ಆಗಸ್ಟ್ 26ರಂದು ಸಂಜೆ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿ ಉಗ್ರರು ನಡೆಸಿದ ಅವಳಿ ಬಾಂಬ್ ಸ್ಪೋಟದಲ್ಲಿ 103 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಗಳು ತಿಳಿಸಿವೆ. ಮೃತರಲ್ಲಿ 13 ಮಂದಿ ಅಮೆರಿಕಾ ಸೈನಿಕರು ಸೇರಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದ ಹೊರಗೆ ಗುರುವಾರ ಸಂಜೆ ಎರಡು ಸ್ಫೋಟಗಳು ಸಂಭವಿಸಿದ್ದು ಜನ ಭಯಭೀತರಾಗಿದ್ದಾರೆ. ವಿದೇಶಿ ಪಡೆಗಳು ಮಂಗಳವಾರದ ಒಳಗೆ ಕಾಬೂಲ್ ತೊರೆಯದಿದ್ದರೆ ಮತ್ತೊಂದು ದಾಳಿ ನಡೆಯಲಿದೆ ಎಂಬ ಎಚ್ಚರಿಕೆಯನ್ನು ಉಗ್ರರು ನೀಡಿದ್ದಾರೆ ಎಂದು ಅಮೆರಿಕಾ ಹೇಳಿದೆ.
ಕಾಬೂಲ್ ನಲ್ಲಿ ಅಮೆರಿಕನ್ ಪ್ರಜೆಗಳ ರಕ್ಷಣಾ ಕಾರ್ಯ ಮುಂದುವರಿದಿದೆ. ಅಮೆರಿಕಾ ಪಡೆಗಳು ಕೂಡ ಅಲ್ಲಿಂದ ತನ್ನ ದೇಶಕ್ಕೆ ತೆರಳಲು ಸಜ್ಜಾಗಿವೆ. ಉಗ್ರರ ನಿಯೋಜಿತ ದಾಳಿಯ ಬಗ್ಗೆ ಮುನ್ಸೂಚನೆ ನೀಡಿರುವ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಜನರ ರಕ್ಷಣೆಗೆ ಬದ್ದವಾಗಿದೆ ಎಂದು ಹೇಳಿದರು.
“ನಾವು ಕ್ಷಮಿಸುವುದಿಲ್ಲ. ನಾವು ಮರೆಯುವುದಿಲ್ಲ. ನಾವು ನಿಮ್ಮನ್ನು ಬೇಟೆಯಾಡಿ ಹಣ ಪಾವತಿಸುವಂತೆ ಮಾಡುತ್ತೇವೆ ಎಂದು ಬೈಡೆನ್ ಎಚ್ಚರಿಕೆ ನೀಡಿದ್ದಾರೆ.
ಈವರೆಗೆ 1 ಲಕ್ಷ ಜನರನ್ನು ಕಾಬೂಲ್ ನಿಂದ ಸ್ಥಳಾಂತರಿಸಲಾಗಿದೆ. 1 ಸಾವಿರ ಅಮೆರಿಕನ್ನರು ಮತ್ತು ಸಾವಿರಾರು ವಿದೇಶಿಯರನ್ನು ವಿಮಾನದ ಮೂಲಕ ಬೇರೆ ಬೇರೆ ಕಡೆ ರವಾನಿಸಲಾಗಿದೆ. ಜೊತೆಗೆ ಕಾಬೂಲ್ ವಿಮಾನ ನಿಲ್ದಾಣದಲ್ಲಿರುವ ಜನರು ತಮ್ಮ ದೇಶಗಳಿಗೆ ಹಿಂದಿರುಗಲು ಹರಸಾಹಸಪಡುತ್ತಿದ್ದಾರೆ.
ಕಾಬೂಲ್ ವಿಮಾನ ನಿಲ್ದಾಣದಲ್ಲಿನ ಅವ್ಯವಸ್ಥೆ ನೋಡಿದಾಗ ಸಾವಿರಾರು ಮಂದಿ ಆಫ್ಘನ್ನರು ತಾಲಿಬಾನ್ ನಿಯಂತ್ರಿತ ದೇಶದಿಂದ ಏರ್ ಲಿಫ್ಟ್ ನ ಇಳಿಜಾರಿನಲ್ಲಿ ಪಲಾಯಾನ ಮಾಡಲು ಪ್ರಯತ್ನಿಸಿದರು. ಬೋಸ್ನಿಯಾ ವಲಸಿಗರ ಶಿಬಿರದಲ್ಲಿ ಮನೆಯಿಂದ ಸಾವಿರಾರು ಮೈಲುಗಳಷ್ಟು ದೂರದಲ್ಲಿ ಸಿಲುಕಿಕೊಂಡಿದ್ದಾರೆ. ಹೇಗಾದರೂ ಮಾಡಿ ಪಶ್ಚಿಮ ಯೂರೋಪನ್ನ ತಲುಪುವ ಯತ್ನದಲ್ಲಿದ್ದಾರೆ ಎಂದು ಅವದ್ ಖಾನ್ ಹೇಳಿದ್ದಾರೆ.
ಆಫ್ಘಾನಿಸ್ತಾನದಲ್ಲಿ ಪರಿಸ್ಥಿತಿ ತುಂಬ ಕೆಟ್ಟದಾಗಿದೆ. ಆದ್ದರಿಂದ ಪ್ರತಿಯೊಬ್ಬ ಜನರು ಇಲ್ಲಿಂದ ಹೊರಗೆ ಹೋಗಲು ಬಯಸುತ್ತಾರೆ. ಉತ್ತಮ ಭವಿಷ್ಯ ಮತ್ತು ಜೀವನ ರೂಪಿಸಿಕೊಳ್ಳಲು ಬಯಸುತ್ತಿದ್ದಾರೆ ಎಂದು ಖಾನ್ ಹೇಳಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ತಿಳಿಸಿದೆ.