ಬಹುಮುಖಿ ಗೆಳೆಯರ ಬಳಗದ ವತಿಯಿಂದ ತುಮಕೂರಿನ ಕನ್ನಡ ಭವನದಲ್ಲಿ ಡಾ.ಅಮ್ಮಸಂದ್ರ ಸುರೇಶ್ ಬರೆದಿರುವ ನಾಲ್ಕು ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಏಪ್ರಿಲ್ 27ರಂದು ಬೆಳಗ್ಗೆ 10.30ಗಂಟೆಗೆ ಏರ್ಪಡಿಸಲಾಗಿದೆ.
ಕೃತಿಗಳ ಲೋಕಾರ್ಪಣೆಯನ್ನು ವಿಶ್ರಾಂತ ಕುಲಪತಿ ಹೀ.ಚಿ.ಬೋರಲಿಂಗಯ್ಯ ಮಾಡುವರು. ಜಿಲ್ಲಾ ಕಸಾಪ ಅಧ್ಯಕ್ಷ ಕೆ.ಎಸ್.ಸಿದ್ದಲಿಂಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಹಿರಿಯ ಸಾಹಿತಿ ಪ್ರೊ.ಕಾಳೇಗೌಡ ನಾಗವಾರ, ಹಂಪಿ ಕನ್ನಡ ವಿವಿಯ ಹಿರಿಯ ಪ್ರಾಧ್ಯಾಪಕ ಪ್ರೊ.ಎನ್.ಚಿನ್ನಸ್ವಾಮಿ ಸೋಸಲೆ, ಸಮಾಜ ಸೇವಕಿ ಜಯಲಕ್ಷ್ಮಮ್ಮ, ಲೇಖಕಿ ಬಾ.ಹ.ರಮಾಕುಮಾರಿ, ಪತ್ರಕರ್ತ ಸಾ.ಚಿ.ರಾಜಕುಮಾರ ಭಾಗವಹಿಸುವರು.
ಕೃತಿಗಳ ಕುರಿತು ಸಿದ್ದಾರ್ಥ ಮಾಧ್ಯಮ ಅಧ್ಯಯನ ಕೇಂದ್ರದ ನಿರ್ದೇಶಕ ಡಾ. ಬಿ.ಟಿ.ಮುದ್ದೇಶ್ ಮಾತನಾಡುವರು.
ಕೃತಿಗಳ ಲೇಖಕ ಡಾ.ಅಮ್ಮಸಂದ್ರ ಸುರೇಶ್, ಸಾಹಿತಿ ಹಡವನಹಳ್ಳಿ ವೀರಣ್ಣಗೌಢ, ಪತ್ರಕರ್ತ ದಂಡಿನಶಿವರ ಮಂಜುನಾಥ್ ಪಾಲ್ಗೊಳ್ಳುವರು. ಬಹುಮುಖಿ ಗೆಳೆಯರ ಬಳಗದ ಎಂ.ವೈ.ಗಂಗಣ್ಣ, ಎಂ.ಎಸ್.ಜಯಣ್ಣ, ದೇವರಾಜು ಸಿದ್ದಾಪುರ, ಇ.ಶಿವಣ್ಣ, ಚಂದ್ರಶೇಖರ್, ಡಿ.ಟಿ.ಶ್ರೀನಿವಾಸ್ ಅವರಿಂದ ಗೀತ ಗಾಯನವಿದೆ.


