ಕರ್ನಾಟಕದಲ್ಲಿ ಮೈನಿಂಗ್ ಲಾಬಿ ಎಗ್ಗಿಲ್ಲದೆ ನಡೆಯುತ್ತಿದ್ದು, ಆಂಧ್ರ ಸರಕಾರ ಓಬಳಾಪುರಂ ಗಣಿಗಾರಿಕೆ ನಡೆದಿರುವ ಕರ್ನಾಟಕದಲ್ಲಿ ಎಂದು ಸ್ಪಷ್ಟಪಡಿಸಿದರೂ, ಇದುವರೆಗೂ ಕರ್ನಾಟಕ ಸರಕಾರ ಮೌನಕ್ಕೆ ಶರಣಾಗಿರುವುದನ್ನು ನೋಡಿದರೆ, ಸರಕಾರ, ಪ್ರತಿಪಕ್ಷಗಳೆಲ್ಲವೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗುತ್ತಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಆರೋಪಿಸಿದ್ದಾರೆ.
ತುಮಕೂರಿನಲ್ಲಿ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಗಣಿಗಾರಿಕೆ ವಿರೋಧಿಸಿ ಬಳ್ಳಾರಿಯವರೆಗೂ ಪಾದಯಾತ್ರೆ ನಡೆಸಿದ ಸಿದ್ದರಾಮಯ್ಯ, ಈಗ ಕಣ್ಣುಮುಚ್ಚಿ ಕುಳಿತಿರುವುದು ಹಲವು ಅನುಮಾನಗಳನ್ನು ಹುಟ್ಟು ಹಾಕಿದೆ. ಗಣಿಗಾರಿಕೆಗೆ ಚೌಕಟ್ಟು ವಿಧಿಸಬೇಕಿದ್ದ ಸರಕಾರ, ಅಕ್ರಮ ಗಣಿಗಾರಿಕೆಯನ್ನು ಸಕ್ರಮ ಮಾಡಲು ಮುಂದಾದಂತೆ ಕಾಣುತ್ತಿದೆ. ಅಕ್ರಮ ಗಣಿಗಾರಿಕೆಯಲ್ಲಿ ಪೊಲೀಸ್, ಅರಣ್ಯ, ಕಂದಾಯ, ಪರಿಸರ ಇಲಾಖೆಗಳು ಶಾಮೀಲಾಗಿವೆ ಎಂದು ಆಪಾದಿಸಿದರು.
ಗಣಿಗಾರಿಕೆ ನಡೆಸಲು ಅದರದ್ದೇ ಆದ ನಿಯಮಗಳಿವೆ. ಅವುಗಳ ಪ್ರಕಾರವೇ ಗಣಿಗಾರಿಕೆಗೆ ಅವಕಾಶ ನೀಡಬೇಕು. ರೈತರಿಗೊಂದು ನ್ಯಾಯ, ಗಣಿ ಮಾಲೀಕರಿಗೆ ಒಂದು ನ್ಯಾಯವಲ್ಲ, ಈ ವಿಚಾರದಲ್ಲಿ ಡಿಸಿಯವರಿಗೆ ಭೇಟಿಯಾಗಿ ಮನವಿ ಸಲ್ಲಿಸುತ್ತೇವೆ. ಮುಖ್ಯಮಂತ್ರಿಗಳನ್ನು ಭೇಟಿಯಾಗಿ ಸಮಸ್ಯೆಯನ್ನು ಮನವರಿಕೆ ಮಾಡಿಕೊಡುವ ಕೆಲಸ ಮಾಡಲಾಗುವುದು.
ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ಜಿಲ್ಲಾಧ್ಯಕ್ಷ ಧನಂಜಯಆರಾಧ್ಯ ಮಾತನಾಡಿ, ತುರುವೇಕೆರೆ ತಾಲೂಕು ಕೋಳಗಟ್ಟ ಗ್ರಾಮದ ಸರ್ವೆ ನಂಬರ್ 65 ರಲಿ ್ಲರಾಜೀವ್ ಎಂಬ ವ್ಯಕ್ತಿ 2 ಎಕೆರೆ ಜಾಗವನ್ನು ಕ್ರಷರ್‌ಗೆ ಲೀಸ್ ಪಡೆದು, ಅಕ್ಕಪಕ್ಕದಲ್ಲಿದ್ದ ಸುಮಾರು 8 ಎಕೆರೆ ಸರಕಾರಿ ಗೋಮಾಳ, ಅರಣ್ಯ ಇಲಾಖೆಯ ಜಾಗವನ್ನು ಒತ್ತುವರಿ ಮಾಡಿ ಅಕ್ರಮ ಗಣಿಗಾರಿಕೆ ನಡೆಸುತ್ತಿದ್ದಾರೆ. ಗಣಿಗಾರಿಕೆಯಿಂದ ಧೂಳಿನ ಕಣಗಳು ತೆಂಗು ಮತ್ತು ಅಡಿಕೆ ಇನ್ನಿತರ ಆಹಾರ ಬೆಳೆಗಳ ಮೇಲೆ ಕುಳಿತು, ಇಡೀ ಬೆಳೆ ನಾಶವಾಗುತ್ತಿದೆ. ಈ ಬಗ್ಗೆ ಹಲವಾರು ಬಾರಿ ಮನವಿ ನೀಡಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.
ಈ ಸಂಬAಧ ಮನವಿಯನ್ನು ಎಡಿಸಿ ಡಾ.ಎಸ್.ತಿಪ್ಪೇಸ್ವಾಮಿ ಅವರಿಗೆ ಸಲ್ಲಿಸಿದರು. ಈ ವೇಳೆ ಕರ್ನಾಟಕ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆ ರಾಜ್ಯ ಕಾರ್ಯಾಧ್ಯಕ್ಷ ಭಕ್ತರಹಳ್ಳಿ ಭೈರೇಗೌಡ, ತುರುವೇಕೆರೆ ತಾಲೂಕು ಅಧ್ಯಕ್ಷ ಗಂಗಾಧರಪ್ಪ, ಚಿಕ್ಕನಾಯಕನಹಳ್ಳಿ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ್, ತುಮಕೂರು ಜಿಲ್ಲಾ ಮಹಿಳಾ ಘಟಕದ ಶಶಿಕಲ, ಗುಬ್ಬಿ ಮಹಿಳಾ ಘಟಕದ ಎಸ್.ಕಲ್ಪನಾ ಇದ್ದರು.