Thursday, January 29, 2026
Google search engine
Homeಮುಖಪುಟಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳಿಲ್ಲ-ಡಾ.ಜಿ.ಪರಮೇಶ್ವರ್ ಸ್ಪಷ್ಟನೆ

ಅಭಿವೃದ್ಧಿ ಕೆಲಸಗಳಿಗೆ ಸರ್ಕಾರದ ಬಳಿ ಹಣ ಇಲ್ಲ ಎಂದು ಹೇಳಿಲ್ಲ-ಡಾ.ಜಿ.ಪರಮೇಶ್ವರ್ ಸ್ಪಷ್ಟನೆ

ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ನಾನು ಹೇಳಲೇ ಇಲ್ಲ. ಅಷ್ಟೊಂದು ಪ್ರಜ್ಞೆ ಇಲ್ವಾ ನನಗೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ಪ್ರಶ್ನಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು ಅಭಿವೃದ್ಧಿ ಯೋಜನೆಗಳಿಗೆ ರಾಜ್ಯ ಸರ್ಕಾರದ ಬಳಿ ಹಣವಿಲ್ಲ ಅದನ್ನು ಕೇಂದ್ರ ಸರ್ಕಾರದ ಬಳಿ ಕೇಳಿ ಎಂದು ಹೇಳಿರುವ ಕುರಿತಂತೆ ಸ್ಪಷ್ಟನೆ ನೀಡಿದರು.

ನಾನು ಹಾಗೆ ಎಲ್ಲಿ ಹೇಳಿದ್ದೇನೆ ಎಂಬುವುದನ್ನು ಬಿಜೆಪಿಯವರು ತಿಳಿಸಲಿ. ಬಾದಾಮಿ ಅಭಿವೃದ್ಧಿ ಹಾಗೂ ಗುಹೆಗಳ ರಕ್ಷಣೆಗೆ 1000 ಕೋಟಿ ಪ್ರಸ್ತಾವನೆ ರೆಡಿ ಮಾಡಿ ಕೇಂದ್ರಕ್ಕೆ ಕಳಿಸಿ ಅಂದೆ. ಅಷ್ಟೊಂದು ದುಡ್ಡು ನಾವು ಕೊಡಲು ಆಗೋದಿಲ್ಲ, ಆ ಪ್ರಸ್ತಾವನೆ ಕೇಂದ್ರಕ್ಕೆ ಕಳಿಸಿ ಅಂದಿದ್ದೆ, ಕೇಂದ್ರವೂ ಕೊಟ್ರೆ ಅ‌ನುಕೂಲ ಆಗುತ್ತೆ ಅಂದಿದ್ದೆ. ಇಷ್ಟೇ ಹೇಳಿದ್ದು, ದುಡ್ಡೇ ಇಲ್ಲ ಅಂತ ನಾನೆಲ್ಲಿ ಹೇಳಿದ್ದೇನೆ? ಎಂದು ಪ್ರಶ್ನಿಸಿದರು.

ನೀರಾವರಿಗೆ, ಅಭಿವೃದ್ಧಿಗೆ ಹಣ ಕೊಟ್ಟಿದೀವಿ, ಗ್ಯಾರಂಟಿಗೊಂದೇ ಕೊಟ್ಟಿಲ್ಲ. ಸರ್ಕಾರದ ಬಳಿ ದುಡ್ಡೇ ಇಲ್ಲ ಅಂತ ಹೇಳ್ತೀನಾ ನಾನು? ಅಷ್ಟು ಪ್ರಜ್ಞೆ ಇಲ್ವಾ ನನಗೆ? ಸರ್ಕಾರದಲ್ಲಿದ್ದುಕೊಂಡು ನಾವು ಆ ರೀತಿ ಎಲ್ಲ ಮಾತಾಡಲು ಸಾಧ್ಯವಿಲ್ಲ, ನಾವು ಹಾಗೆಲ್ಲ ಮಾತಾಡೋದೂ ಇಲ್ಲ ಎಂದು ಬಿಜೆಪಿಗೆ ತಿರುಗೇಟು ನೀಡಿದರು.

ನನಗೆ ವಸ್ತುಸ್ಥಿತಿ ಗೊತ್ತಿದೆ. ನನಗಿಂತ ಚೆನ್ನಾಗಿ ಯಾರಿಗೆ ಅರ್ಥ ಆಗುತ್ತೆ? ಜವಾಬ್ದಾರಿ ಸ್ಥಾನದಲ್ಲಿದ್ದುಕೊಂಡು ನಾವು ಹಾಗೆಲ್ಲ ಮಾತಾಡಲು ಹೋಗೋದಿಲ್ಲ. ರಾಜ್ಯದಲ್ಲಿ ಆರ್ಥಿಕ ಸ್ಥಿತಿ ಸದೃಢವಾಗಿದೆ ಎಂದು ಸಮರ್ಥಿಸಿಕೊಂಡರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular