Thursday, January 29, 2026
Google search engine
Homeಮುಖಪುಟರಾಜಕೀಯ ಅಧಿಕಾರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ರಾಜಮಾರ್ಗ-ಕೆಎನ್ಆರ್

ರಾಜಕೀಯ ಅಧಿಕಾರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ರಾಜಮಾರ್ಗ-ಕೆಎನ್ಆರ್

ರಾಜಕೀಯ ಅಧಿಕಾರ ಎಲ್ಲಾ ಸಮಸ್ಯೆಗಳಿಗೆ ಪರಿಹಾರ ದೊರಕಿಸುವ ರಾಜಮಾರ್ಗವಾಗಿದ್ದು, ರಾಜಕೀಯ ಅಧಿಕಾರಕ್ಕಾಗಿ ಅವಕಾಶ ವಂಚಿತಲ್ಲ ತಳಸಮುದಾಯಗಳು ಒಗ್ಗೂಡುವ ಅಗತ್ಯವಿದೆ ಎಂದು ಸಹಕಾರ ಸಚಿವ ಕೆ.ಎನ್.ರಾಜಣ್ಣ ತಿಳಿಸಿದರು.

ತುಮಕೂರು ನಗರದ ಎಂಪ್ರೆಸ್‌ ಕೆಪಿಎಸ್ ಶಾಲೆಯ ಸಭಾಂಗಣದಲ್ಲಿ ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ನ ಜಿಲ್ಲಾ ಶಾಖೆ ವತಿಯಿಂದ ಹಮ್ಮಿಕೊಂಡಿದ್ದ ಛತ್ರಪತಿ ಶಿವಾಜಿಯ 398 ನೇ ಜಯಂತೋತ್ಸವ ಸಮಾರಂಭ ಉದ್ಘಾಟಿಸಿ ಮಾತನಾಡಿದ ಅವರು, ಪಿ.ಜಿ.ಆರ್.ಸಿಂಧ್ಯ, ಮೋರೆ ಅವರನ್ನು ಬಿಟ್ಟರೆ ಉಳಿದಂತೆ ಮರಾಠ ಸಮುದಾಯದಲ್ಲಿ ರಾಜಕೀಯ ಧುರೀಣರಿಲ್ಲ. ಹಿಂದೆ ಬೆಳಗಾವಿ ಭಾಗದಿಂದ ಸುಮಾರು ಐದರಿಂದ ಆರು ಮಂದಿ ವಿಧಾನಸಭೆಗೆ ಆಯ್ಕೆಯಾಗುತಿದ್ದರು. ಆದರೆ ಪರಿಸ್ಥಿತಿ ಬದಲಾಗಿದೆ. ರಾಜಕಾರಣದಲ್ಲಿ ಮಾರಾಠಿಗರ ಪ್ರಾತಿನಿಧ್ಯ ಕಡಿಮೆಯಾಗಿದೆ. ಹಾಗಾಗಿ ರಾಜಕೀಯ ಅಧಿಕಾರ ವಂಚಿತ ಎಲ್ಲಾ ಸಮುದಾಯಗಳು ಒಗ್ಗೂಡುವ ಅಗತ್ತವಿದೆ ಎಂದರು.

ಮರಾಠ ಎಂದರೆ ಧೈರ್ಯ, ಸಹಾಸ, ಆತ್ಮಗೌರವಕ್ಕೆ ಹೆಸರು ವಾಸಿಯಾದ ಸಮುದಾಯ. ದೇಶ ಮತ್ತು ರಾಜ್ಯಕ್ಕೆಇವರ ಕೊಡುಗೆ ಅಪಾರ. ಈ ಇತಿಹಾಸವನ್ಬು ನಮ್ಮ ಯುವ ಪಿಳೀಗೆಗೆ ಪರಿಚಯಿಸುವ ಕೆಲಸ ಆಗಬೇಕಿದೆ. ಇತ್ತೀಚಿನ ದಿನಗಳಲ್ಲಿ ರಾಜ್ಯ ಮತ್ತು ರಾಷ್ಟ್ರದಲ್ಲಿ ಸಾಧನೆ ಮಾಡಿದ ಸಮುದಾಯದ ಹಿರಿಯರನ್ನು, ಕಿರಿಯರಿಗೆ ಪರಿಚಯಿಸಿ, ಅವರು ಸಹ ಸಾಧನೆಯತ್ತ ಮುಖ ಮಾಡುವಂತೆ ಪ್ರೋತ್ಸಾಹಿಸುವ ಕೆಲಸವನ್ನು ಮಾಡಬೇಕು. ಹಣ, ಆಸ್ತಿಗಿಂತ ವಿದ್ಯೆಗೆ ಎಲ್ಲಡೆ ಗೌರವವಿದೆ. ಹಾಗಾಗಿ ಮರಾಠ ಸಮುದಾಯದವರು ತಮ್ಮ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ನೀಡಿ, ಅವಕಾಶಗಳನ್ಬು ಸದುಪಯೋಗಪಡಿಸಿಕೊಳ್ಳಲು ಪ್ರೇರೆಪಿಸಬೇಕೆಂದು ಕೆ.ಎನ್.ರಾಜಣ್ಣ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಶಾಸಕರಾದ ಬಿ.ಸುರೇಶಗೌಡ, ಜಿ.ಬಿ.ಜೋತಿಗಣೇಶ್ ಮಾತನಾಡಿದರು. ಲೇಖಕ ಹಾರಿಕ ಮಂಜುನಾಥ್‌ ಛತ್ರಪತಿ ಶಿವಾಜಿ ಕುರಿತು ಉಪನ್ಯಾಸ ನೀಡಿದರು. ಎಸ್.ಸುರೇಶ್ ಸಾಠೆ, ವೇದಿಕೆಯಲ್ಲಿ ಟಿ.ಆರ್.ಸುನೀಲ್‌ಚೌವಾಣ್, ಆರ್.ವೆಂಕಟರಾವ್ ಮರಾಠ ಹಾಸ್ಟಲ್ ಸಮಿತಿ ಅಧ್ಯಕ್ಷ ಟಿ.ಆರ್.ವೆಂಕಟರಾವ್‌ ಚೌವಾಣ್, ಟಿ.ಹೆಚ್.ಜನಾರ್ಧನ್ ಸೋನಾಲೆ, ಗೌರವಾಧ್ಯಕ್ಷ ಆರ್.ನಾಗೇಶರಾವ್‌ ಗಾಯಕವಾಡ್, ಕಾರ್ಯದರ್ಶಿ ಟಿ.ವಿ.ಶ್ರೀನಿವಾಸರಾವ್ ಸಾಳಂಕೆ, ಖಜಾಂಚಿ ಹರೀಶರಾವ್ ಮೋರೆ, ಜಂಟಿ ಕಾರ್ಯದರ್ಶಿ ರಮೇಶರಾವ್ ಸಿಂಧೆ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular