Thursday, January 29, 2026
Google search engine
Homeಮುಖಪುಟಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿಗೆ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ್ ಸಮ್ಮತಿ

ಅತಿಥಿ ಉಪನ್ಯಾಸಕರ ಸೇವಾ ಸಕ್ರಮಾತಿಗೆ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ್ ಸಮ್ಮತಿ

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಅತಿಥಿ ಉಪನ್ಯಾಸಕರ ಪರವಾಗಿ ವಿಶೇಷ ಕಾನೂನು ನಿಯಮಾವಳಿ ರೂಪಿಸಿ ಯುಜಿಸಿ ಮತ್ತು ನಾನ್ ಯುಜಿಸಿ ಎನ್ನದೆ, ಮಾನವೀಯತೆ ದೃಷ್ಟಿಯಿಂದ ಎಲ್ಲ ಅತಿಥಿ ಉಪನ್ಯಾಸಕರ ಒಳಿತಿಗಾಗಿ ಒಂದು ಬಾರಿ ಸೇವಾ ಸಕ್ರಮಾತಿ ಮಾಡಲು ನಮ್ಮ ಸರ್ಕಾರ ಬದ್ದವಾಗಿದೆ ಎಂದು ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ್ ಭರವಸೆ ನೀಡಿದರು ಎಂದು ಅತಿಥಿ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷ ಡಾ.ಧರ್ಮವೀರ ತಿಳಿಸಿದ್ದಾರೆ.

ಕರ್ನಾಟಕ ರಾಜ್ಯ ಉನ್ನತ ಶಿಕ್ಷಣ ಪರಿಷತ್‌ನಲ್ಲಿ ರಾಜ್ಯ ಸರ್ಕಾರಿ ಪ್ರಧಮ ದರ್ಜೆ ಕಾಲೇಜುಗಳ ಅತಿಥಿ ಉಪನ್ಯಾಸಕರ ಸಮಸ್ಯೆಗಳನ್ನು ಪರಿಹರಿಸುವುದು ಸೇರಿದಂತೆ ಹಲವಾರು ಸಮಸ್ಯೆಗಳನ್ನು ಇತ್ಯರ್ಥಪಡಿಸಲು ಬೆಂಗಳೂರಿನಲ್ಲಿ ಏರ್ಪಡಿಸಿದ್ದ ಸಭೆಯಲ್ಲಿ ಸುದೀರ್ಘವಾಗಿ ಚರ್ಚೆ ನಡೆಸಲಾಯಿತು.

ಎಲ್ಲಾ ಅತಿಥಿ ಉಪನ್ಯಾಸಕರಿಗೂ (ಯುಜಿಸಿ ಅಂಡ್ ನಾನ್ ಯುಜಿಸಿ) ಎನ್ನದೆ ಒಂದು ಬಾರಿ ಸೇವಾ ಸಕ್ರಮಾತಿ ಮಾಡಲು ಕಾನೂನು ನುಯಮಾವಳಿಗಳನ್ನು ರೂಪಿಸುವಂತೆ ಅಡ್ವಕೇಟ್ ಜನರಲ್ ಅವರಿಗೆ ಸಚಿವರು ಸೂಚಿಸಿದ್ದು. 10-15 ವರ್ಷಗಳಿಂದ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವವರಿಗೆ ಮಾನವೀಯ ದೃಷ್ಟಿಯಿಂದ ನ್ಯಾಯ ಒದಗಿಸುವ ಭರವಸೆ ನೀಡಿದರು. 2009ರ ಹಿಂದೆ ಪಡೆದ ಎಂಫಿಲ್ ಪದವಿಯನ್ನು ಪರಿಗಣಿಸಲು ಯುಜಿಸಿಗೆ ಇಲಾಖೆ ಪತ್ರ ಬರೆದಿದ್ದು, ಪತ್ರ ಬಂದ ನಂತರ ನಿರ್ಣಯ ತೆಗೆದುಕೊಳ್ಳುತ್ತೇವೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಸಭೆಯಲ್ಲಿ ಮಾತನಾಡಿ ಎಲ್ಲಾ ಅತಿಥಿ ಉಪನ್ಯಾಸಕರ ಹಿತರಕ್ಷಣೆಗಾಗಿ ಇಲಾಖೆ ಮತ್ತು ಸರ್ಕಾರ ಶ್ರಮಿಸುತ್ತಿದ್ದು ಕಾನೂನು ಸಚಿವರ ಮಾರ್ಗದರ್ಶನದಲ್ಲಿ ಮುಖ್ಯಮಂತ್ರಿಗಳೊAದಿಗೆ ಚರ್ಚಿಸಿ ಸೇವಾ ಸಕ್ರಮಾತಿ ಮಾಡಲು ಬದ್ದರಿದ್ದು, ನಮ್ಮ ಪಕ್ಷದ ಪ್ರಣಾಳಿಕೆಯಲ್ಲಿನ ಭರವಸೆಯಂತೆ ಅತಿಥಿ ಉಪನ್ಯಾಸಕರ ಸೇವೆ ಭದ್ರತೆ ಒದಗಿಸಲು ವಿಶೇಷ ನಿಯಮಾವಳಿಗಳನ್ನು ರೂಪಿಸಿಲಾಗುವುದು ಜೊತೆಗೆ ಇಂದಿನ ಸಭೆ ಫಲಪ್ರದಬಾಗಿದೆ ಎಂದು ತಿಳಿಸಿದರು.

ಇತಿಹಾಸದಲ್ಲೇ ಪ್ರಥಮ ಬಾರಿಗೆ ಅತಿಥಿ ಉಪನ್ಯಾಸಕರ ಸಮಸ್ಯೆಯನ್ನು ಬಗೆಹರಿಸಲು ಕಾನೂನು ಸಚಿವರು, ಶಿಕ್ಷಣ ಸಚಿವರು, ಆಯುಕ್ತರು ಜೊತೆಗೆ ಅಡ್ವಕೇಟ್ ಜನರಲ್ ಸೇರಿ ಸಭೆ ನಡೆಸಿ ಸಮಸ್ಯೆಗಳ ಪರಿಹಾರಕ್ಕೆ ನಾಂದಿ ಹಾಡಿರುವುದು ಹೊಸ ಇತಿಹಾಸ ಸೃಷ್ಟಿಯಾದಂತಾಗಿದೆ. ಇದು ಕಾರ್ಯಗತಗೊಂಡರೆ ಕಾಂಗ್ರೆಸ್ ಪಕ್ಷಕ್ಕೆ ದೀರ್ಘಕಾಲದ ಸಮಸ್ಯೆಯೊಂದಕ್ಕೆ ಶಾಶ್ವತ ಪರಿಹಾರ ಸೂಚಿಸಿದ ಯಶಸ್ಸು ದೊರೆಯುತ್ತದೆ ಎಂದು ಡಾ.ಧರ್ಮವೀರ ತಿಳಿಸಿದರು.

ಸಭೆಯಲ್ಲಿ ಕಾನೂನು ಸಚಿವ ಡಾ.ಎಚ್.ಕೆ.ಪಾಟೀಲ ಮತ್ತು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ಹಾಗೂ ಅಡ್ವೊಕೇಟ್ ಜನರಲ್ ಜಾಕ್‌ವೆಲ್ ಜೊತೆಗೆ ಅತಿಥಿ ಉಪನ್ಯಾಸಕರ ಪರವಾಗಿ ಸುಪ್ರೀಂಕೋರ್ಟ್ನ ಹಿರಿಯ ವಕೀಲ ಎಸ್.ಪಿ.ಕುಲಕರ್ಣಿ, ಆಯುಕ್ತ ಮಂಜುಶ್ರೀ, ಅತಿಥಿಇ ಉಪನ್ಯಾಸಕರ ಸಂಘದ ಜಿಲ್ಲಾಧ್ಯಕ್ಷರು ಭಾಗವಹಿಸಿದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular