ಇತ್ತೀಚಿನ ಸರ್ಕಾರ ಚುನಾವಣಾ ಆಯುಕ್ತರ ನೇಮಕ ಸಮಿತಿಯ ತಿದ್ದುಪಡಿಯಿಂದ ತಮಗೆ ಬೇಕಾದವರನ್ನು ಆಯ್ಕೆ ಮಾಡಿಕೊಳ್ಳುವ ಅಧಿಕಾರ ಪಡೆದಿದೆ. ಅದೇ ರೀತಿ ಒಂದು ತಿಂಗಳ ಕಾಲ ಜೈಲಿನಲ್ಲಿ ಇರುವ ವ್ಯಕ್ತಿಗೆ ಸ್ಪರ್ಧೆಸಲು ಅವಕಾಶ ಇಲ್ಲ ಎಂಬ ನಿಯಮ ಉದ್ದೇಶಪೂರ್ವಕವಾಗಿಯೇ ಕೆಲವರನ್ನು ಅಧಿಕಾರದಿಂದ ದೂರವಿಡಲು ಮಾಡಿದ ತಿದ್ದುಪಡಿಯಾಗಿದೆ ಎಂದು ಹಿರಿಯ ಪತ್ರಕರ್ತ ದಿನೇಶ್ ಅಮೀನ್ ಮಟ್ಟು ತಿಳಿಸಿದರು.
ತುಮಕೂರು ನಗರದ ಕನ್ನಡಭವನದಲ್ಲಿ ಜೆ.ಎಚ್.ಪಟೇಲ್ ಪ್ರತಿಷ್ಠಾನದ ವತಿಯಿಂದ ಜೆ.ಎಚ್.ಪಟೇಲ್ ಅವರ 96ನೇ ಹುಟ್ಟು ಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ವ್ಯವಸ್ಥೆಯ ಸುಧಾರಣೆಯಲ್ಲಿ ನಮ್ಮ ಪಾತ್ರ ಎಂಬ ವಿಷಯ ಕುರಿತು ಉಪನ್ಯಾಸ ನೀಡಿ ಅವರು ಮಾತನಾಡಿದರು.
ಇಂದಿನ ಚುನಾವಣಾ ವ್ಯವಸ್ಥೆಯಲ್ಲಿ ಚುನಾಯಿತ ಪ್ರತಿನಿಧಿಗಳು ಫಲಾನುಭವಿಗಳಾದರೆ, ಸೋತವರು ಮತ್ತು ಮತದಾರರು ಬಲಿಪಶುಗಳು ಎಂಬAತೆ ಆಗಿದೆ. ಚುನಾವಣಾ ಪ್ರವೇಶವೇ ಚುನಾವಣೆ ನೀತಿಯ ಉಲ್ಲಂಘನೆಯಿAದ ಆರಂಭಗೊಳ್ಳುತ್ತಿದೆ. ವಿ.ಎಂ.ಥಾರ್ ಕುಂಟೆ ಅವರು ಸರಕಾರಕ್ಕೆ ಸಲ್ಲಿಸಿದ ಸುಧಾರಣಾ ಶಿಫಾರಸ್ಸುಗಳಲ್ಲಿ ಕೆಲವನ್ನು ಜಾರಿಗೆ ತರಲಾಗಿದೆ. ಆದರೆ ಇತ್ತೀಚಿನ ಸರಕಾರ ಈ ಹಿಂದಿನ ಶಿಫಾರಸ್ಸಿನಂತೆ ಐದು ವರ್ಷ ಶಿಕ್ಷೆಗೆ ಆರ್ಹವಾದಂತಹ ಅಪರಾಧಗಳ ತನಿಖೆ ಎದುರಿಸುತ್ತಿರುವ ವ್ಯಕ್ತಿಗಳಿಗೆ ಸ್ಪರ್ಧೆಗೆ ಅವಕಾಶವಿಲ್ಲ ಎಂಬ ಕಾಯ್ದೆ ತಂದರೆ ಈಗಿರುವ ಎಂ.ಪಿಗಳಲ್ಲಿ ಮತ್ತು ಎಂ.ಎಲ್.ಎಗಳಲ್ಲಿ ಅರ್ಧದಷ್ಟು ಜನಪ್ರತಿನಿಧಿಗಳು ಖಾಲಿಯಾಗಲಿವೆ ಎಂದರು.
ಇದುವರೆಗೂ ಚುನಾವಣೆಯಲ್ಲಿ ಸ್ಪರ್ಧಿಸುವ ಜನಪ್ರತಿನಿಧಿಗಳು ಸಲ್ಲಿಸುವ ಆದಾಯ ಮತ್ತು ಅಪರಾಧ ಪ್ರಕರಣಗಳ ಪ್ರಮಾಣ ಪತ್ರದ ಬಗ್ಗೆ ಇದುವರೆಗು ಐಟಿ, ಇಡಿ ಕ್ರಾಸ್‌ಚೆಕ್ ನಡೆದಿಲ್ಲ. ಮಹಾತ್ಮ ಗಾಂಧಿ ಮತ್ತು ಜೆ.ಪಿ.ನಾರಾಯಣ್ ಇಬ್ಬರು ಒಳ್ಳೆಯ ರಾಜಕಾರಣಿಗಳು, ಆದರೆ ಚುನಾವಣೆಗೆ ಸ್ಪರ್ಧಿಸದೆ ಕೊನೆಯವರೆಗೂ ಜನನಾಯಕರಾಗಿಯೇ ಉಳಿದುಕೊಂಡರು. ವ್ಯವಸ್ಥೆಯ ಸುಧಾರಣೆ ಒಂದು ಚಳವಳಿಯ ರೂಪ ಪಡೆಯಬೇಕು. ಮಾತನಾಡುವುದಕ್ಕಿಂತ ಅನುಸರಿಸುವುದಕ್ಕೆ ಮುಂದಾಗಬೇಕು. ಜನಜಾಗೃತಿಗಿಂತ, ಕಾನೂನಿನ ಮೂಲಕ ಸುಧಾರಣೆಗೆ ಹೆಚ್ಚು ಒತ್ತು ನೀಡಿದಾಗ ಹೆಚ್ಚು ಪರಿಣಾಮಕಾರಿಯಾಗಲಿದೆ. ಹಾಗಾದಾಗ ಮಾತ್ರ ಪ್ರಾಮಾಣಿಕರು ಚುನಾವಣೆಯಲ್ಲಿ ಗೆಲುವು ಸಾಧಿಸಲು ಸಾಧ್ಯ. ಟಿಕೇಟ್ ನೀಡಲು ಜಾತಿ, ಹಣಬಲ, ತೊಳ್ಬಲ, ಗೆಲುವೆ ಮಾನದಂಡ, ಇದು ಪ್ರಜಾಪ್ರಭುತ್ವವನ್ನು ಅಣಕಿಸಿದಂತಾಗುತ್ತದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯೆ ಬಲ್ಕೀಸ್ ಭಾನು, ಜೆ.ಹೆಚ್.ಪಟೇಲ್ ಪ್ರತಿಷ್ಠಾನದ ವ್ಯವಸ್ಥಾಪಕ ಹಾಗೂ ಜೆಡಿಯು ಪಕ್ಷದ ರಾಜ್ಯಾಧ್ಯಕ್ಷ ಮಹಿಮ ಜೆ.ಪಟೇಲ್ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಜಿ ಶಾಸಕ ಎಂ.ಪಿ.ನಾಡಗೌಡ ವಹಿಸಿದ್ದರು. ತುಮಕೂರು ನಗರ ಕ್ಷೇತ್ರದ ಶಾಸಕ ಜಿ.ಬಿ.ಜೋತಿಗಣೇಶ್, ಜೆ.ಹೆಚ್.ಪಟೇಲ್ ಪ್ರತಿಷ್ಠಾನದ ಅಧ್ಯಕ್ಷ ಶೂಲಪಾಣಿ, ಟಿ.ಪ್ರಭಾಕರ್, ಕೆ.ಆರ್.ರಂಗನಾಥ್, ಮುಖಂಡರಾದ ಪರಮೇಶ್, ಆಗ್ನೇಯ ಪದವಿಧರರ ಕ್ಷೇತ್ರದ ಜೆಡಿಯು ಅಭ್ಯರ್ಥಿ ಡಾ.ಕೆ.ನಾಗರಾಜು ಇದ್ದರು.


