ಕನ್ನಡದ ಕತೆಗಾರ್ತಿ, ಡಾ ಬೆಸಗರಹಳ್ಳಿ ರಾಮಣ್ಣ ಕಥಾ ಸಾಹಿತ್ಯ ಪ್ರಶಸ್ತಿ ಪುರಸ್ಕೃತೆ ವಿಜಯಾ ಮೋಹನ್ ಅವರು ಇನ್ನಿಲ್ಲ. ನೀರು ಕಿರು ಕಾದಂಬರಿಯನ್ನು ತಬ್ಬಲಿ ಸಾರು,ಜಾತಿ, ಕಣ್ಣಿ ಮೊದಲಾದ ಕಥಾ ಸಂಕಲನಗಳನ್ನು ಪ್ರಕಟಿಸಿದ್ದ ಅವರು ಕವಯಿತ್ರಿಯೂ ಆಗಿದ್ದರು ಎಂದು ಸಾಹಿತಿ ಎಂ.ಎಚ್.ನಾಗರಾಜ್ ಸ್ಮರಿಸಿದ್ದಾರೆ.
ತುಮಕೂರು ಕನ್ನಡ ಭವನದಲ್ಲಿ ಏರ್ಪಾಡಾಗಿದ್ದ ಬಾ ಹ ರಮಾಕುಮಾರಿ ಅವರ ಏಕದಾರಿ ಮತ್ತು ಇತರ ಕವಿತೆಗಳು ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಲು ಮಧುಗಿರಿಯಿಂದ ಹೊರಟು ಬರಲು ಸಿದ್ದರಾಗಿದ್ದರು. ಅಷ್ಟರಲ್ಲಿ ಹಾರ್ಟ್ ಅಟ್ಯಾಕ್ ಆಗಿ ಆಸ್ಪತ್ರೆಗೆ ಹೋಗುವ ದಾರಿಯಲ್ಲಿ ಅಸುನೀಗಿದ್ದಾರೆ ಎಂದು ಹೇಳಿದ್ದಾರೆ.
ಗೆಳತಿ ,ಲೇಖಕಿ ವಿಜಯಾ ಮೋಹನ್ ಇನ್ನಿಲ್ಲ ಎಂಬ ಅಘಾತಕಾರಿ ಸುದ್ದಿ ಬಂದಿದೆ ಎಂದು ಲೇಖಕಿ ಮಲ್ಲಿಕಾ ಬಸವರಾಜು ತಿಳಿಸಿದ್ದಾರೆ.
ಎಲ್ಲೇ ಸಿಕ್ಕರೂ ತಬ್ಬಿ ಅಕ್ಕಾ ಎಂದು ಕರುಳಿನಿಂದ ಕರೆಯುತ್ತಿದ್ದ ಸೋದರಿ ವಿಜಯಾ ನನ್ನ ತವರು ನೆಲದ ಹುಡುಗಿ ಎಂದು ತಿಳಿಸಿದ್ದಾರೆ.
ಮಧುಗಿರಿ ತಾಲೂಕಿನ ಸುದ್ದೆಗುಂಟೆ ಗ್ರಾಮದವರು. ನಮ್ಮ ಸೀಮೆಯ, ತೆಲುಗು ಮಿಶ್ರಿತ ಆಡುನುಡಿ ಕನ್ನಡದಲ್ಲಿ ಕಥೆಗಳನ್ನು ಕಟ್ಟಿಕೊಟ್ಟವರು. ಬೆಸಗರಹಳ್ಳಿ ರಾಮಣ್ಣ ಕಥಾಪ್ರಶಸ್ತಿಯೂ ಸೇರಿದಂತೆ ಹಲವಾರು ಪ್ರಶಸ್ತಿ ಗಳಿಗೆ ಭಾಜನರಾಗಿದ್ದವರು.
ಹೋಗಿ ಬಾ ಸೋದರಿ ಮಲ್ಲಿಕಾ ಬಸವರಾಜು ಕಂಬನಿ ಮಿಡಿದಿದ್ದಾರೆ.
ನೀವಿಲ್ಲ ಎಂಬುದು ನೋವಿನ ಸಂಗತಿ. ನಿಮ್ಮ ಜೊತೆ ಮಾಡಿದ ಸಾಹಿತ್ಯಿಕ ಚರ್ಚೆ. ನಿಮ್ಮ ಮನೆಯಲ್ಲೇ ಕೂತು ಗಂಟಾನು ಗಟ್ಟಲೆ ಮಾತಾಡಿದ ಮಾತು. ಕುಂಟತ್ತಲೇ ಹೋಗಿ ಕಾಫಿ ಬಿಸ್ಕೇಟು ಮಾಡಿ ಕೊಡುತ್ತಿದ್ದೃನ್ನು ನೆನದು ದುಃಖ ಉಮ್ಮಳಿಸಿ ಬರುತ್ತೆ. ಹೋಗಿ ಬನ್ನಿ ಯಾರು ಯಾವೂದು ಶಾಶ್ವತವಲ್ಲ ಎಂದು ಕವಿ ಬಿದಲೋಟಿ ರಂಗನಾಥ್ ನೆನಪಿಸಿಕೊಂಡಿದ್ದಾರೆ.


