಯಕ್ಕೆ ಕಳಿಕೊಡಲಾಗಿತ್ತು. ಪರೀಕ್ಷೆ ಮಾಡಿದಾಗ ನಿಫಾ ಸೋಂಕು ಇರುವುದು ಪತ್ತೆಯಾಗಿದೆ. ಹೀಗಾಗಿ ಬಾಲಕನನ್ನು ಸೆಪ್ಟೆಂಬರ್ 1ರಂದು ಆಸ್ಪತ್ರೆಗೆ ದಾಖಲು ಮಾಡಿತ್ತು

ಈ ಬಾಲಕನ ಜೊತೆ ಪ್ರಾಥಮಿಕ ಸಂಪರ್ಕಿತರನ್ನು ಪಟ್ಟಿ ಮಾಡಲಾಗುತ್ತಿದೆ. ವೈರಾಣು ನಿಯಂತ್ರಣಕ್ಕೆ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವೆ ವೀಣಾ ಹೇಳಿದ್ದಾರೆ.

ನಿಫಾ ವೈರಾಣು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆರೋಗ್ಯ ಸಚಿವೆ ವೀಣಾ ಜಾರ್ಜ್ ಅಧ್ಯಕ್ಷತೆಯಲ್ಲಿ ಶನಿವಾರ ತಡರಾತ್ರಿ ಉನ್ನತ ಅಧಿಕಾರಿಗಳ ಸಭೆ ನಡೆಸಿ ನಿಫಾ ವೈರಾಣು ಸೋಂಕಿನ ಕುರಿತು ಚರ್ಚೆ ನಡೆಸಲಾಗಿದೆ.

ಸಭೆಯಲ್ಲಿ ನಿಫಾ ವೈರಾಣು ಬಗ್ಗೆ ಮಾಹಿತಿ ಸಂಗ್ರಹಿಸಿದ್ದು ಕ್ರಿಯಾ ಯೋಜನೆ ರೂಪಿಸಲಾಗಿದೆ. ಆರೋಗ್ಯ ಸಚಿವರ ಜೊತೆ ತಡರಾತ್ರಿ ಸಭೆ ನಡೆಸಿ ಪ್ರತಿಯೊಂದು ವಿಷಯದ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ಪ್ರವಾಸೋದ್ಯಮ ಸಚಿವ ಮುಹಮೊದ್ ತಿಳಿಸಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular