ನೋಡಪ್ಪ ಈ ಸರ್ಕಾರ 5 ವರ್ಷ ಬಂಡೆ ಥರಾ ಭದ್ರವಾಗಿರುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕೆಆರ್ ಎಸ್ ಡ್ಯಾಂ ಭರ್ತಿಯಾಗಿರುವ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸುವುದಕ್ಕೂ ಮುನ್ನ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಈ ಮೇಲಿನಂತೆ ನುಡಿದರು.
ನೀವಿಬ್ಬರೂ (ಸಿದ್ದರಾಮಯ್ಯ-ಡಿಕೆಶಿ) ಚನ್ನಾಗಿದ್ದೀರಾ ಎಂಬ ಮಾಧ್ಯಮದವರ ಪ್ರಶ್ನೆಗೆ ನಗುತ್ತಲೇ ಉತ್ತರಿಸಿದ ಸಿದ್ದರಾಮಯ್ಯ ನಾವಿಬ್ಬರು ಚನ್ನಾಗಿಲ್ವಾ, ಚನ್ನಾಗಿದ್ದೇವೆ ಎಂದು ಉಪಮುಖ್ಯಮಂತ್ರಿ ಡಿಕೆ.ಶಿವಕುಮಾರ್ ಕೈಡಿದು ಎತ್ತಿ ಕ್ಯಾಮರಾಗಳಿಗೆ ಪೋಸು ನೀಡಿದರು.
ನಿಮ್ಮಬ್ಬರ ನಡುವೆ ಯಾರಾದರೂ ತಂದಾಕಿದರೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ನಾವು ಯಾರ ಮಾತನ್ನೂ ಕೇಳುವುದಿಲ್ಲ ಎಂದು ನಗುತ್ತಾ ಹೇಳಿದರು.
ಬಿಜೆಪಿ ಮುಖಂಡರು ಸುಳ್ಳ ಹೇಳುವುದರಲ್ಲಿ ನಿಸ್ಸೀಮರು ಎಂದು ಇದೇ ಸಂದರ್ಭದಲ್ಲಿ ತಿಳಿಸಿದರು. ಸರ್ಕಾರ ಪತನವಾಗಲಿದೆ ಎಂದು ಬಿಜೆಪಿ ಮುಖಂಡ ಶ್ರೀರಾಮಲು ಹೇಳಿದ್ದಾರಲ್ಲ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ‘ಅವನು ಎರಡು ಬಾರಿ ಸೋತಿದ್ದಾನೆ. ವಿಧಾನಸಭೆ ಮತ್ತು ಲೋಕಸಭಾ ಚುನಾವಣೆಯಲ್ಲಿ ಸೋತಿಲ್ವಾ? ಅವನು ಹೇಗೆ ಭವಿಷ್ಯ ಹೇಳ್ತಾನೆ ಎಂದು ಹೇಳಿದರು.


