ಭಾರತದ ನ್ಯಾಯಾಂಗದ ಗೌರವಕ್ಕೆ ಧಕ್ಕೆಯುಂಟುಮಾಡುವ ರೀತಿಯಲ್ಲಿ ಭಾರತ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರ ಮೇಲೆ ನಡೆದ ಶೂ ಎಸೆದ ಘಟನೆ ಅತ್ಯಂತ ಖಂಡನೀಯ, ನಾಚಿಕೆಗೆಡು ಮತ್ತು ಅಸಭ್ಯ ಕೃತ್ಯ ಎಂದು ಕರ್ನಾಟಕ ರಾಜ್ಯ ವಕೀಲರ ಪರಿಷತ್ ಸದಸ್ಯ ಕೆ.ಕೋಟೇಶ್ವರ ರಾವ್ ಖಂಡಿಸಿದ್ದಾರೆ.
ಭಿನ್ನಾಭಿಪ್ರಾಯಗಳು ಏನೇ ಇರಬಹುದು, ಆದರೆ ಅಸಭ್ಯತೆ, ಹಿಂಸೆ, ಮತ್ತು ಅವಿನಯದ ನಡೆಗಳು ಪ್ರಜಾಪ್ರಭುತ್ವ ಮೌಲ್ಯಗಳಿಗೆ ಹಾಗೂ ಸಂವಿಧಾನದ ಆಶಯಗಳಿಗೆ ವಿರುದ್ಧವಾದವುಗಳು ಎಂದು ಹೇಳಿದ್ದಾರೆ.
ಇಂತಹ ಕೃತ್ಯಗಳು ಕಾನೂನು, ಹಾಗೂ ನ್ಯಾಯಾಂಗದ ಗೌರವವನ್ನು ಮತ್ತು ಘನತೆಯನ್ನು ಹಾಳುಮಾಡುತ್ತವೆ. ಇದು ಕೇವಲ ವ್ಯಕ್ತಿಯ ಮೇಲಿನ ದಾಳಿ ಅಲ್ಲ, ನ್ಯಾಯದ ತತ್ವಗಳಿಗೆ ಎಸಗಿದ ದ್ರೋಹ ಹಾಗೂ ಭಾರತದ ಸಂವಿಧಾನದ ಮೇಲಿನ ನೇರವಾದ ದಾಳಿಯು ಆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಂವಿಧಾನ ಹಾಗೂ ಸಂವಿಧಾನ ಆಶಯಗಳನ್ನು ಅರಿಯದ ತಿಳಿಗೇಡಿ ಮನಸ್ಸಿನ ಹೀನ ಮನುಷ್ಯನ ಈ ಕೃತ್ಯ ಅತ್ಯಂತ ಖಂಡನಿಯವಾದದು. ಈ ಕೃತ್ಯಗಳಿಂದ ಈ ವ್ಯಕ್ತಿ ಹಾಗೂ ಇತನ ಹಿಂದೆ ಇರುವ ಶಕ್ತಿಗಳ ಕೊಮುವಾದಿತನದ ಹಿಂಸೆಯ ಬಣ್ಣ ಬಯಲಾಗಿದೆ ಎಂದು ತಿಳಿಸಿದ್ದಾರೆ.
ಕೂಡಲೇ ಈತನ ಹಾಗೂ ಇತನ ಹಿಂದೆ ಇರುವ ಶಕ್ತಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿ ಶಿಕ್ಷೆ ವಿದಿಸಬೇಕು. ಹಾಗೆಯೇ ಭಾರತಿಯ ವಕೀಲರ ಪರಿಷತ್ತು ಈ ಕೂಡಲೇ ಈತನ ಸನದು ರದ್ದುಗೊಳಿಸಿ ಅಗತ್ಯವಾದ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿದ್ದಾರೆ.


