ರಾಜ್ಯ ಸರ್ಕಾರವು ಒಳ ಮೀಸಲಾತಿ ಸಂಬಂಧ ಸರ್ವೆ ಕಾರ್ಯ ಆರಂಭಿಸಲು ಮುಂದಾಗಿದೆ. ಸಮೀಕ್ಷಾ ಕಾರ್ಯದ ಸಂದರ್ಭದಲ್ಲಿ ಜಾತಿ ಕಾಲಂನಲ್ಲಿ ಮಾದಿಗ ಎಂದು ನಮೂದಿಸುವಂತೆ ಆಲನಹಳ್ಳಿ ಮಠದ ಡಾ. ಸಿದ್ದರಾಜು ಸ್ವಾಮೀಜಿ ಕರೆ ನಿಡಿದರು.
ತುಮಕೂರು ನಗರದಲ್ಲಿ ಸಮುದಾಯದ ವಿವಿಧ ಮುಖಂಡರು ಮತ್ತು ಆಸಕ್ತ ಹೋರಾಟಗಾರರೊಂದಿಗೆ ಸಭೆ ನಡೆಸಿದ ನಂತರ ಮಾಧ್ಯಮಗಳಿಗೆ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಮಾದಿಗ ಸಮುದಾಯವು ಸರ್ಕಾರದ ಸೌಲಭ್ಯ ಪಡೆಯಲು ಒಳ ಮೀಸಲಾತಿ ಸಾಕಷ್ಟು ಪ್ರಯೋಜನಕಾರಿಯಾಗಿದೆ, ಆದ್ದರಿಂದ 61ನೇ ಕಾಲಂನಲ್ಲಿ ಮಾದಿಗ ಎಂದು ತಪ್ಪದೆ ನಮೂದಿಸಿ ಎಂದು ಸಮುದಾಯದ ಜನರಲ್ಲಿ ಮನವಿ ಮಾಡಿದರು.
ಮಾದಿಗ ಎಂದು ಬರೆಸಿದಾಗ ಒಗ್ಗಟ್ಟು ಪ್ರದರ್ಶನವಾಗಲಿದೆ. ನಿಯಮಾನುಸಾರ ದೊರೆಯಬೇಕಾದ ಸೌಲಭ್ಯ ಪಡೆಯಲು ಸಾಧ್ಯವಾಗುತ್ತದೆ, ರಾಜಕೀಯ, ಸಾಮಾಜಿಕ, ಶೈಕ್ಷಣಿಕ ಸೌಲಭ್ಯ ಪಡೆಯಲು ಇದರಿಂದ ಅನುಕೂಲವಾಗಲಿದೆ ಎಂದರು.
ನಮ್ಮ ಸಮುದಾಯದ ಹಲವಾರು ಮುಖಂಡರು, ಸ್ವಾಮಿಗಳು, ನಾಯಕರ ಹೋರಾಟದ ಫಲವಾಗಿ ಇಂದು ಒಳಮಿಸಲಾತಿ ಜಾರಿಯಾಗುವ ಹಂತಕ್ಕೆ ಬಂದಿದೆ. ಈ ನಿಟ್ಟಿನಲ್ಲಿ ನಮ್ಮ ಸಮುದಾಯ ಒಗ್ಗಟ್ಟಾಗಿ ಮುಂದೆ ಸಾಗಬೇಕಿದೆ, ಜೊತೆಗೆ ಸರ್ವೆ ಕಾರ್ಯದ ವೇಳೆ ಯಾವುದೇ ತಪುö್ಪ ಮಾಡದೆ ನಮ್ಮ ಜಾತಿ ನಮೂದಿಸಿ ಸೌಲಭ್ಯ ಪಡೆಯುವ ನಿಟ್ಟಿನಲ್ಲಿ ನಾವೆಲ್ಲ ಸಾಗೋಣ ಎಂದು ಕರೆ ನೀಡಿದರು.
ತುಮಕೂರು ಸಮೃದ್ಧಿ ಶಿಕ್ಷಣ ಟ್ರಸ್ಟ್ ಅಧ್ಯಕ್ಷ ಬೆಳಗುಂಬ ವೆಂಕಟೇಶ್ ಮಾತನಾಡಿ, ಮಾದಿಗ ಬಂಧುಗಳು ಸ್ವಾಮೀಜಿ ತಿಳಿಸಿದಂತೆ ಜಾತಿ ಕಾಲಂನಲ್ಲಿ ಮಾದಿಗ ಎಂದು ನಮೂದಿಸುವ ಮೂಲಕ ಸರ್ವೆ ಕಾರ್ಯಕ್ಕೆ ಸಹಕಾರ ನೀಡಬೇಕಿದೆ. ಸಮೀಕ್ಷೆಯ ವೇಳೆ ಅನಗತ್ಯವಾಗಿ ಜಾತಿಯ ಬಗ್ಗೆ ತಪುö್ಪ ಬರೆದರೆ ಮುಂದೆ ಸಂಕಷ್ಟಕ್ಕೆ ಸಿಲುಕಬೇಕಾಗುತ್ತದೆ. ಅಲ್ಲದೆ ಮುಂದಿನ ದಿನಗಳಲ್ಲಿ ಸರ್ಕಾರದ ಸೌಲಭ್ಯಗಳನ್ನಾಗಲೀ, ಯಾವುದೇ ಸ್ಥಾನಮಾನ ಪಡೆಯಲು ಸಾಧ್ಯವಾಗುವುದಿಲ್ಲ. ಆದ್ದರಿಂದ ಎಚ್ಚರದಿಂದ ಮಾದಿಗ ಎಂದು ನಮೂದಿಸಿ ಎಂದು ಮನವಿ ಮಾಡಿದರು.
ಯಾವುದೇ ಕಾರಣಕ್ಕೂ ಆದಿ ಕರ್ನಾಟಕ, ಆದಿ ದ್ರಾವಿಡ ಇತ್ಯಾದಿ ಜಾತಿ ಸೂಚಕವಲ್ಲದ ಪದಗಳನ್ನು ಬರೆಸದೆ ಮಾದಿಗ ಎಂದು ತಪ್ಪದೇ ಬರೆಸಬೇಕು. ಯಾವುದೇ ಹಿಂಜರಿಕೆ ಇಲ್ಲದೆ ಸಮೀಕ್ಷೆಯಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಮುಖಂಡರಾದ ನಂಜುAಡಯ್ಯ ಯಲ್ಲಾಪುರ, ನರಸಿಂಹರಾಜು, ನಾಗರಾಜು, ಹರೀಶ್ ಬೈರಸಂದ್ರ, ಸುನಿಲ್, ನಾಗರಾಜು, ಕುಮಾರ್, ನಾಗರಾಜ ಇತರರು ಇದ್ದರು.


