Sunday, April 20, 2025
Google search engine
Homeಮುಖಪುಟಲಾರಿ ಮುಷ್ಕರಕ್ಕೆ, ಜಿಲ್ಲಾ ಟ್ರಕ್ ಲಾರಿ ಮಾಲೀಕರ ಸಂಘ ಬೆಂಬಲ

ಲಾರಿ ಮುಷ್ಕರಕ್ಕೆ, ಜಿಲ್ಲಾ ಟ್ರಕ್ ಲಾರಿ ಮಾಲೀಕರ ಸಂಘ ಬೆಂಬಲ

ರಾಜ್ಯ ಸರ್ಕಾರ ಅಕ್ಷರಶಃ ಲೂಟಿಗೆ ಇಳಿದಿದೆ. ರಾಜ್ಯ ಹೆದ್ದಾರಿಗಳಲ್ಲಿ ಅವೈಜ್ಞಾನಿಕ ಟೋಲ್ ಸಂಗ್ರಹಿಸುತ್ತಿದೆ. ಅನೇಕ ಆರ್‌ಟಿಒ ಚೆಕ್ ಪೋಸ್ಟ್ ಗಳು ಕೋಟ್ಯಂತರ ಹಣವನ್ನು ಸರ್ಕಾರದ ಪರವಾಗಿ ಅಧಿಕಾರಿಗಳು ಲೂಟಿ ಮಾಡುತ್ತಿದ್ದಾರೆ. ಸರ್ಕಾರಕ್ಕೆ ಲಾರಿಗಳ ಸಂಚಾರದಿಂದ ಶೇ. 35ರಷ್ಟು ತೆರಿಗೆ ಸಂಗ್ರಹವಾಗುತ್ತಿದೆ. ಆದರೂ ಕೂಡಾ ಲಾರಿ ಮಾಲೀಕರ ಮತ್ತು ಚಾಲಕರ ಹಿತ ಕಾಪಾಡಲು ಮುಂದೆ ಬರುತ್ತಿಲ್ಲ ಎಂದು ಲಾರಿ ಮಾಲೀಕರ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಮುಜಾಬಿಲ್ ಪಾಷಾ ಆಕ್ರೋಶ ವ್ಯಕ್ತಪಡಿಸಿದರು.

ತುಮಕೂರು ನಗರದ ಜಿಲ್ಲಾಧಿಕಾರಿ ಕಚೇರಿ ಎದುರು ಜಿ.ಆರ್ ಷಣ್ಮುಗಪ್ಪ ನೇತೃತ್ವದಲ್ಲಿ ರಾಜ್ಯಾದ್ಯಂತ ನಡೆಯುತ್ತಿರುವ ಲಾರಿ ಮುಷ್ಕರಕ್ಕೆ, ಜಿಲ್ಲಾ ಟ್ರಕ್ ಲಾರಿ ಮಾಲೀಕರ ಸಂಘದಿಂದ ಬೆಂಬಲ ವ್ಯಕ್ತಪಡಿಸಿ ಅವರು ಮಾತನಾಡಿದರು. ರಾಜ್ಯ ರಸ್ತೆಗಳಿಗೆ ಬಣ್ಣ ಬಳಿದು ಟೋಲ್ ಸಂಗ್ರಹವನ್ನು ಸ್ಥಳೀಯ ಪುಢಾರಿಗಳಿಗೆ ವಹಿಸಿದ್ದಾರೆ. 18 ರಸ್ತೆಗಳಿಗೆ ದರ ವಿಧಿಸಿದ್ದಾರೆ. ಅಲ್ಲದೇ ಕಮರ್ಶಿಯಲ್ ಟ್ಯಾಕ್ಸ್ ಚೆಕ್ ಪೋಸ್ಟ್ ಗಳು 1028 ಕಡೆ ಇವೆ. ಗಡಿ ಠಾಣೆಗಳು ಲಾರಿ ಮಾಲೀಕರ ರಕ್ತ ಹೀರುತ್ತಿವೆ. ಈ ಅನ್ಯಾಯ, ದೌರ್ಜನ್ಯ ತಡೆಯಬೇಕಾದ ಸರ್ಕಾರ ಮತ್ತೆ ತೈಲ ಬೆಲೆ ಏರಿಸುವ ಮೂಲಕ ಬರೆ ಎಳೆದಿದೆ ಎಂದು ದೂರಿದರು.

ಲಾರಿ ಮಾಲೀಕರು ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದ್ದಾರೆ. ಕಳೆದ ಆರು ತಿಂಗಳಲ್ಲಿ ಐದು ರೂ. ಡಿಸೇಲ್ ಬೆಲೆ ಹೆಚ್ಚಳವಾಗಿದೆ. ಇಂದಿನ ಪೈಪೋಟಿಯಲ್ಲಿ ನಾವು ತಕ್ಷಣವೇ ಬಾಡಿಗೆ ರೂಪದಲ್ಲಿ ಹೆಚ್ಚಳ ಮಾಡಲು ಸಾಧ್ಯವಿಲ್ಲ. ರಾಜ್ಯ ಸರಕಾರದ ನೀತಿಗಳಿಂದ ಸುಮಾರು ಆರು ಲಕ್ಷ ಲಾರಿಗಳ ಮಾಲೀಕರು ಮತ್ತು ಅವರ ಅವಲಂಬಿತರು ಬೀದಿಗೆ ಬೀಳುವುದು ಖಚಿತವಾಗಿದೆ ಎಂದರು.

ಸೆಸ್ ಸಂಗ್ರಹಿಸುವ ಮೂಲಕ ಲಾರಿ ಚಾಲಕರ ಕಲ್ಯಾಣಕ್ಕಾಗಿ ರೂ.300 ಕೋಟಿ ಸಂಗ್ರಹ ಮಾಡಲಾಗಿದೆ. ಅವರಿಗೆ ನಿವೃತ್ತಿ ವೇತನ ನೀಡುವ ಮೂಲಕ ಮಾನವೀಯತೆ ಮೆರೆಯಬೇಕಿದೆ. ಈ ನಿಟ್ಟಿನಲ್ಲಿ ನಿರಂತರ ಒತ್ತಡ ಹೇರಲಾಗುತ್ತಿದೆ ಎಂದು ಹೇಳಿದರು. ಲಾರಿ ಮಾಲೀಕರ ಸಮಸ್ಯೆಗಳು ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಬಜೆಟ್ ಪೂರ್ವ ಸಭೆಯಲ್ಲಿಯೇ ಗಮನಕ್ಕೆ ತಂದಿದ್ದೇವೆ. ಆದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸಾರಿಗೆ ಇಲಾಖೆ ಅಧಿಕಾರಿಗಳಂತೂ ಯಾರ ಅಂಕೆಗೂ ಸಿಗದೇ ಭ್ರಷ್ಟಾಚಾರ ಎಸಗುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಲಾರಿ ಮಾಲೀಕರ ಹಿತ ಕಾಯಲು ಮಹಾರಾಷ್ಟçದಲ್ಲಿ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ಎಲ್ಲ ಗಡಿ ಠಾಣೆಗಳು, ಸುಂಕ ವಸೂಲಿ ಕೇಂದ್ರಗಳನ್ನು ಬಂದ್ ಮಾಡಿಸಿದ್ದಾರೆ. ಅಲ್ಲದೇ ರಾಜ್ಯ ಹೆದ್ದಾರಿಗಳಲ್ಲಿ ಟೋಲ್‌ಗಳನ್ನು ರದ್ದು ಮಾಡಿದ್ದಾರೆ. ಅದೇ ಮಾದರಿಯನ್ನು ರಾಜ್ಯದಲ್ಲಿ ತರಬೇಕು ಎಂದು ಒತ್ತಾಯಿಸಿದರು.

ಮುಷ್ಕರದಲ್ಲಿ ಕಾರ್ಯದರ್ಶಿ ಪರ್ವೀಜ್, ನಿರ್ದೇಶಕರುಗಳಾದ ಚಂದ್ರಶೇಕರ್, ರಘು, ಮೊಹಮ್ಮದ್ ಫೈರಾಜ್, ಕಲ್ಲೇಶ್, ಅಫ್ಜಲ್ಇ, ಜಬೀರ್ಊ, ಜಫರುಲ್ಲ ಖಾನ್, ವಹೀದ್, ನದೀಮ್, ಹಿಬ್ಜುರ್ಒ, ಮೊಹಮ್ಮದ್ ರಫೀಕ್, ಶಬೀರ್, ನವಾಜ್ ರೆಹಮಾನ್, ಕೃಷ್ಣಮೂರ್ತಿ ಇದ್ದರು.

RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular